ಸೈನ್ಯಕ್ಕೆ ಸೇರಲು ನಾ ಪಟ್ಟ ಸಾಹಸಗಳು

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಂಡಾಯವೆದ್ದು ದೇಶಾದ್ಯಂತ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾಳು ಮಾಡಿದಾಗ, ಅಗ್ನಿಪಥ್ ಯೋಜನೆ ಫಲಾಫಲಗಳೇನು? ಅದು ಯುವಕರಿಗೆ ಹೇಗೆ ಪ್ರಯೋಜನವಾಗುತ್ತದೆ ಎಂಬುದರ ಸಂಪೂರ್ಣ ವಿವರಗಳನ್ನು ತಿಳಿಸಿದಾಗ, ಓದುಗರೊಬ್ಬರು, ನಿಮಗೆ ಸೈನಿಕ ಎಂದರೆ ಏನು ಗೊತ್ತಾ? ನೀವ್ಯಾಕೆ ಸೈನಿಕರಾಗಿಲ್ಲ? ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಏಕೆ ಸೇರಿಸಿಲ್ಲ? ಎಂಬ ಅಕ್ಷೇಪ ಎತ್ತಿದ್ದರು. ಹಾಗಾಗಿ ನಾನು ಯೌವನಾವಸ್ಥೆಯಲ್ಲಿದ್ದಾಗ ಸೈನ್ಯಕ್ಕೆ ಸೇರಲು ನಾನು ಮಾಡಿದ ಸಾಹಸಗಳ ಪರಿಯ  ಮೋಜಿನ… Read More ಸೈನ್ಯಕ್ಕೆ ಸೇರಲು ನಾ ಪಟ್ಟ ಸಾಹಸಗಳು

ಪರಿಸರದ ರಕ್ಷಣೆ

ಸಾಧಾರಣವಾಗಿ ಕೆಲವು ವಯಸ್ಸಾದವರನ್ನು ಭೇಟಿ ಮಾಡಿ. ನಮಸ್ಕಾರ ಹೇಗಿದ್ದೀರೀ? ಎಂದು ಪ್ರಶ್ನೆ ಮಾಡಿದರೆ ಸಾಲು. ಬಹುತೇಕರು, ಈ ಏನಪ್ಪಾ ಹೇಳೋದು? ಈಗೆಲ್ಲಾ ಕಾಲ ಕೆಟ್ಟು ಹೋಗಿದೆ. ನಮ್ಮ ಕಾಲದಲ್ಲಿ  ಹೇಗಿತ್ತು ಗೊತ್ತಾ? ಎಂಬ ರಾಗವನ್ನು ಎಳೆಯುತ್ತಾರೆ. ಆದರೆ ನಿಜ ಹೇಳಬೇಕು ಎಂದರೆ ಕಾಲ ಖಂಡಿತವಾಗಿಯೂ ಕೆಟ್ಟಿಲ್ಲ, ನಮ್ಮ ದೈನಂದಿನದ ರೂಢಿಯನ್ನು ಅತ್ಯಂತ ಹೀನಾಮಾನವಾಗಿ ಕೆಡಿಸಿರುವದರಿಂದಲೇ ಎಲ್ಲವೂ ಅಯೋಮಯವಾಗಿದೆ ಎಂದರೆ ತಪ್ಪಾಗದು. ಇತ್ತೀಚಿಗೆ ವ್ಯಾಟ್ಸಪ್ಬಲ್ಲಿನ ಓದಿದ  ಈ ಬರಹ ಪ್ರಸ್ತುತ ವಿಕ್ಷುಬ್ಧತೆಗೆ ಹೇಳಿಮಾಡಿಸಿದಂತಿದ್ದು ಅದರ ಸಾರಾಂಶ ಈ ರೀತಿಯಾಗಿದೆ.… Read More ಪರಿಸರದ ರಕ್ಷಣೆ

ಮಹಾ ಅಘಾಡಿ, ಲಗಾಡಿ

ಕಳೆದ ಒಂದು ತಿಂಗಳಿನಿಂದಲೂ ಮಹಾರಾಷ್ಟ್ರದ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಆಗುತ್ತಿರುವ ಬದಲಾವಣೆಯನ್ನು ಇಡೀ ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ವಿರೋಧ ಪಕ್ಷಗಳು ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರ ವಿರೋಧ ಪಕ್ಷವನ್ನು ಧಮನ ಮಾಡುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಅಬ್ಬಿರಿದು ಬೊಬ್ಬಿರಿಯುತ್ತಿರುವುದನ್ನು ಪ್ರತಿಯೊಂದು ಮಾಧ್ಯಮದಲ್ಲೂ ಕಾಣಬಹುದಾಗಿದೆ. ಆದರೆ ಈ ರೀತಿಯ ಕ್ಷಿಪ್ರಕ್ರಾಂತಿ ಕೇವಲ ಒಂದು ದಿನ ಅಥವಾ ಒಂದು ಸಂಧರ್ಭದಿಂದ ಆಗದೇ ಇದರ ಹಿಂದೆ ಹತ್ತಾರು ವಿಷಯಗಳು ಅಡಕವಾಗಿರುತ್ತದೆ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. 2019ರ ಅಕ್ಟೋಬರ್… Read More ಮಹಾ ಅಘಾಡಿ, ಲಗಾಡಿ

ಶ್ರೀಮತಿ ದ್ರೌಪದಿ ಮುರ್ಮು

ನಮ್ಮ ಭಾರತ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಒಂದು ರೀತಿಯ ಅಧ್ಯಕ್ಷ ಪದವಿಯನ್ನು ಹೊಂದಿರುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತೀಯ ಮೂರೂ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್) ದಂಡನಾಯಕರಾಗಿದ್ದು, ಸಂಸತ್ತಿನ ಉಭಯ ಸಭೆಗಳಲ್ಲಿ ಬಹುಮತದಿಂದ ರೂಪಿಸಲ್ಪಟ್ಟ ಹೊಸಾ ಮಂಡಿಸಲ್ಪಟ್ಟ ಮಸೂದೆಗಳು ರಾಷ್ಟ್ರಪತಿಗಳ ಅಂಗೀಕಾರದ ನಂತರವೇ ಅಧಿಕೃತವಾದ ಕಾನೂನಾಗಿ ಜಾರಿಗೆ ತರಲ್ಪಡುತ್ತದೆ. ಇಂತಹ ರಾಷ್ಟ್ರಪತಿಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸಾಂಸದರು ಮತ್ತು ದೇಶದ ಎಲ್ಲಾ ರಾಜ್ಯಗಳ ಮತ್ತು ಪ್ರಾಂತ್ಯಗಳ ವಿಧಾನಸಭೆಯ ಶಾಸಕರು… Read More ಶ್ರೀಮತಿ ದ್ರೌಪದಿ ಮುರ್ಮು

ವಿದ್ಯಾರಣ್ಯಪುರದ 2022ರ ಯೋಗ ದಿನಾಚರಣೆ

ಎಂಟು ವರ್ಷಗಳ ಹಿಂದೆ 2014ರಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ಯೋಗದ ಈ ಯೋಗದ ಉಪಯುಕ್ತತೆಯನ್ನು ತಿಳಿಸಿ, ಅದರ ಸದುಪಯೋಗವನ್ನು ಇಡೀ ವಿಶ್ವವೇ ಸದ್ಬಳಿಕೆ ಮಾಡಿಕೊಳ್ಳುವ ಹಾಗೆ ಕಾರ್ಯಕ್ರಮವನ್ನು ರೂಪಿಸುವ ಬಗ್ಗೆ ಪ್ರಸ್ತಾಪನೆ ಮಾಡಿದಕ್ಕೆ ಸುಮಾರು 140ಕ್ಕೂ ಹೆಚ್ಚು ರಾಷ್ಟ್ರಗಳೂ ಒಕ್ಕೊರಿಲಿನಿಂದ ಬೆಂಬಲಿಸಿದ ಪರಿಣಾಮವಾಗಿಯೇ ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು. ಇದರ ಭಾಗವಾಗಿಯೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಬೆಂಗಳೂರು ಆಶ್ರಯದಲ್ಲಿ ವಿದ್ಯಾರಣ್ಯಪುರದಲ್ಲೂ ಸತತವಾಗಿ 5 ವರ್ಷಗಳ ಕಾಲ ನಿರಂತರವಾಗಿ ಬಹಳ… Read More ವಿದ್ಯಾರಣ್ಯಪುರದ 2022ರ ಯೋಗ ದಿನಾಚರಣೆ

ಅಗ್ನಿಪಥ್  ಮತ್ತು ಅಗ್ನಿ ಹಚ್ಚುವವರು

18 ರಿಂದ 22 ವರ್ಷಗಳ ನಡುವಿನ ಯುವ ಜನತೆಯ ಮನಸ್ಸು ಒಂದು ರೀತಿಯ ಮರ್ಕಟ ಮನಸ್ಸು ಎಂದೇ ಹೇಳಲಾಗುತ್ತದೆ. ಈ ವಯಸ್ಸಿನ ಬಹುತೇಕ ಮಕ್ಕಳಿಗೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಅರಿವಿರದೇ ಅಡ್ಡದಾರಿಗಳನ್ನು ಹಿಡಿಯುವ ಸಂಭವವೇ ಹೆಚ್ಚಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇಂದಿನ ಯುವ ಜನತೆಗೆ ಈ ದೇಶದ ಬಗ್ಗೆ ಅಭಿಮಾನವೇ ಇಲ್ಲಾ ರಾಷ್ಟ್ರೀಯತೆಯಂತೂ ಇಲ್ಲವೇ ಇಲ್ಲಾ ಎಂದು ಹೇಳುವವರಿಗೇನೂ ಕಡಿಮೆ ಇರಲಿಲ್ಲ. ಇಂತಹ ಸಮಸ್ಯೆಗಳಿಗಾಗಿಯೇ ಕೇಂದ್ರ ಸರ್ಕಾರ ಮತ್ತು ಭಾರತೀಯ ರಕ್ಷಣಾ… Read More ಅಗ್ನಿಪಥ್  ಮತ್ತು ಅಗ್ನಿ ಹಚ್ಚುವವರು

ರಾಷ್ಟ್ರೀಯತೆ ವಿವಿಧತೆಯಲ್ಲಿ ಏಕತೆ

ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದಲ್ಲಿ ನಡೆಯುತ್ತಿದ್ದ ಧರ್ಮ ದಂಗಲ್, ಗ್ಯಾನವ್ಯಾಪಿ ಮಸೀದಿಯಿಂದ ದೇಶವ್ಯಾಪಿಯಾಗಿ ಹರಡಿ ಹತ್ತಾರು ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧ ತಿರುಗಿ ಬಿದ್ದಾಗಲೂ ಇಲ್ಲಿನ ಮುಸಲ್ಮಾನರು ದೇಶದ ಪರ ಚಕಾರವೂ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಪರೋಕ್ಷವಾಗಿ ಮುಸಲ್ಮಾನ ದೇಶಗಳ ಪರ ನಿಂತದ್ದರಿಂದ ಬೇಸರಿಸಿಕೊಂಡ ಆತ್ಮೀಯ ಮಿತ್ರರೊಬ್ಬರು, ಜಗತ್ತಿನ ಎಲ್ಲ ಮುಸ್ಲಿಮ್ ದೇಶಗಳು ಭಾರತದ ವಿರುದ್ಧ ನಿಂತಾಗ, ಭಾರತೀಯ ಮುಸ್ಲಿಮರು ಭಾರತದ ಪರ ನಿಲ್ಲುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಹಾಗಾಗಿ ಈ ಮತಾಂಧರರ ಬಗ್ಗೆ… Read More ರಾಷ್ಟ್ರೀಯತೆ ವಿವಿಧತೆಯಲ್ಲಿ ಏಕತೆ

ಸಂಘ ಪರಿವಾರ ಮತ್ತು ಕಾರ್ಯಕರ್ತರು

ಸ್ವಾತ್ರಂತ್ರ್ಯ ಪೂರ್ವದಲ್ಲಿ ಸ್ವಾತ್ರಂತ್ರ್ಯ ಹೋರಾಟಗಾರರೆಂದೇ ತಮ್ಮನ್ನು ತಾವು ಬಿಂಬಿಸಿಕೊಂಡು ಚಳುವಳಿಯಲ್ಲಿ ಮುಂದಿದ್ದ ಕೆಲವು ಹಿಂದೂ ನಾಯಕರೇ ತಮ್ಮನ್ನು ಹಂದಿ ಎಂದ ಕರೆದರೂ ಬೇಸರವಿಲ್ಲ. ಆದರೆ ದಯವಿಟ್ಟು ತಮ್ಮನ್ನು ಹಿಂದೂ ಎಂದು ಕರೆಯದಿರಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಲ್ಲದೇ, 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಗೋಹತ್ಯೆ ಮತ್ತು ಖಿಲಾಫತ್ ಚಳುವಳಿಯ ಬಗ್ಗೆ ಸೂಕ್ತವಾದ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಆ ಅಧಿವೇಶನದ ಉಸ್ತುವಾರಿಯನ್ನು ಹೊತ್ತಿದ್ದ ಮತ್ತು ಸ್ಥಳೀಯ ಕಾಂಗ್ರೇಸ್ಸಿನ ಸಹಕಾರ್ಯದರ್ಶಿಯಾಗಿದ್ದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಕೇಳಿಕೊಂಡಾಗ, ಇದು… Read More ಸಂಘ ಪರಿವಾರ ಮತ್ತು ಕಾರ್ಯಕರ್ತರು

ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ

ವಿದ್ಯಾರಣ್ಯಪುರದ ವಿಶ್ವಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವಪರಿಸರ ದಿನವಾದ ಜೂನ್ 6 2022ರಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿತ್ತು. ಕಾರ್ಯಕ್ರಮದ ಅತಿಥಿಗಳಾಗಿದ್ದ ಶ್ರೀ ಗಂಗಾಧರನ್ (ಆರೋಗ್ಯ ಭಾರತಿಯ ಪ್ರಾಂತ ಸಹಕೋಶಾಧ್ಯಕ್ಷರು) ಮತ್ತು ಶ್ರೀಮತಿ ಮನಿಲಾ ರೆಡ್ಡಿ, (ಸ್ವದೇಶಿ ಚಾಗರಣ ಮಂಚ್ ಮಹಿಳಾ ಘಟಕದ ಪ್ರಮುಖ್) ಮತ್ತು ಸಭೆಯಲ್ಲಿ ಸೇರಿದ್ದ ಕೆಲವು ಮಾತೆಯರಿಂದ ದೀಪವನ್ನು ಪ್ರಜ್ವಲಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರೆ, ರಾಮಚಂದ್ರಪುರದ ಕಲಾಸದ ಅಕಾಡೆಮಿ ಮಕ್ಕಳು ಸುಶ್ರಾವ್ಯವಾಗಿ ಹಾಡಿದ… Read More ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ