ಜಾತ್ಯಾತೀತತೆ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಎಲ್ಲಾ ಡಾಟ್ ಕಾಂ ಕಂಪನಿಗಳು ಇದ್ದಕ್ಕಿಂದ್ದಂತೆಯೇ ಕುಸಿದು ಹೋಗಿ ಅನೇಕ ಉದ್ಯೋಗಸ್ಥರು ರಾತ್ರೋ ರಾತ್ರಿ ನಿರುದ್ಯೋಗಿಗಳಾಗಿ ಹೋಗಿದ್ದರು. ಸುಮಾರು ಐದಾರು ತಿಂಗಳುಗಳ ಕಾಲ ಚೇತರಿಸಿಕೊಂಡು ಒಂದೊಂದೇ ಸಣ್ಣ Startups ಕಂಪನಿಗಳು ಆರಂಭವಾಗಿದ್ದ ಕಾಲ. ಭಾರತೀಯರೇ ಆದರಲ್ಲೂ ಹಿಂದೂಗಳೇ ಆಗಿದ್ದವರೊಬ್ಬರು ಸುಮಾರು ವರ್ಷಗಳ ಕಾಲ ಅಮೇರೀಕಾದಲ್ಲಿ ಉದ್ಯೋಗ ಮಾಡುತ್ತಲೇ ಅಲ್ಲಿಯೇ ಒಂದು ಕಂಪನಿಯೊಂದನ್ನು ಆರಂಭಿಸಿ, ಬೆಂಗಳೂರಿನಲ್ಲಿ ತಮ್ಮ ಮತ್ತೊಂದು Indian MNC ಶಾಖೆಯೊಂದರನ್ನು ಜೂನ್ ತಿಂಗಳಿನಲ್ಲಿ ಆರಂಭಿಸಿದ ಕಾಲದಲ್ಲಿ ನಾನು ಆ… Read More ಜಾತ್ಯಾತೀತತೆ

ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಇಡೀ ದೇಶದಲ್ಲಿ ಕಮಲವನ್ನು ಅರಳಿಸುವುದು ಒಂದು ರೀತಿಯಾದರೇ, ದಕ್ಷಿಣ ಭಾರತದ ಕೇರಳ ಮತ್ತು ಪೂರ್ವ ಭಾಗದ ಪಶ್ಚಿಮ ಬಂಗಳದ್ದೇ ಒಂದು ಸಾಹಸ ಗಾಥೆ. ಕೇರಳದಲ್ಲಿ ಕಮ್ಯೂನಿಷ್ಟರ ಕಾಟವಾದರೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರ ತದ್ರೂಪಾಗಿರುವ ತೃಣಮೂಲ ಕಾಂಗ್ರೇಸ್ಸಿಗರ ಜೊತೆಗಿನ ಹೋರಾಟ. ತಲೆ ತಲಾಂತರಗಳಿಂದಲೂ ಎರಡೂ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಮತ್ತೊಂದು ಘನ ಘೋರ ದುರ್ದೈವವೇ ಸರಿ. ಈ ಎರಡೂ ರಾಜ್ಯಗಳಲ್ಲಿರುವ ಹಿಂದೂಗಳು ಪರಮ ದೈವ ಭಕ್ತರಾದರೂ, ರಾಜಕೀಯವಾಗಿ ಅದೇಕೋ ಕಮ್ಯೂನಿಷ್ಟರನ್ನು… Read More ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ದಿನಕಳೆದಂತೆ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯರಿಗೆ ಭೂಮಿಯ ಮೇಲಿನ ಆಸೆ ಹೆಚ್ಚಾದಂತೆಲ್ಲಾ ನಮ್ಮ ಪೂರ್ವಜರು ನೆಟ್ಟು ಹೋಗಿದ್ದ ಅಥವಾ ಸ್ವಾಭಾವಿಕವಾಗಿಯೇ ನೆಟ್ಟಿದ್ದ ಗಿಡ, ಮರ ಮತ್ತು ಕಾಡುಗಳನ್ನೆಲ್ಲಾ ಕಡಿದು ನಾಡು ಮಾಡುತ್ತಿದ್ದಂತೆಯೇ ಪ್ರಾಕೃತಿಕ ವ್ಯವಸ್ಥೆಗಳು ವೆತ್ಯಾಸವಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಸರಿಯಾಗಿ ಆಗದೇ ಇದ್ದಾಗ ಗಿಡಿ ನೆಡಿ, ಮರ ಬೆಳೆಸಿ ವನ್ಯ ಸಂಪತ್ತನ್ನು ಉಳಿಸಿ ಎನ್ನುತ್ತಾ ಆಗ್ಗಾಗ್ಗೇ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ವನ ಮಹೋತ್ಸವ ಮಾಡಿ ಕಾಟಾಚಾಕಕ್ಕೆ ಕೆಲವೊಂದು ಗಿಡಗಳನ್ನು ನೆಟ್ಟು ಫೋಟೋಗಳನ್ನು ತೆಗೆಸಿಕೊಂಡು… Read More ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ಮದುವೆ ಮತ್ತು ಸಾಮಾಜಿಕ ಜಾಲತಾಣ

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ತುಂಬಾನೇ ವೈರಲ್ ಆಗಿತ್ತು. ಈ ವಯಸ್ಸಿನಲ್ಲಿ ಈ ಮುದುಕನಿಗೆ ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಮದುವೆ ಬೇಕಿತ್ತಾ? ಅರವತ್ತಕ್ಕೆ ಮೂವತ್ತರ ಆಸೆಯೇ?, ಚಪಲ ಚೆನ್ನಿಗರಾಯ, ದುಡ್ಡಿದ್ದವರು ಅಮಾಯಕ ಹೆಣ್ಣು ಮಕ್ಕಳ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ? ಹೀಗೇ ಹಾಗೇ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಆದರೆ ಈ ಮದುವೆಯ ಹಿಂದೆ ಇದ್ದ ಅಸಲೀ ಕಾರಣ ತಿಳಿದ ಮೇಲೆ ಬಹುತೇಕರು ಆ ವಯಸ್ಸಾದವರನ್ನು ಹಾಡಿ ಹೊಗಳಿದ ಕಥೆ… Read More ಮದುವೆ ಮತ್ತು ಸಾಮಾಜಿಕ ಜಾಲತಾಣ

ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ

ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಇತ್ತೀಚೆಗೆ ಕರ್ನಾಟಕ ಸರ್ಕಾರ ಮರಾಠಿ ಪ್ರಾಧಿಕಾರವನ್ನು ಸ್ಥಾಪಿಸಿದ್ದರ ವಿರುದ್ಧವಾಗಿ ಕೆಲವು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿ ಕನ್ನಡಿಗರಲ್ಲಿ ಭಾಷಾ ಕಿಚ್ಚನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ಸೊಲ್ಲಾಪುರದ ಮರಾಠಿ ಶಿಕ್ಷಕ ರಂಜಿತ್ ಸಿಂಹ ಡಿಸ್ಲೆ ಎಂಬ ಶಿಕ್ಷಕನ ಕನ್ನಡ ಭಾಷಾ ಕಲಿಸುವಿಕೆಗಾಗಿ ಜಾಗತಿಕ ಶಿಕ್ಷಕರ ಪ್ರಶಸ್ತಿಯ ಜೊತೆಗೆ 1 ಮಿಲಿಯನ್ ಅಮೇರಿಕನ್ ಡಾಲರ್ (7ಕೋಟಿ 38 ಲಕ್ಷಗಳು)ಗಳನ್ನು ಗಳಿಸಿದ ಅಧ್ಭುತವಾದ ಮತ್ತು ಆಷ್ಟೇ ಪ್ರೇರಣಾದಾಯಕವಾದ ರೋಚಕ ಕಥೆ ಇದೋ ನಿಮಗಾಗಿ 1947ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ… Read More ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಮಸಾಲೆಗಳ ರಾಜ ಎಂಡಿಹೆಚ್ ಧರಂಪಾಲ್ ಗುಲಾಟಿ

ಪ್ರಪಂಚಾದ್ಯಂತ ನಾನಾ ಕಾರಣಗಳಿಂದಾಗಿ ಹರಡಿರುವ ಭಾರತೀಯರು ಉಳಿದೆಲ್ಲಾ ವಿಷಯಗಳಲ್ಲೂ ಅಲ್ಲಿಯ ಸ್ಥಳೀಯತನಕ್ಕೆ ಒಗ್ಗಿಕೊಂಡರೂ, ಊಟದ ವಿಷಯದಲ್ಲಿ ಮಾತ್ರಾ, ಇನ್ನೂ ಭಾರತೀಯತೆಯನ್ನು ಬಿಟ್ಟಿಲ್ಲ ಎಂದರೆ ತಪ್ಪಾಗಲಾರದು. ಪಿಜ್ಜಾ, ಪಾಸ್ತ ಬರ್ಗರ್ ಎಷ್ಟೇ ತಿಂದರೂ ಉತ್ತರ ಭಾರತೀಯರಾದರೆ ರೊಟ್ಟಿ ದಾಲ್ ಇನ್ನು ದಕ್ಷಿಣ ಭಾರತೀಯರಾದರೇ ಅನ್ನಾ ಸಾರು ಮೊಸರನ್ನ ತಿಂದರೇನೇ ಅವರಿಗೆ ಒಂದು ರೀತಿಯ ಸಂತೃಪ್ತಿ. ಹಾಗಾಗಿಯೇ ಭಾರತದಿಂದ ವಿದೇಶಕ್ಕೆ ಹೋಗುವ ಬಹುತೇಕರು ತಮ್ಮ ಚೀಲದಲ್ಲಿ ಭಾರತೀಯ ಸಾಂಬಾರು ಪುಡಿಗಳನ್ನು ತೆಗೆದುಕೊಂಡೇ ಹೋಗುತ್ತಿದ್ದರು. ಆ ಮೂಲಕ ಅಮ್ಮನ ಕೈರುಚಿಯನ್ನು ವಿದೇಶದಲ್ಲೂ… Read More ಮಸಾಲೆಗಳ ರಾಜ ಎಂಡಿಹೆಚ್ ಧರಂಪಾಲ್ ಗುಲಾಟಿ

ಅನ್ನದಾತ ಸುಖೀ ಭವ

ನಾವು ಪ್ರತೀ ದಿನ ಊಟ ಮಾಡುವ ಮೊದಲು ತಾಯಿ ಅನ್ನಪೂರ್ಣೆಯನ್ನು ನೆನಸಿಕೊಂಡು, ಊಟ ಮುಗಿದ ನಂತರ ಅನ್ನದಾತೋ ಸುಖೀ ಭವ ಎಂದು ಹೇಳಿಯೇ ಊಟ ಮುಗಿಸುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಹೇಳೀ ಕೇಳಿ ನಮ್ಮ ದೇಶ ಕೃಷಿ ಆದಾರಿತವಾದ ದೇಶ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ದೇಶದ ಜನರಿಗೆ ಕನಿಷ್ಟ ಪಕ್ಷ ಎರಡು ಹೊತ್ತಿನ ಊಟವಾದರೂ ನೆಮ್ಮದಿಯಾಗಿ ಸಿಗುವಂತೆ ಮಾಡುತ್ತಿರುವ ಅನ್ನದಾತ ರೈತನಿಗೆ ಎಲ್ಲರೂ ಕೃತಜ್ಞಾರಾಗಿರಲೇ ಬೇಕು. ಇದನ್ನೇ ಅತ್ಯಂತ ಮನೋಜ್ಞವಾಗಿ ಕವಿಗಳಾದ ಸತ್ಯಾರ್ಥಿ ಚನ್ನಬಸಪ್ಪ… Read More ಅನ್ನದಾತ ಸುಖೀ ಭವ

1 ರೂಪಾಯಿಗೆ ಹೊಟ್ಟೆ ತುಂಬಾ ಊಟ

ಅರೇ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ತರಕಾರಿಗಳ ಬೆಲೆ ಎಲ್ಲವೂ ಗಗನಕ್ಕೇರಿರುವಾಗ ಇದೇನಿದು 1 ರೂಪಾಯಿಗೆ ಹೊಟ್ಟೆ ತುಂಬಾ ಊಟಾನಾ? ಅದೂ ಈಗಿನ ಕಾಲದಲ್ಲಿ? ಸರ್ಕಾರವೇ ನಡೆಸುವ ಇಂದಿರಾ ಕ್ಯಾಂಟೀನ್ ನಲ್ಲಿಯೇ ಪ್ಲೇಟ್ ಊಟ ಒಂದಕ್ಕೆ 10 ರೂಪಾಯಿಗಳು ಇರುವಾಗ, ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೇ ಅಂತಾ ನಂಬುವುದು ಸ್ವಲ್ಪ ಕಷ್ಟವೇ ಅದರೂ ಇದು ದೂರದ ದೆಹಲಿಯಲ್ಲಿ ನಿತ್ಯ ಸತ್ಯವಾದ ಸಂಗತಿಯಾಗಿದೆ. ದೆಹಲಿಯ ಭೂಟೊ ವಾಲಿ ಗಲ್ಲಿಯಲ್ಲಿರುವ ನಂಗ್ಲೋಯಿ ಅವರ… Read More 1 ರೂಪಾಯಿಗೆ ಹೊಟ್ಟೆ ತುಂಬಾ ಊಟ