ಕೋಯಾ-ಪಾಯ

ಅರೇ ಇದೇನಿದು! ಇದು ಯಾವ ಭಾಷೆಯ ಶೀರ್ಷಿಕೆ? ಅಂತಾ ಯೋಚಿಸ್ತಿದ್ದೀರಾ? ಇದು ಸರಳ ಸಂಸ್ಕೃತ ಭಾಷೆಯ ಪದ. ಕೋಯ ಎಂದರೆ ಕಳೆದು ಹೋದದ್ದು ಮತ್ತು ಪಾಯ ಎಂದರೆ ಸಿಕ್ಕಿದ್ದು ಅಂದರೆ ಕಳೆದುಕೊಂಡದ್ದು ಸಿಕ್ಕಿದೆ ಎಂದರ್ಧ. ದೇವರ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆಯೇ ಮಾತನಾಡಿ ದೇವಾಲಯದಿಂದ ಹೊರ ಬಂದ ಕೂಡಲೇ ದೇವರ ಶಕ್ತಿಯ (ಪವಾಡ) ಅನುಭವ ಪಡೆದ ಸರಳ ಸುಂದರ ಪ್ರಸಂಗ ಇದೋ ನಿಮಗಾಗಿ. ಪ್ರತೀ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ನಮ್ಮ ವಿದ್ಯಾರಣ್ಯಪುರದ ಸನಾತನ ವೇದ ಪಾಠಶಾಲೆಯ… Read More ಕೋಯಾ-ಪಾಯ

ಏಪ್ರಿಲ್ – 10

ನಾವೆಲ್ಲಾ ಚಿಕ್ಕವರಿದ್ದಾಗ ಏಪ್ರಿಲ್-10 ಎಂದರೆ ಏನೋ‌ ಆತಂಕ, ಭಯ, ಹಿಂದಿನ ದಿನ ರಾತ್ರಿ ಇಡೀ ನಿದ್ದೆಯೇ ಇಲ್ಲದೇ ತಳಮಳಗೊಳ್ಳುತ್ತಿದ್ದ ಆ ಅನುಭವದ ಸವಿ ನೆನಪು/ರೋಚಕತೆ ಇದೋ ನಿಮಗಾಗಿ… Read More ಏಪ್ರಿಲ್ – 10

ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ… Read More ಆಪದ್ಭಾಂಧವ ಅಪ್ಪ

ಹಿತಚಿಂತಕರು ಮತ್ತು ಹಿತಶತ್ರುಗಳು

ಮನುಷ್ಯ ಸಂಘ ಜೀವಿ ಮತ್ತು ಭಾವುಕ ಜೀವಿಯೂ ಹೌದು. ಹಾಗಾಗಿ ಆತ ಕಾಲ ಕಾಲಕ್ಕೆ ತನ್ನ ಮನಸ್ಸಿನಲ್ಲಾಗುವ ತುಮುಲಗಳನ್ನು ಮತ್ತು ಭಾವನೆಗಳನ್ನು ಮತ್ತೊಬ್ಬರ ಹತ್ತಿರ ಹಂಚಿಕೊಳ್ಳುವ ಮೂಲಕ ನಿರಾಳನಾಗುತ್ತಾನೆ. ಹಾಗಾಗಿಯೇ ಮನುಷ್ಯರು ಸದಾಕಾಲವೂ ಉತ್ತಮ ಗುರುಗಳು, ಸ್ನೇಹಿತರು ಮತ್ತು ಸಂಗಾತಿಯ ಅನ್ವೇಷಣೆಯಲ್ಲಿದ್ದು, ಒಮ್ಮೆ ತಮ್ಮ ಅಭಿರುಚಿಗೆ ತಕ್ಕಂತಹವರು ಸಿಕ್ಕ ಕೂಡಲೇ ತಮ್ಮ ಜೀವನದ ಗುಟ್ಟು ರಟ್ಟುಗಳನ್ನೆಲ್ಲಾ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವುದಕ್ಕೆ ಪ್ರಮುಖ ಕಾರಣ ತಮ್ಮ ಗೆಳೆಯ ಈ ಎಲ್ಲಾ ಗೌಪ್ಯತೆಯನ್ನು ಕಾಪಾಡುತ್ತಾನೆ ಮತ್ತು… Read More ಹಿತಚಿಂತಕರು ಮತ್ತು ಹಿತಶತ್ರುಗಳು

ರೋಲ್ಸ್ ರಾಯ್ ಗರ್ವಭಂಗ

ಅದು 1920ರ ಸಮಯ ಅಲ್ವಾರ್ ಮಹಾರಾಜ ಜೈ ಸಿಂಗ್ ಪ್ರಭಾಕರ್ ಅವರು  ಅಸಾಧಾರಣ ಶ್ರೀಮಂತರಾಗಿದ್ದರು, ಸುಮಾರು ಹತ್ತಾರು ತಲೆಮಾರುಗಳ ಕಾಲ ಸುಮ್ಮನೇ ಕುಳಿತು ತಿಂದರೂ ಕರಗದಷ್ಟು ಆಸ್ತಿ ಅವರ ಬಳಿ ಇತ್ತು. ಅದೊಮ್ಮೆ ಅವರು  ಲಂಡನ್ನಿಗೆ ಹೋಗಿದ್ದಾಗ ನಗರ ಪ್ರದಕ್ಷಿಣೆಗಾಗಿ ಸಾಧಾರಣವಾದ ಬಟ್ಟೆಗಳನ್ನು ಧರಿಸಿ, ಯಾವುದೇ ಆಳುಗಳ ಬೆಂಗಾವಲು ಇಲ್ಲದೇ ಹೋಗುತ್ತಿದ್ದಾಗ ಅವರು  ರಸ್ತೆಯಲ್ಲಿದ್ದ ರೋಲ್ಸ್ ರಾಯ್ಸ್ ಕಾರಿನ ಶೋ ರೂಂ ನೋಡಿದರು.  1906 ರಲ್ಲಿ ಆರಂಭವಾದ ರೋಲ್ಸ್ ರಾಯ್ಸ್  ಬ್ರಾಂಡ್ 1920ರ ಹೊತ್ತಿಗೆ ವಿಶ್ವದ ನಂಬರ್… Read More ರೋಲ್ಸ್ ರಾಯ್ ಗರ್ವಭಂಗ

ಚಿಂಟು ಕಾಣೆಯಾಗಿದ್ದಾನೆ

ಮನುಷ್ಯ ಸಂಘಜೀವಿ. ಹಾಗಾಗಿ ಒಬ್ಬಂಟಿಯಾಗಿ ಇರಲು ಮನಸ್ಸಾಗದೇ ಕುಟುಂಬವನ್ನು ಬೆಳಸಿಕೊಂಡ. ಹಾಗೆಯೇ ತನ್ನ ಜೊತೆಯಲ್ಲಿ ಹಸುಗಳು, ಎಮ್ಮೆ, ನಾಯಿ, ಬೆಕ್ಕು, ಕೋಳಿ, ಕುರಿ, ಆಡು, ಗಿಳಿ, ಪಾರಿವಾಳಗಳಂತಹ ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನು ಸಾಕತೊಡಗಿದ. ಈ ಸಾಕು ಪ್ರಾಣಿಗಳು/ಪಕ್ಷಿಗಳು ನ್ನು ತನ್ನ ಹೆತ್ತ ಮಕ್ಕಳಂತೆಯೇ ಜತನದಿಂದ ನೋಡಿಕೊಳ್ಳುತ್ತಿದ್ದ ಕಾರಣ ಅವುಗಳೂ ಸಹಾ ಮನುಷ್ಯನಿಗೆ ಅತ್ಯಂತ ಪ್ರೀತಿಯನ್ನು ತೋರಿಸುತ್ತಿದ್ದವು. ಅದರಲ್ಲಿಯೂ ನಾಯಿಗಳಂತೂ ಅತ್ಯಂತ ನಂಬಿಕಸ್ತ ಪ್ರಾಣಿಗಳೆನಿಸಿ ಮನುಷ್ಯರಿಗೆ ಅತ್ಯಂತ ಪ್ರೀತಿ ಪಾತ್ರರೆನಿಸಿಕೊಂಡವು. ಮಹಾಭಾರತದಲ್ಲಿ ಜೀವಂತವಾಗಿಯೇ ಸ್ವರ್ಗಲೋಕವನ್ನು ತಲುಪಿದ ಧರ್ಮರಾಯನೊಂದಿಗೆ… Read More ಚಿಂಟು ಕಾಣೆಯಾಗಿದ್ದಾನೆ

ಮಾತು ಬಲ್ಲವನಿಗೆ ಸಮಸ್ಯೆಯೇ ಇಲ್ಲ.

ರಷ್ಯಾದ ಯಹೂದಿಯೊಬ್ಬನಿಗೆ ಅಂತಿಮವಾಗಿ ತನ್ನ ತಾಯ್ನಾಡಾದ ಇಸ್ರೇಲ್‌ಗೆ ವಲಸೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಮಾಸ್ಕೋ ವಿಮಾನ ನಿಲ್ದಾಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಆತನ ಸಾಮಾನು ಸರಂಜಾಮುಗಳಲ್ಲಿ ಲೆನಿನ್ ಪ್ರತಿಮೆಯನ್ನು ಕಂಡು, ಅರೇ ಇದು ಏನು? ಎಂದು ಪ್ರಶ್ನಿಸಿದರು. ಕೂಡಲೇ ಆ ವ್ಯಕ್ತಿ, ಸರ್ ಇದು ಏನು? ಎಂಬುದು ತಪ್ಪಾದ ಪ್ರಶ್ನೆ. ಅದರ ಬದಲು ಇವರು ಯಾರು? ಎಂದು ನೀವು ಕೇಳಬೇಕಾಗಿತ್ತು ಎಂದು ಹೇಳಿ, ಇವರು ಕಾಮ್ರೇಡ್ ಲೆನಿನ್. ಸಮಾಜವಾದದ ಅಡಿಪಾಯವನ್ನು ಹಾಕಿದ ಮಹಾನ್ ವ್ಯಕ್ತಿಯಲ್ಲದೇ, ರಷ್ಯಾದ ಜನರ ಭವಿಷ್ಯ… Read More ಮಾತು ಬಲ್ಲವನಿಗೆ ಸಮಸ್ಯೆಯೇ ಇಲ್ಲ.

ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

ಕುಡಿಯಲು ನೀರು ಕೇಳಿದರೆ, ನೀರಿನ ಜೊತೆ ಬೆಲ್ಲವನ್ನೂ ಕೊಡುವಷ್ಟು ವಿಶಾಲ ಹೃದಯವವರು ಕನ್ನಡಿಗರು ಎಂಬ ಮಾತಿಗೆ ಅನ್ವಯವಾಗುವಂತಹ ರೋಚಕವಾದ ಪ್ರಸಂಗ ಇದೋ ನಿಮಗಾಗಿ… Read More ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

ಇತರರಿಗೆ ಗಾಡಿ ಕೊಡುವ ಮುನ್ನಾ ಜೋಕೆ

ಸುರೇಶ್ ಮಧ್ಯಮ ವರ್ಗದ ಉತ್ಸಾಹೀ ತರುಣ. ಬಹಳ ಕಷ್ಟ ಪಟ್ಟು ಓದಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ ಪಡೆದು ಪೀಣ್ಯಾದ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮನೆಯಿಂದ ಕಛೇರಿಗೆ ಹೋಗಿ ಬರಲು ಒಂದು ಮುದ್ದಾದ ಬೈಕ್ ಒಂದನ್ನು ಕಂತಿನಲ್ಲಿ ಖರೀದಿಸಿ ಬಹಳ ಜತನದಿಂದ ಬೈಕನ್ನು ನೋಡಿಕೊಳ್ಳುತ್ತಿದ್ದ. ಅದೊಂದು ದಿನ ಬೆಳ್ಳಂಬೆಳಿಗ್ಗೆ ಕಛೇರಿ ತಲುಪಲು ಇನ್ನೇನು ಸ್ವಲ್ಪ ದೂರವಿದೆ ಎನ್ನುವಷ್ಟರಲ್ಲಿ ಆತನ ಬೈಕ್ ಪಂಚರ್ ಆಗಿತ್ತು. ಸುತ್ತ ಮುತ್ತಲೆಲ್ಲಾ ಕಣ್ಣಾಡಿಸಿದರೂ ಎಲ್ಲೂ ಪಂಚರ್ ಹಾಕುವ ಅಂಗಡಿ ಕಾಣಿಸದಿದ್ದ… Read More ಇತರರಿಗೆ ಗಾಡಿ ಕೊಡುವ ಮುನ್ನಾ ಜೋಕೆ