ಸ್ನೇಕ್ ಶ್ಯಾಮ್

ಮನುಷ್ಯ ಬುದ್ದಿವಂತನಾಗುತ್ತಾ ಹೋದಂತೆಲ್ಲಾ ನಾಗರಿಕತೆಯು ಬೆಳೆಯುತ್ತಾ ಹೋಗಿ ಅರಣ್ಯಗಳೆಲ್ಲಾ ನಾಶವಾಗಿ ಒಂದೊಂದೇ ಹಳ್ಳಿ ಮತ್ತು ಪಟ್ಟಣಗಳಾಗಿ ಮಾರ್ಪಾಡುತ್ತಾ ಹೋದಂತೆಲ್ಲಾ ಆರಣ್ಯವನ್ನೇ ಆಶ್ರಯಿಸಿದ್ದ ವನ್ಯಮೃಗಗಳು, ಸರೀಸೃಪಗಳು ಮತ್ತು ಪಶು ಪಕ್ಷಿಗಳು ದಿಕ್ಕಾಪಾಲಾಗಿವೆ. ಹಾಗಾಗಿಯೇ ಇಂದು ಅನೇಕ ಕಡೆಗಳಲ್ಲಿ ಹಾವುಗಳು ಮನೆಯ ಒಳಗೆ ಬರುವ ಉದಾಹರಣೆಗಳು ಇದ್ದು, ಹಾಗೆ ಹಾವು ಮನೆಯೊಳಗೆ ಬಂದೊಡನೆಯೇ ಅದು ಯಾವ ರೀತಿಯ ಹಾವು ವಿಷಪೂರಿತವೋ? ಇಲ್ಲಾ ವಿಷವಲ್ಲದ್ದೋ ಎಂದು ಯಾವುದನ್ನೂ ಯೋಚಿಸಿದೆ ಬಹಳಷ್ಟು ಮಂದಿ ಅದನ್ನು ಹೊಡೆದು ಸಾಯಿಸಲು ಪ್ರಯತ್ನಿಸುವವರೇ ಹೆಚ್ಚಾಗಿರುವ ಈ ಕಾಲದಲ್ಲಿ… Read More ಸ್ನೇಕ್ ಶ್ಯಾಮ್

ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ 

ಎಪ್ಪತರ ದಶಕದ ಅಂತ್ಯದವರೆಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಭಲ್ಯ.  ವೇಗದ ಬೋಲರ್ಗಳೇನಿದ್ದರೂ  ಆರಂಭಿಕ ನಾಲ್ಕಾರು ಓವರ್ಗಳನ್ನು ಮಾಡಿ ಚಂಡಿನ ಹೊಳಪನ್ನು ತೆಗೆದುಕೊಡಲಷ್ಟೇ ಸೀಮಿತವಾದ ಕಾಲದಲ್ಲಿ ಕಪಿಲ್ ದೇವ್  ಅವರ ಆಗಮನವಾಗಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಅವರು ನಿವೃತ್ತರಾಗುವ ವೇಳೆಗೆ ಭಾರತದ ವೇಗದ ಬೌಲಿಂಗ್ ನೊಗ ಹೊರುವವರು ಯಾರು ಎಂದು ಯೋಚಿಸುತ್ತಿರುವಾಗಲೇ ನಿಜವಾದ ವೇಗ ಬೋಲಿಂಗ್ ಎಂದರೆ ಹೇಗೆ ಇರುತ್ತದೆ ಎಂದು ತೋರಿಸಿದ, ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಪಡುತ್ತಿದ್ದ ಜಾವಗಲ್ ಶ್ರೀನಾಥ್ ಅವರ ಯಶೋಗಾಥೆ ನಮ್ಮ… Read More ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ 

ಐಶಾರಾಮಿ ಕಾರುಗಳ ಮಾಲಿಕ ರಮೇಶ್ ಬಾಬು

ಬೆಂಗಳೂರು ನಗರಕ್ಕೆ ದೇಶ ವಿದೇಶಗಳಿಂದ ಸರ್ಕಾರೀ ಅಥವಾ ಖಾಸಗೀ ಕೆಲಸಗಳಿಗೆಂದು ಬರುವ ಪ್ರಸಿದ್ಧ ವ್ಯಕ್ತಿಗಳು ಓಡಾಡುವುದಕ್ಕೆ ಐಶಾರಾಮಿ ಕಾರುಗಳನ್ನು ಬಳಸುವುದನ್ನು ನಾವೆಲ್ಲರೂ ಟಿವಿಯಲ್ಲಿಯೋ ಇಲ್ಲವೇ ಖುದ್ದಾಗಿ ನೋಡಿ ಸಂಭ್ರಮಿಸಿರುತ್ತೇವೆ. ವಾವ್ ಅಂತಹ ಕಾರುಗಳಲ್ಲಿ ಓಡಾಡುವವರೇ ಭಾಗ್ಯವಂತರು ಎಂದೇ ಭಾವಿಸಿರುತ್ತೇವೆ.  ನಿಜ ಹೇಳ್ಬೇಕು ಅಂದರೆ ಅಂತಹ ಐಶಾರಾಮೀ ಕಾರುಗಳ ಒಡೆಯ ನಮ್ಮ ನಿಮ್ಮಂತೆಯೇ  ಸಾಮಾನ್ಯ ಮಧ್ಯಮ ವರ್ಗದ ಕ್ಷೌರಿಕ ಕುಟುಂಬದಿಂದ ಬಂದು ತಮ್ಮ ಬುದ್ದಿವಂತಿಕೆ ಮತ್ತು ಕಾರ್ಯಕ್ಷಮತೆಯಿಂದ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ಅಚ್ಚರಿ ಮೂಡಿಸುತ್ತದೆ ಅಲ್ಲವೇ?  ಹೌದು … Read More ಐಶಾರಾಮಿ ಕಾರುಗಳ ಮಾಲಿಕ ರಮೇಶ್ ಬಾಬು

ಶ್ರೀ ರಾಮಕೃಷ್ಣ ಹೆಗಡೆ

ಸದುದ್ದೇಶಗಳಿಂದ,ಜನತೆಯ ಕೈಗೆ ಆಡಳಿತ ನೀಡಿ, ಯಾವುದೇ ಜಾತಿಯ ಹಂಗು ಮತ್ತು ಬೆಂಬಲವಿಲ್ಲದೇ, ಹೇಗೆ ಯಶಸ್ವೀ ಆಡಳಿತ ನಡೆಸಬಹುದು ಎಂಬುದನ್ನು ತೋರಿಸಿದ, ರಾಜ್ಯ ಕಂಡ ಧೀಮಂತ ಜನಾನುರಾಗಿ, ಶ್ರೀ ರಾಮಕೃಷ್ಣ ಹೆಗಡೆ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ರಾಮಕೃಷ್ಣ ಹೆಗಡೆ

ಜೆ. ಹೆಚ್. ಪಟೇಲ್

ಜಯದೇವಪ್ಪ ಹಾಲಪ್ಪ ಪಟೇಲ್ ಕರ್ನಾಟಕ ಕಂಡ ಅತ್ಯಂತ ದಿಟ್ಟತನದ ಪ್ರಾಮಾಣಿಕ ರಾಜಕಾರಣಿ ರಾಜ್ಯದ ವಿವಿಧ ಖಾತೆಗಳ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಾಗಿದ್ದಲ್ಲದೇ, 15 ನೇ ಮುಖ್ಯಮಂತ್ರಿಯಾಗಿದ್ದವರು. ಸಮಾಜವಾದಿ ಹಿನ್ನಲೆಯ ಹೋರಾಟದಿಂದ ಬಂದು ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ವಿರೋಧೀ ನಾಯಕರಾಗಿಯೇ ರಾಜ್ಯ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಶಿವಮೊಗ್ಗಾ ಸಾಂಸದರಾಗಿ ದೂರದ ದೆಹಲಿಯ ಸಂಸತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಕಂಪನ್ನು ಎಲ್ಲೆಡೆಯೂ ಹರಡಿದ್ದವರು. ಸಂಗೀತ ಮತ್ತು ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀ ಜೆ ಹೆಚ್ ಪಟೇಲ್ ಅವರ… Read More ಜೆ. ಹೆಚ್. ಪಟೇಲ್

ಇನ್ಪೋಸಿಸ್ ಸುಧಾ ಮೂರ್ತಿ

ಇಂದಿನ ಕಾಲದಲ್ಲಿ  ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವವರೇ ಹೆಚ್ಚಾಗಿರುವಾಗ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿಯಾಗಿದ್ದರೂ ಸಾಮಾನ್ಯವಾದ  ಸೀರೇ ಉಟ್ಟುಗೊಂಡು ನಿರಾಭರಣೆಯಾಗಿ ಒಂದು ಚೂರು ಹಮ್ಮು ಬಿಮ್ಮಿಲ್ಲದೇ ಯಾವುದೇ ಪ್ರಚಾರದ ಗೀಳಿಲ್ಲದೇ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರಳ ಸಹನಾಮೂರ್ತಿ ಶ್ರೀಮತಿ ಸುಧಾಮೂರ್ತಿಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. ಸುಧಾಮೂರ್ತಿಯವರ ಪೂವಜರು  ಅವಿಭಜಿತ ಧಾರವಾಡ ಜಿಲ್ಲೆಯ ಶಿಗ್ಗಾಂವ್‌ (ಈಗ ಹಾವೇರಿ ಜಿಲ್ಲೆಯ… Read More ಇನ್ಪೋಸಿಸ್ ಸುಧಾ ಮೂರ್ತಿ

ರಚಿನ್ ರವೀಂದ್ರ

ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಭಾರತದ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಬಂದಿಳಿದ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯರಿಗೆ ಎರಡು ಹೆಸರುಗಳು ಗಮನ ಸೆಳೆಯುವಂತಿದ್ದು ಒಂದು ಇಶ್ ಸೋಧಿಯದ್ದಾಗಿದರೆ ಮತ್ತೊಂದು ರಚಿನ್ ರವೀಂದ್ರ ಎನ್ನುವ ಆಟಗಾರರದ್ದಾಗಿತ್ತು. ಹಾಗೆ ನೋಡಿದರೆ  ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರಿಗೇನೂ ಕಡೆಮೆ ಇಲ್ಲ ದೀಪಕ್ ಪಟೇಲ್,  ಜಿತಿನ್ ಪಟೇಲ್, ರೋನಿ ಹಿರಾ, ತರುಣ್ ನೇತುಲಾ, ಜೀತ್ ರಾವಲ್ ಮುಂತಾದ ಭಾರತೀಯ ಮೂಲದವರು ಈಗಾಗಲೇ ನ್ಯೂಜಿಲೆಂಡ್ ತಂಡದ  ಪರ ಆಡಿದ್ದಾರೆ.  ಅವರಲ್ಲರ ನಡುವೆ… Read More ರಚಿನ್ ರವೀಂದ್ರ

ಎನ್‌. ವೀರಾಸ್ವಾಮಿ

ದೂರದ ತಮಿಳುನಾಡಿನಿಂದ ಕೆಲಸ ಹುಡುಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿ ಚಲನಚಿತ್ರಗಳ ಬಾಕ್ಸ್ ಗಳನ್ನು ಊರಿಂದ ಊರಿಗೆ ತಲುಪಿಸುತ್ತಿದ್ದ ವ್ಯಕ್ತಿ ಮುಂದೆ ಚಿತ್ರ ವಿತರಕರಾಗಿದ್ದಲ್ಲದೇ ಈಶ್ವರಿ ಪ್ರೊಡಕ್ಷನ್ಸ್‌ ಸಂಸ್ಥೆಯನ್ನು ಸ್ಥಾಪಿಸಿ. ಅದರ ಮುಖಾಂತರ ಹತ್ತಾರು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿ ಅತ್ಯಂತ ಯಶಸ್ವೀ ನಿರ್ಮಾಪಕರರಾಗಿ ಪ್ರಖ್ಯಾತರಾದ ಶ್ರೀ ಎನ್‌. ವೀರಾಸ್ವಾಮಿ ಯವರ ಯಶೋಗಾಥೆ ಕನ್ನಡದ ಕಲಿಗಳು ಮಾಲಿಕೆಯ ಮೂಲಕ ಇದೋ ನಿಮಗಾಗಿ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಒಟ್ಟೇರಿ ಗ್ರಾಮದ ಶ್ರೀ ನಾಗಪ್ಪ ಮತ್ತು ಶ್ರೀಮತಿ ಕಾಮಾಕ್ಷಮ್ಮ… Read More ಎನ್‌. ವೀರಾಸ್ವಾಮಿ

ಸುಕ್ರಿ ಬೊಮ್ಮುಗೌಡ

ಕರ್ನಾಟಕ ರಾಜ್ಯ ಹೇಳೀ ಕೇಳಿ ಕಲೆಗಳ ತವರೂರು. ಕರ್ನಾಟಕದ ಪ್ರತೀ ಹಳ್ಳಿ ಹಳ್ಳಿಗಳೂ ಸಾಂಸ್ಕೃತಿಕ ಕಲೆಗಳ ಬೀಡಾಗಿದ್ದು ಅಲ್ಲಿ ನೂರಾರು ಕಲಾವಿದರನ್ನು ಕಾಣಬಹುದಾಗಿದೆ. ಅದೇ ರೀತಿಯಲ್ಲಿ ಉತ್ತರ ಕನ್ನಡದ ಹಾಲಕ್ಕಿ ಬುಡಕಟ್ಟಿನ ‍ ‍ಆಧ್ಭುತ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದ ವಿಶಿಷ್ಟ ಬುಡಕಟ್ಟು ಜನಾಂಗವಾಗಿದ್ದು, ಕರಾವಳಿ ಪ್ರದೇಶಗಳಾದ ಅಂಕೋಲಾ, ಕಾರವಾರ, ಕುಮಟಾ ಮತ್ತು ಹೊನ್ನಾವರದ ಸುತ್ತಮುತ್ತಲೂ ಹೆಚ್ಚಾಗಿ ಕಂಡು… Read More ಸುಕ್ರಿ ಬೊಮ್ಮುಗೌಡ