ಇನ್ಪೋಸಿಸ್ ಸುಧಾ ಮೂರ್ತಿ

ಇಂದಿನ ಕಾಲದಲ್ಲಿ  ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವವರೇ ಹೆಚ್ಚಾಗಿರುವಾಗ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿಯಾಗಿದ್ದರೂ ಸಾಮಾನ್ಯವಾದ  ಸೀರೇ ಉಟ್ಟುಗೊಂಡು ನಿರಾಭರಣೆಯಾಗಿ ಒಂದು ಚೂರು ಹಮ್ಮು ಬಿಮ್ಮಿಲ್ಲದೇ ಯಾವುದೇ ಪ್ರಚಾರದ ಗೀಳಿಲ್ಲದೇ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರಳ ಸಹನಾಮೂರ್ತಿ ಶ್ರೀಮತಿ ಸುಧಾಮೂರ್ತಿಯವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. ಸುಧಾಮೂರ್ತಿಯವರ ಪೂವಜರು  ಅವಿಭಜಿತ ಧಾರವಾಡ ಜಿಲ್ಲೆಯ ಶಿಗ್ಗಾಂವ್‌ (ಈಗ ಹಾವೇರಿ ಜಿಲ್ಲೆಯ… Read More ಇನ್ಪೋಸಿಸ್ ಸುಧಾ ಮೂರ್ತಿ

ರಚಿನ್ ರವೀಂದ್ರ

ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಭಾರತದ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಬಂದಿಳಿದ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯರಿಗೆ ಎರಡು ಹೆಸರುಗಳು ಗಮನ ಸೆಳೆಯುವಂತಿದ್ದು ಒಂದು ಇಶ್ ಸೋಧಿಯದ್ದಾಗಿದರೆ ಮತ್ತೊಂದು ರಚಿನ್ ರವೀಂದ್ರ ಎನ್ನುವ ಆಟಗಾರರದ್ದಾಗಿತ್ತು. ಹಾಗೆ ನೋಡಿದರೆ  ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರಿಗೇನೂ ಕಡೆಮೆ ಇಲ್ಲ ದೀಪಕ್ ಪಟೇಲ್,  ಜಿತಿನ್ ಪಟೇಲ್, ರೋನಿ ಹಿರಾ, ತರುಣ್ ನೇತುಲಾ, ಜೀತ್ ರಾವಲ್ ಮುಂತಾದ ಭಾರತೀಯ ಮೂಲದವರು ಈಗಾಗಲೇ ನ್ಯೂಜಿಲೆಂಡ್ ತಂಡದ  ಪರ ಆಡಿದ್ದಾರೆ.  ಅವರಲ್ಲರ ನಡುವೆ… Read More ರಚಿನ್ ರವೀಂದ್ರ

ಎನ್‌. ವೀರಾಸ್ವಾಮಿ

ದೂರದ ತಮಿಳುನಾಡಿನಿಂದ ಕೆಲಸ ಹುಡುಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿ ಚಲನಚಿತ್ರಗಳ ಬಾಕ್ಸ್ ಗಳನ್ನು ಊರಿಂದ ಊರಿಗೆ ತಲುಪಿಸುತ್ತಿದ್ದ ವ್ಯಕ್ತಿ ಮುಂದೆ ಚಿತ್ರ ವಿತರಕರಾಗಿದ್ದಲ್ಲದೇ ಈಶ್ವರಿ ಪ್ರೊಡಕ್ಷನ್ಸ್‌ ಸಂಸ್ಥೆಯನ್ನು ಸ್ಥಾಪಿಸಿ. ಅದರ ಮುಖಾಂತರ ಹತ್ತಾರು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿ ಅತ್ಯಂತ ಯಶಸ್ವೀ ನಿರ್ಮಾಪಕರರಾಗಿ ಪ್ರಖ್ಯಾತರಾದ ಶ್ರೀ ಎನ್‌. ವೀರಾಸ್ವಾಮಿ ಯವರ ಯಶೋಗಾಥೆ ಕನ್ನಡದ ಕಲಿಗಳು ಮಾಲಿಕೆಯ ಮೂಲಕ ಇದೋ ನಿಮಗಾಗಿ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಒಟ್ಟೇರಿ ಗ್ರಾಮದ ಶ್ರೀ ನಾಗಪ್ಪ ಮತ್ತು ಶ್ರೀಮತಿ ಕಾಮಾಕ್ಷಮ್ಮ… Read More ಎನ್‌. ವೀರಾಸ್ವಾಮಿ

ಸುಕ್ರಿ ಬೊಮ್ಮುಗೌಡ

ಕರ್ನಾಟಕ ರಾಜ್ಯ ಹೇಳೀ ಕೇಳಿ ಕಲೆಗಳ ತವರೂರು. ಕರ್ನಾಟಕದ ಪ್ರತೀ ಹಳ್ಳಿ ಹಳ್ಳಿಗಳೂ ಸಾಂಸ್ಕೃತಿಕ ಕಲೆಗಳ ಬೀಡಾಗಿದ್ದು ಅಲ್ಲಿ ನೂರಾರು ಕಲಾವಿದರನ್ನು ಕಾಣಬಹುದಾಗಿದೆ. ಅದೇ ರೀತಿಯಲ್ಲಿ ಉತ್ತರ ಕನ್ನಡದ ಹಾಲಕ್ಕಿ ಬುಡಕಟ್ಟಿನ ‍ ‍ಆಧ್ಭುತ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಅವರ ಯಶೋಗಾಥೆ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದ ವಿಶಿಷ್ಟ ಬುಡಕಟ್ಟು ಜನಾಂಗವಾಗಿದ್ದು, ಕರಾವಳಿ ಪ್ರದೇಶಗಳಾದ ಅಂಕೋಲಾ, ಕಾರವಾರ, ಕುಮಟಾ ಮತ್ತು ಹೊನ್ನಾವರದ ಸುತ್ತಮುತ್ತಲೂ ಹೆಚ್ಚಾಗಿ ಕಂಡು… Read More ಸುಕ್ರಿ ಬೊಮ್ಮುಗೌಡ

ಮಾಲತಿ ಹೊಳ್ಳ

ಬಾಲ್ಯದಲೇ ಪೋಲಿಯೋಗೆ ಒಳಗಾಗಿ, ಇದುವರೆವಿಗೂ 32 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ  ಆ ಎಲ್ಲಾ ನೋವುಗಳನ್ನೂ ಮೆಟ್ಟಿ ವೀಲ್ ಛೇರಿನಲ್ಲೇ ಕುಳಿತುಕೊಂಡು ಹತ್ತು ಹಲವಾರು ಕ್ರೀಡೆಗಳಲ್ಲಿ ಭಾರತದ ತ್ರಿವರ್ಣಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ, ಸಂಗೀತದಲ್ಲೂ ತಕ್ಕ ಮಟ್ಟಿಗೆ ಸಾಧನೆ ಮಾಡಿರುವ ಮಾತೃ ಫೌಂಡೇಶನ್ ಮೂಲಕ ವಿಕಲಾಂಗ ಮಕ್ಕಳಿಗೆ ಆಶ್ರಯವಾಗಿರುವಛಲಗಾರ್ತಿ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರ ಯಶೋಗಾಥೆ  ಇದೋ ನಿಮಗಾಗಿ.… Read More ಮಾಲತಿ ಹೊಳ್ಳ

ಸಂವಿಧಾನ ಕತೃ ಸರ್ ಬೆನಗಲ್ ನರಸಿಂಗರಾವ್

ಬೆನಗಲ್  ಎಂಬ ಹೆಸರನ್ನು ಕೇಳಿದ ಕೂಡಲೇ ನಮಗೆ ಥಟ್  ಅಂತಾ ನೆನಪಾಗೋದೇ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ಮತ್ತು ಭಾರತದ ಸಂವಿಧಾನದ ಕರ್ತೃಗಳು ಯಾರು ಎಂದಾಕ್ಷಣವೇ ಥಟ್  ಅಂತಾ ನೆನಪಗೋದೇ ಡಾ. ಬಿ. ಆರ್. ಅಂಬೇಡ್ಕರ್ ಅವರು. ನಿಜ ಹೇಳಬೇಕೆಂದರೆ, ಬೆನಗಲ್ ಮತ್ತು ಭಾರತದ ಸಂವಿಧಾನಕ್ಕೆ ಶ್ಯಾಮ್ ಮತ್ತು ಅಂಬೇಡ್ಕರ್ ಅವರು ಒಂದು ರೀತಿಯ ಅತಿಥಿ ಅಧ್ಯಾಪಕರು (visiting professor) ಎಂದರೆ ಬಹುತೇಕರಿಗೆ  ಅಚ್ಚರಿ ಮೂಡಬಹುದು  ಇನ್ನೂ ಕೆಲವರು ಸಿಟ್ಟಾಗಲೂ ಬಹುದು. ಆದರೆ ಇತಿಹಾಸವನ್ನಂತೂ… Read More ಸಂವಿಧಾನ ಕತೃ ಸರ್ ಬೆನಗಲ್ ನರಸಿಂಗರಾವ್

ಡಾ. ತೋನ್ಸೆ ಮಾಧವ್ ಅನಂತ್ ಪೈ

ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ರಂಗ, ಪತ್ರಿಕಾ ರಂಗದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ್ದಲ್ಲದೇ ದೇಶದಲ್ಲಿ ನೂರಾರು ಉದ್ಯಮಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ದೇಶದ ಅಭಿವೃದ್ಧಿಯ ಹರಿಕಾರರಾದ ಡಾ. ತೋನ್ಸೆ ಮಾಧವ್ ಅನಂತ್ ಪೈ, ಎಲ್ಲರ ಮೆಚ್ಚಿನ ಟಿಎಂಎ ಪೈ ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಅದು 18ನೇ ಶತಮಾನದ ಅಂತ್ಯದ ಕಾಲ, ಗೋವಾದಲ್ಲಿನ ಕ್ರಿಶ್ಛಿಯನ್ನರ ಮತಾಂತದ ಧಾಳಿಗೆ ಹೆದರಿ ಉಡುಪಿಯ ಸಮೀಪದ ಮಣಿಪಾಲದಿಂದ ಸುಮಾರು 4… Read More ಡಾ. ತೋನ್ಸೆ ಮಾಧವ್ ಅನಂತ್ ಪೈ

ಸುಹಾಸ್ ಯತಿರಾಜ್

ತಮ್ಮ ಅಂಗವೈಕುಲ್ಯತೆಯನ್ನೂ ಮೀರಿ IAS ಮುಸಿಗಿಸಿ ಪ್ರಸ್ತುತ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಹಾಸ್ ಯತಿರಾಜ್, 2020 & 2024ರ ಪ್ಯಾರಾ ಓಲಂಪಿಕ್ಸಿನಲ್ಲಿ ಸತತವಾಗಿ ಎರಡು ಬೆಳ್ಳಿಪದಕಗಳನ್ನು  ಗೆಲ್ಲುವ ಮೂಲಕ ಭಾರತದ ಕೀರ್ತಿಪತಾಕೆಯನ್ನು  ಹಾರಿಸಿರುವ ಹೆಮ್ಮೆಯ ಕನ್ನಡಿಗನ ವಿಸ್ತೃತ ಪರಿಚಯ ಇದೋ ನಿಮಗಾಗಿ… Read More ಸುಹಾಸ್ ಯತಿರಾಜ್

ವಿಜಯ ಸಂಕೇಶ್ವರ

ಮಾಡುವ ಕೆಲಸ ಯಾವುದಾದರೂ ಏನಂತೆ, ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಸಾಧಕರಿಗೆ ಯಾವುದು ಅಸಾಧ್ಯವಲ್ಲ. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೇ ಎನ್ನುವ ಅಣ್ಣವರ ಹಾಡಿನಂತೆ  ನಾನು ಏನಾದ್ರು ಸಾಧನೆ ಮಾಡೇ ಮಾಡ್ತೀನಿ ಅಂತ 19 ವರ್ಷದ ಯುವಕನೊಬ್ಬ ತನ್ನ ಕುಟುಂಬದ ವ್ಯಾಪಾರದಿಂದ ಹೊರ ಬಂದು ಕೈ ಕೆಸರಾದರೆ ಬಾಯ್ ಮೊಸರು ಎನ್ನುವಂತೆ 1975ರಲ್ಲಿ ಒಂದು ಟ್ರಕ್ ಖರೀದಿಸಿ  ಸಾರಿಗೆ ಉದ್ಯಮವನ್ನು ಆರಂಭಿಸಿ ಇಂದು  4,300 ವಾಹನಗಳನ್ನು ಹೊಂದಿರುವ ಭಾರತದಲ್ಲಿ ಅತ್ಯಂದ  ದೊಡ್ಡದಾದ … Read More ವಿಜಯ ಸಂಕೇಶ್ವರ