ದೇವರ ಮೊಸಳೆ ಬಬಿಯಾ

ಕೇರಳದ ಕಾಸರಗೋಡಿನ ಕುಂಬಳೆ ಸಮೀಪದಲ್ಲಿರುವ ಸರೋವರ ಕ್ಷೇತ್ರ ಅನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಬಬಿಯಾ ಎಂಬ ಮೊಸಳೆ ದಿನಾಂಕ 9.10.2022ರ ಭಾನುವಾರ ರಾತ್ರಿಯಂದು ವಯೋಸಹಜವಾಗಿ ಕೊನೆಯುಸಿರೆಳೆದಿರುವುದು ಅಪಾರ ಭಕ್ತಾದಿಗಳಿಗೆ ನೋವನ್ನುಂಟುಮಾಡಿದೆ.

ಬಬಿಯಾ ಎಂದರೆ ಯಾರು? ಏನಿದರ ವಿಶೇಷತೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ದೇವರ ಮೊಸಳೆ ಬಬಿಯಾ

ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಪ್ರಬೋಧಿನಿ ಏಕಾದಶಿಯಿಂದ ಕಾರ್ತಿಕ ಪೌರ್ಣಿಮೆಯವರೆಗೂ ಮಹಾರಾಷ್ಟ್ರದ ಪಂಡರಾಪುರದಲ್ಲಿ ಐದು ದಿನಗಳ ಕಾಲ ನಡೆಯುವ ದ್ರುಕ್ಮಿಣೀ ಮತ್ತು ಪಾಂಡುರಂಗನ ಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ಲಕ್ಷಾಂತರ ಯಾತ್ರಾರ್ತಿಗಳ ವಾರಕರಿ ಸೇವೆಯ ಸಮಗ್ರ ಚಿತ್ರಣ ಇದೋ ನಿಮಗಾಗಿ … Read More ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಶ್ರೀ ಉಗ್ರ ನರಸಿಂಹ ಸ್ವಾಮಿಯ ಕೋಪ ಶಮನ ಮಾಡಿದ ಶ್ರೀ ಶರಭೇಶ್ವರ

ಅಸುರರ ರಾಜ ಹಿರಣ್ಯಾಕ್ಷ ಭೂಲೋಕ, ಅತಳ, ವಿತಳ, ಸುತಳ, ಮಾಹಾತಳ, ಸಚಾತಳ, ತಳಾತಳ, ಪಾತಾಳ ಲೋಕದಲ್ಲೆಲ್ಲಾ, ತನ್ನ ರಾಕ್ಷಸೀ ಕೃತ್ಯಗಳಿಂದ ಕಂಟಕ ಪ್ರಾಯನಾಗಿ ನಾನಾ ರೀತಿಯ ಉಪಟಳಗಳನ್ನು ಕೊಡುತ್ತಿದ್ದಾಗ ದೇವಾನು ದೇವತೆಗಳ ಕೋರಿಕೆಯಂತೆ ಭಗವಾನ್ ವಿಷ್ಣು ತನ್ನ ದಶಾವತರದ ಮೂರನೇ ರೂಪವಾದ ವರಾಹ ರೂಪದಲ್ಲಿ ಸಂಹರಿಸಿದಾಗ, ಅವನ ತಮ್ಮ ಹಿರಣ್ಯಕಶಿಪುವು, ಕೋಪೋದ್ರಕ್ತನಾಗಿ ವಿಷ್ಣುವಿನ ಪರಮ ವೈರಿಯಾಗಿ, ಋಷಿ ಮುನಿಗಳ ಯಜ್ಞಯಾಗಾದಿಗಳಿಗೆ ಮತ್ತು ಭೂಲೋಕ ವಾಸಿಗಳಿಗೆ ನಾನಾ ರೀತಿಯ ತೊಂದರೆಗಳನ್ನು ಕೊಡಲು ಆರಂಭಿಸಿದ್ದಲ್ಲದೇ, ತನಗೆ ಸಾವೇ ಬಾರದಂತೆ ಅಮರನಾಗಬೇಕೆಂಬ… Read More ಶ್ರೀ ಉಗ್ರ ನರಸಿಂಹ ಸ್ವಾಮಿಯ ಕೋಪ ಶಮನ ಮಾಡಿದ ಶ್ರೀ ಶರಭೇಶ್ವರ

ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ… Read More ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ಹುಸ್ಕೂರು ಮದ್ದೂರಮ್ಮ ಜಾತ್ರೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು… Read More ಹುಸ್ಕೂರು ಮದ್ದೂರಮ್ಮ ಜಾತ್ರೆ

ಸೌತಡ್ಕ ಶ್ರೀ ಮಹಾಗಣಪತಿ

ಸಾಮಾನ್ಯವಾಗಿ ಒಂದು ಪುರಾತನ ದೇವಸ್ಥಾನ ಎಂದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಮೂಡುವುದೇ ವಿಶಾಲವಾದ ಪ್ರದೇಶದಲ್ಲಿ ಎತ್ತರವಾದ ರಾಜಗೋಪುರವನ್ನು ದಾಟಿ ಒಳಗೆ ಹೋಗುತ್ತಿದ್ದಲ್ಲಿ ನೂರಾರು ಸುಂದರವಾಗಿ ನಿಲ್ಲಿಸಿರುವ ಕಲ್ಲುಗಳ ಕಂಬ ಅದರಲ್ಲಿ ಶಿಲ್ಪಿಯ ಕೈ ಚಳಕದಿಂದ ಮೂಡಿರುವ ವಿವಿಧ ಆಕೃತಿಗಳ ಮಧ್ಯದಲ್ಲಿರುವ ಗರ್ಭಗುಡಿ ಇರುವ ದೇವಸ್ಥಾನ. ಇನ್ನು ವಾಸ್ತುಪ್ರಕಾರ ದೇವಸ್ಥಾನವೆಂದರೆ, ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜಗೋಪುರಗಳು ಇರಲೇಬೇಕೆಂಬ ನಿಯಮವಿದೆ. ಇಲ್ಲಿನ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದರೂ ಇಂದಿಗೂ ಬಯಲು ಮಂದಿರದಲ್ಲೇ ಇರುವ ಸುಂದರ… Read More ಸೌತಡ್ಕ ಶ್ರೀ ಮಹಾಗಣಪತಿ

ಶಿರಸಿ ಮಾರಿಕಾಂಬಾ

ಕರ್ನಾಟಕದ ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ, ಶಿರಸಿಯ ಶ್ರೀ ಮಾರಿಕಾಂಬೆಯ ದರ್ಶನ ಪಡೆಯುವುದರ ಜೊತೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ವೈಭವೋಪೇತವಾಗಿ ನಡೆಯುವ ಮಾರಿ ಜಾತ್ರೆಯ ಸುಂದರ ಅನುಭವ ಮತ್ತು ಅಲ್ಲಿಯ ದೇವಾಲಯದ ಪ್ರಸಿದ್ಧ ಕೋಣ ಮತ್ತು ಆ ಜಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ಶಿರಸಿ ಮಾರಿಕಾಂಬಾ

ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಪಂಚರಥೋತ್ಸವ ಅರ್ಥಾತ್ ದೊಡ್ಡ ಜಾತ್ರೆಯ ಸಂಭ್ರಮ ಕ್ಷಣಗಳನ್ನು ಕುಳಿತಲ್ಲಿಂದಲೇ ನೋಡಿ ಶ್ರೀ ನಂಜುಂಡೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.… Read More ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ದೇವರಾಯನ ದುರ್ಗ

ಬೆಂಗಳೂರಿನ ಹತ್ತಿರವೇ ಸುಂದರವಾದ ರಮಣೀಯವಾದ ಪ್ರಕೃತಿ ತಾಣವಿರಬೇಕು. ಅದು ಪುಣ್ಯಕ್ಷೇತ್ರವೂ ಆಗಿರಬೇಕು. ಹಿರಿಯರು ಕಿರಿಯರೂ ಎಲ್ಲರೂ ಮೆಚ್ಚುವಂತಿರಬೇಕು ಎನ್ನುವ ಸುಂದರವಾದ ತಾಣಕ್ಕೆ ಅರಸುತ್ತಿದ್ದೀರೆ ಎಂದರೆ ಬೆಂಗಳೂರಿನಿಂದ ಕೇವಲ 72 km ದೂರದಲ್ಲಿರುವ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ಆರಾಮವಾಗಿ ತಲುಪಬಹುದಾದಂತಹ ಪುರಾಣ ಪ್ರಸಿದ್ಧ ಪಕೃತಿತಾಣವೇ ದೇವರಾಯನ ದುರ್ಗ ಎಂದರೆ ಅತಿಶಯೋಕ್ತಿ ಎನಿಸದು. ದೇವರಾಯನದುರ್ಗವು ತುಮಕೂರು ಜಿಲ್ಲೆಗೆ ಸೇರಿರುವ ಬೆಟ್ಟ ಗುಡ್ಡ, ಅರಣ್ಯಗಳಿಂದ ಆವೃತವಾಗಿರುವ ಹತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಒಂದು ಸುಂದರವಾದ ಗಿರಿಧಾಮವಾಗಿರುವುದಲ್ಲದೇ, ಪ್ರಕೃತಿ ಪ್ರಿಯರಿಗೆ… Read More ದೇವರಾಯನ ದುರ್ಗ