ಸಂಕಟ ಬಂದಾಗ ವೆಂಕಟರಮಣ

ತಾನೊಬ್ಬ ಮಾಸ್ ಲೀಡರ್ ಎನ್ನುವ ಹುಂಬತನದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುಲಭವಾಗಿ ಗೆಲ್ಲಲು ಒಂದು ಸುರಕ್ಷಿತ ಕ್ಷೇತ್ರವಿಲ್ಲವೇ? ಮಾಂಸ ಸೇವಿಸಿ ಹಿಂದೂ ಶ್ರೀಕ್ಷೇತ್ರಗಳಿಗೆ ಭೇಟಿ ನೀಡುವ ಸಿದ್ದು, ಕೋಲಾರ ಕ್ಷೇತ್ರ ಸುರಕ್ಷಿತವಲ್ಲಾ ಎಂದು ಎರಡನೇ ಟಿಕೆಟ್ ಗಳಿಸಿಕೊಳ್ಳಲು, ತಮ್ಮೂರಿನ ದೇವತೆಯು ಮೊರೆ ಹೊಕ್ಕಿರುವುದು, ಯಾಕೋ ಕಾಂತಾರ ಸಿನಿಮಾದಲ್ಲಿನ ಧಣಿ, ದೈವ ನರ್ತಕ ಗುರವನಿಗೆ ಆಮಿಷವೊಡ್ಡಿ ತಾನು ಹೇಳಿದಂತೆ ದೈವ ನುಡಿಯಬೇಕೆಂದು ತಾಕೀತು ಮಾಡಿದಂತಿದೆ ಎನಿಸುತ್ತಿದೆ ಅಲ್ವೇ?… Read More ಸಂಕಟ ಬಂದಾಗ ವೆಂಕಟರಮಣ

ಶ್ರೀ ಸರಸ್ವತಿ ವಿದ್ಯಾನಿಕೇತನ ದೊಮ್ಮಸ೦ದ್ರ ಶಾಲಾ ವಾರ್ಷಿಕೋತ್ಸವ

ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವದಲ್ಲಿ ಅರ್ಥವೇ ಇರದ ಸಿನಿಮಾ ಹಾಡುಗಳಿಗೆ ನೃತ್ಯಮಾಡುವುದೇ ಸಾಂಸ್ಕೃತಿಕ ಕಾರ್ಯಕ್ರಮ ಎಂದೇ ಭಾವಿಸಿರುವವರಿಗೆ, ರಾಷ್ಟ್ರೀಯ ಚಿಂತನೆಯುಳ್ಳ ಶಾಲೆಯಾದ ದೊಮ್ಮಸಂದ್ರದ ಶ್ರೀ ಸರಸ್ವತಿ ವಿದ್ಯಾನಿಕೇತನ ಶಾಲೆಯ ಅರ್ಥಗರ್ಭಿತ 42ನೇ ವಾರ್ಷಿಕೋತ್ಸವ ಮಾದರಿಯಾಗುತ್ತದೆ. ಆ ಶಾಲೆಯ ವಾರ್ಷಿಕೋತ್ಸವದ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಶ್ರೀ ಸರಸ್ವತಿ ವಿದ್ಯಾನಿಕೇತನ ದೊಮ್ಮಸ೦ದ್ರ ಶಾಲಾ ವಾರ್ಷಿಕೋತ್ಸವ

ಕ್ರಿಸ್ಮಸ್ ಮತ್ತು ಜಾತ್ಯಾತೀತತೆ

ಯಾರನ್ನೋ ಮೆಚ್ಚಿಸುವ ಸಲುವಾಗಿ ಅಂಧ ಪಾಶ್ಚಾತ್ಯೀಕರಣದಿಂದ ಕ್ರಿಸ್ಮಸ್ ಅಲಂಕಾರ, ಸೀಕ್ರೇಟ್ ಸಾಂಟಾ, ಹೊಸಾ ವರ್ಷಾಚರಣೆ ಎಂಬ ಅವೈಜ್ಞಾನಿಕ ಆಚರಣೆಯ ಬೂಟಾಟಿಕೆ ಸಿಕ್ಕಿಹಾಕಿ ಕೊಳ್ಳುವ ಬದಲು, ನಮ್ಮ ಹೆಮ್ಮೆಯ ಪರಂಪರೆಯನ್ನು ಅರ್ಥಮಾಡಿಕೊಂಡು ಅದನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇಂತಹ ವಿಷವರ್ತುಲದಿಂದ ನಮ್ಮ ಇಂದಿನ ಮತ್ತು ಮುಂದಿನ ಜನಾಂಗವನ್ನು  ರಕ್ಷಿಸಿಸೋಣ. ನಮ್ಮ ದೇಶ ಸಂತರ ನಾಡೇ ಹೊರತು ಸ್ಯಾಂಟಾರ ನಾಡಲ್ಲ ಅಲ್ವೇ?… Read More ಕ್ರಿಸ್ಮಸ್ ಮತ್ತು ಜಾತ್ಯಾತೀತತೆ

ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?

ಇತ್ತೀಚೆಗಂತೂ ತಮ್ಮ ಬಗ್ಗೆ ಹೇಳ್ಕೊಳ್ಳೋಕ್ಕೆ ಏನೂ ಇಲ್ಲದೇ ಹೋದಾಗಾ, ಅವರ ತಲೆಯಲ್ಲಿ ಥಟ್ ಅಂತಾ ಮೂಡಿಬರುವುದೇ ಬ್ರಾಹ್ಮಣರ ಅವಹೇಳನ. ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಬ್ರಾಹ್ಮಣರನ್ನು ಬೈಯ್ಯುವುದೇ ಒಂದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿಕೊಂಡಿರುವಾಗ ಎಲ್ಲರಲ್ಲೂ ಕಾಡುವ ಕಟ್ಟ ಕಡೆಯ ಪ್ರಶ್ನೆ ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?… Read More ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?

ಅತಿರೇಕದ ಅಭಿಮಾನ

ಕನ್ನಡದ ಜನಪ್ರಿಯ ನಟ ದರ್ಶನ್ ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ತಮ್ಮ ಕ್ರಾಂತಿ ಚಿತ್ರದ ಪ್ರಚಾರಕ್ಕೆಂದು ಹೊಸಪೇಟೆಗೆ ಹೋಗಿರುವಾಗ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ತೂರಿರುವುದು ನಿಜಕ್ಕು ಅಕ್ಷಮ್ಯ ಅಪರಾಧವಾಗಿದ್ದು ಖಂಡನಾರ್ಯವಾಗಿದೆ. ಅಂತಹ ಕುಕೃತ್ಯಗಳಿಗೆ ರಣೀಭೂತರು ಯಾರು? ಎಂಬ ವಿಷಯ ನಿಜಕ್ಕೂ ಆಘಾತಕಾರಿಯಾಗಿದೆ. ಈ ಖಟನೆಯ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಅತಿರೇಕದ ಅಭಿಮಾನ

ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ

ಸರ್ಕಾರಿ ಸಾರಿಗೆ ಸಿಬ್ಬಂದಿಯ ಉದ್ಧಟತನ

ಜನರ ಅನುಕೂಲಕ್ಕೆಂದೇ ಇರುವ KSRTC ಮತ್ತು BMTC ಸಂಸ್ಥೆಗಳ ನೌಕರರು ಸರ್ಕಾರೀ ಸವಲತ್ತುಗಳು ಬೇಕು ಎಂದು ಬಂದ್ ಮಾಡುವುದು ಗೊತ್ತೇ ವಿನಃ ತಮ್ಮ ಅನ್ನದಾತ ಪ್ರಯಾಣಿಕರಿಗೆ ಉತ್ತಮವಾಗಿ ಸೇವೆ ಸಲ್ಲಿಸಬೇಕು ಎಂಬ ಮನೋಭಾವನೆಯೇ ಬಹುತೇಕ ಸರ್ಕಾರಿ ಸಿಬ್ಬಂಧಿಗಳಿಗೆ ಇಲ್ಲದಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ… Read More ಸರ್ಕಾರಿ ಸಾರಿಗೆ ಸಿಬ್ಬಂದಿಯ ಉದ್ಧಟತನ

ಮಾತೇ ಮುತ್ತು ಮಾತೇ ಮೃತ್ಯು

ಖಳನಟರಾಗಿದ್ದ, ಸತಳ ಸಜ್ಜನರಾದ ಶ್ರೀ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ, ತಂದೆಯ ಹೆಸರನ್ನು ಬಳಸಿಕೊಳ್ಳದೇ, ಚಿತ್ರರಂಗದಲ್ಲಿ ಹಂತ ಹಂತವಾಗಿ ತನ್ನ ಸ್ವಸಾಮರ್ಥ್ಯದಿಂದ ಮತ್ತು ಡಿಬಾಸ್ ಎನ್ನಿಸಿಕೊಳ್ಳುವಷ್ಟರ ಮಟ್ಟಕ್ಕೆ ಬೆಳೆದು ಬಂದಿರುವಂತಹ ದರ್ಶನ್, ಒಲೆ ಕೆಡಿಸಿತು, ತೂತು ಒಲೆ ಕೆಡಿಸಿತು, ಎನ್ನುವಂತೆ ಕೆಲವು ಕ್ಷುಲ್ಲಕ ಅಥವಾ ಅಸಭ್ಯ/ಅಸಹ್ಯ/ಅಶ್ಲೀಲಕರ ಹೇಳಿಕೆಗಳನ್ನು ಪದೇ ಪದೇ ನೀಡುತ್ತಾ ತಾವೂ ಸಹಾ ತೊಂದರೆಗೊಳಗಾಗುವುದಲ್ಲದೇ, ಜನ ಸಾಮಾನ್ಯರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.… Read More ಮಾತೇ ಮುತ್ತು ಮಾತೇ ಮೃತ್ಯು

ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ

ಜೆ.ಎನ್.ಯು ಕಾಂಪಸ್ಸಿನ ಎಡಚರು, ಸ್ವಯಂ ಘೋಷಿತ ಬುದ್ಧಿಜೀವಿಗಳ ಜೊತೆ‌ ಅಹಿಂದ ಮುಖಂಡರುಗಳು ಅವ್ಯಾಹತವಾಗಿ ಬ್ರಾಹ್ಮಣರನ್ನು ದ್ವೇಷಿಸುತ್ತಿರುವ ಹಿಂದಿರುವ‌ ಘನ ಘೋರ ಸತ್ಯಾಸತ್ಯತೆಗಳ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ.… Read More ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ