ಸಿದ್ದು ನಿಮಗೆ ವಯಸ್ಸಾಯ್ತು.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ವಿಜಯನಗರ ಜಿಲ್ಲೆಗೆ ಹೋಗಿದ್ದ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಪ್ಯಾಡಿನಲ್ಲಿ ಕಾರನ್ನು ಹತ್ತುವಾಗ ದಿಢೀರ್ ಎಂದು ಕುಸಿದು ಬಿದ್ದು ಕೆಲ ಕಾಲ ಆಂತಕವನ್ನು ಮೂಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಲ್ಲಾ ಅಧಿಕಾರವನ್ನೂ ಸವಿದಿರುವ ಸಿದ್ದರಾಮಯ್ಯನವರ ದೇಹ ಈ ಘಟನೆಯ ಮುಖಾಂತರ ತನಗೆ ವಿಶ್ರಾಂತಿ ಅವಶ್ಯಕತೆ ಎಂದು ಸ್ಪಷ್ಟವಾಗಿ ತಿಳಿಸುತ್ತಿರುವುದನ್ನು ವರುಣಾ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ತಾರೆ ಅಲ್ವೇ?
Read More ಸಿದ್ದು ನಿಮಗೆ ವಯಸ್ಸಾಯ್ತು.

ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ಅನೇಕ ನಾಯಕರು ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ.

ಇಂದು ಬಿಜಿಪಿಯ ಬಂಡಾಯದಲ್ಲಿ ತಮ್ಮ ರಾಜಕೀಯ ಬೇಳೆ ಬೆಳಸಿಕೊಳ್ಳಲು ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್, ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಇವರನ್ನು ಕಾಲ ಕಸದಂತೆ ಕಂಡಾಗ, ಭ್ರಮನಿರಸರಾಗುವುದು ನಿಶ್ಚಿತ.… Read More ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಪಕ್ಷನಿಷ್ಠೆ ಮತ್ತು ಸಿದ್ಧಾಂತ

ಪ್ರಜೆ ಮತ್ತು ಪಕ್ಷಗಳಿಂದ ತಾವು ಎನ್ನುವುದನ್ನು ಮರೆತು ತಮ್ಮಿಂದಲೇ ಪಕ್ಷ ಮತ್ತು ಪ್ರಜೆ ಎಂದು ಭಾವಿಸುವವರು ಖಂಡಿತವಾಗಿಯೂ ನಂಬಿಕೆಗೆ ಅರ್ಹರಲ್ಲ. ವ್ಯಕ್ತಿ ಮತ್ತು ಅಧಿಕಾರ ಎಂದಿಗೂ ಶಾಶ್ವತವಲ್ಲಾ. ಹಾಗಾಗಿ ಅಧಿಕಾರದಲ್ಲಿ ಕಡೆಯವರೆಗೂ ಇದ್ದು ಎಲ್ಲಾ ರೀತಿಯ ಅಧಿಕಾರವನ್ನೂ ಸವಿದು ನಂತರ ಮತ್ತೆ ಅಧಿಕಾರಕ್ಕೆ ಆರು ಕೊಟ್ಟರೆ ಅತ್ತೇ ಕಡೇ, ಮೂರು ಕೊಟ್ಟರೆ ಸೊಸೇ ಕಡೇ ಎಂಡು ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರಿಗಳನ್ನು ನಿಸ್ಸಂಕೋಚವಾಗಿ ಸೋಲಿಸುವ ಮೂಲಕ ಅವರ ತಪ್ಪನ್ನು ಅವರಿಗೆ ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮಿಲ್ಲರ ಮೇಲೆಯೇ ಇದೆ ಅಲ್ವೇ?… Read More ಪಕ್ಷನಿಷ್ಠೆ ಮತ್ತು ಸಿದ್ಧಾಂತ

ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು

ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ವಯಸ್ಸು 80+ ಎಲ್ಲಾ ರೀತಿಯ ರಾಜಕೀಯ ಅಧಿಕಾರವನ್ನೂ ಸವಿದ ನಂತರ, ಈಗ ಸ್ವತಂತ್ರವಾಗಿ ನಡೆಯಲಾಗದೇ, ಸ್ಪಷ್ಟವಾಗಿ ಮಾತನಾಡಲಾಗದೇ, ಡೈಪರ್ ಹಾಕಿಕೊಂಡು ವೀಲ್ ಛೇರ್ ಮೇಲೆ ಕುಳಿತು ಕೊಳ್ಳುವವರೆಲ್ಲಾ ಇನ್ನೂ ಅಧಿಕಾರದ ಆಸೆಯಿಂದಾಗಿ ಸಕ್ರೀಯ ಚುನಾವಣಾ ರಾಜಕಾರಣ ಮಾಡುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಅಧಿಕಾರಕ್ಕೆ ತರುವುದಕ್ಕೇ ಒದ್ದಾಡುತ್ತಿರುವವರಿಗೆ, ಐದು ಬಾರಿ ಜನಪ್ರಿಯ ಶಾಸಕರಾಗಿಯೂ ಮಂತ್ರಿಗಿರಿಗೆ ಲಾಭಿಯನ್ನು ನಡೆಸದೇ ತಮ್ಮ 72ನೇ ವಯಸ್ಸಿನಲ್ಲಿಯೇ ಸ್ವಯಂಪ್ರೇರಿತರಾಗಿ ಸಕ್ರೀಯ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವ ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿರ್ಧಾರ ಮೇಲ್ಪಂಕ್ತಿ ಆಗಬೇಕು ಅಲ್ವೇ?… Read More ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ಸ್ವಯಂಕೃತ ಅಪರಾಧ

https://enantheeri.com/2023/03/25/rahul_ghandhi/

ಉಗುರಿನಲ್ಲಿ ಚಿವುಟಿ ಹಾಕಬಹುದಾಗಿದ್ದದ್ದಕ್ಕೆ ಕೊಡಲಿಯನ್ನು ತೆಗೆದುಕೊಂಡರು ಎನ್ನುವಂತೆ, ರಾಹುಲ್ ಗಾಂಧಿ ತನ್ನ ಸಡಿಲ ನಾಲಿಕೆ, ಸ್ವಪ್ರತಿಷ್ಟೆ, ಅಹಂಮಿಕೆ ಮತ್ತು ಈ ಪ್ರಕರಣದ ಗಂಭೀರತೆ ಅರಿಯದೇ ಉಡಾಫೆ ತನದಿಂದ ಸ್ವಯಂ ಕೃತ ಅಪರಾಧವಾಗಿ ಮಾದಿದ್ದುಣ್ಣೋ ಮಹರಾಯ ಎನ್ನುವಂತೆ ಶಿಕ್ಷ ಅನುಭವಿಸಬೇಕಾಗಿದೆಯೇ ಹೊರತು ಬಿಜೆಪಿ, ಕೇಂದ್ರ ಸರ್ಕಾರ ಮೋದಿಯವರ ಮೇಲೆ ಹರಿ ಹಾಯುತ್ತಿರುವುದು ಹಾಸ್ಯಾಸ್ಪದವಾಗಿದೆ ಅಲ್ವೇ?… Read More ಸ್ವಯಂಕೃತ ಅಪರಾಧ

ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

ಯಾವುದೇ ವಿದ್ಯಾರ್ಹತೆ ಇಲ್ಲದೇ, ಅಕ್ರಮ ಸಂಪಾದನೆಯ ಹಣದಿಂದಲೋ, ಕುಟುಂಬ ರಾಜಕಾರಣದಿಂದಲೋ ರಾಜಕೀಯಕ್ಕೆ ಬಂದು ಅಕ್ರಮವಾಗಿ ಅಸ್ತಿ ಸಂಪಾದನೆ ಮಾಡುವವರ ನಡುವೆ ವಿದ್ಯಾವಂತರಾಗಿ, ಐಪಿಎಸ್ ಅಧಿಕಾರಿಗಳಾಗಿದ್ದಂತಹವರು, ದೇಶದ ಹಿತದೃಷ್ಟಿಯಿಂದ ಶುದ್ಧವಾದ ರಾಜಕೀಯ ಮಾಡಲು ಬಂದಿರುವಂತಹ, ಪ್ರಾಮಾಣಿಕ ಮತ್ತು ದೂರದರ್ಶಿತ್ವ ಹೊಂದಿರುವಂತಹ ನಾಯಕರುಗಳ ಕೈ ಬಲ ಪಡಿಸುವುದು ಪ್ರತಿಯೊಬ್ಬ ಜವಾಬ್ಧಾರೀ ನಾಗರೀಕರ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?
Read More ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ವ್ಯಕ್ತಿ ಇಂದು ಇರುತ್ತಾನೆ ನಾಳೆ ಸತ್ತು ಹೊಗುತ್ತಾನೆ? ಅದರೆ ದೇಶ ನೆನ್ನೆ ಇತ್ತು. ಇಂದು ಇದೆ ಮತ್ತು ನಾಳೆಯೂ ಇರುವ ಕಾರಣ, ನಮ್ಮ ನಿಷ್ಟೆ ಮತ್ತು ಭಕ್ತಿ ಎಂದಿಗೂ ವ್ಯಕ್ತಿ ಕೇಂದ್ರೀಕೃತವಾಗದೇ ಅದು ದೇಶದ ಕುರಿತಾಗಿ ಇರಬೇಕು. ತನ್ನ ಸ್ವಾರ್ಥಕ್ಕಾಗಿ ಅದರಲ್ಲೂ ಅಧಿಕಾರದ ಅಸೆಗಾಗಿ ವಿದೇಶಗಳಲ್ಲಿ ಭಾರತದ ಮಾನವನ್ನು ಇಲ್ಲ ಸಲ್ಲದ ರೀತಿ ಹರಾಜು ಹಾಕುವಂತಹ ವ್ಯಕ್ತಿಗಳು ನಮ್ಮ ನಾಯಕರಾಗಿರಲು ಎಷ್ಟು ಅರ್ಹರು? ನಮಗೆ ದೇಶ ಮುಖ್ಯವೋ? ಇಂತಹ ವ್ಯಕ್ತಿ ಮುಖ್ಯವೋ?

ನಮಗೇನಿದ್ದರೂ, Nation first. Everything is next. ನಿಮಗೇ??… Read More ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ

ಇನ್ನು ದಿನೇ ದಿನೇ ಹದಗೆಡುತ್ತಿರುವ ಆರೋಗ್ಯದ ಜೊತೆ, ಜಟಿಲವಾಗುತ್ತಿರುವ ಕುಟುಂಬ ಕಲಹದ ಒತ್ತಡದಲ್ಲಿ ಕುಮಾರಸ್ವಾಮಿಯವರ ಮಾನಸಿಕ ಸ್ಥಿಮಿತ ದಿನೇ ದಿನೇ ಕುಂಠಿತವಾಗುತ್ತಾ, ತಮ್ಮ ತಟ್ಟೆಯಲ್ಲೇ ದೊಡ್ಡ  ಹೆಗ್ಗಣ ಸತ್ತು ಬಿದ್ದು ನಾತ ಬೀರುತ್ತಿದ್ದರೂ,ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿ ತೋರಿಸುವ ಮೂಲಕ ಹಾಸ್ಯಾಸ್ಪದ ವ್ಯಕ್ತಿ ಆಗ್ತಾ ಇದ್ದಾರೆ ಅಲ್ವೇ?… Read More ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ