ಡ್ರಾಪ್ ಕೊಟ್ಟವನಿಗೇ ಧರ್ಮದೇಟು

ನೆನ್ನೆ ರಾತ್ರಿಯಿಂದ ಹಿಂದೂ ವ್ಯಕ್ತಿಯೊಬ್ಬರು ಬುರ್ಕ ಧರಿಸಿದ ಮಹಿಳೆಯೊಬ್ಬರಿಗೆ ತನ್ನ ಬೈಕಿನಲ್ಲಿ ಡ್ರಾಪ್​ ಕೊಟ್ಟಿದ್ದಕ್ಕಾಗಿ ಕೆಲವು ಮತಾಂಧರ ಗುಂಪು ಧಾಳಿ ನಡೆಸಿ ಹಿಂದು ಯುವಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ಬಳಿಯ ಡೈರಿ ಸರ್ಕಲ್​ನಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಶುಕ್ರವಾರ ರಾತ್ರಿ ಆ ವ್ಯಕ್ತಿ ಮತ್ತು ಮಹಿಳೆ ಇಬ್ಬರೂ ಒಂದೇ ಬ್ಯಾಂಕಿನಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಸಹೋದ್ಯೋಗಿಯಾಗಿದ್ದು ಅದಾಗಲೇ ಸಮಯವಾಗಿದ್ದ ಕಾರಣ, ಇಬ್ಬರ ಮನೆಯೂ ಒಂದೇ… Read More ಡ್ರಾಪ್ ಕೊಟ್ಟವನಿಗೇ ಧರ್ಮದೇಟು

ಅತ್ತ ದರಿ ಇತ್ತ ಪುಲಿ

ಅದು 2014 ಲೋಕಸಭಾ ಚುನಾವಣಾ ಸಮಯ. ಅದಾಗಲೇ ಎರಡು ಆಡಳಿತಾವಧಿಯಲ್ಲಿ ಹಗರಣದ ಮೇಲೆ ಹಗರಣಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಇಡೀ ದೇಶವಾಸಿಗಳ ಆಕ್ರೋಶವಿದ್ದಾಗ ಶುದ್ಧ ಹಸ್ತನಾಗಿ, ದಕ್ಷ ಆಡಳಿತಗಾರನಾಗಿ ಗುಜರಾತನ್ನು ಮುನ್ನೆಡೆಸಿದ್ದ ನರೇಂದ ಮೋದಿಯವರು ಇಡೀ ದೇಶಕ್ಕೆ ಆಶಾವಾದಿಯಾಗಿ ಕಂಡ ಪರಿಣಾಮವಾಗಿ ಅದ್ಭುತವಾದ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದ್ದು ಈಗ ಇತಿಹಾಸ. ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಸಂಸತ್ತನ್ನು ಪ್ರವೇಶಿಸಿ ನಾ ಮೇ ಖಾವುಂಗಾ ಔರ್ ಖಾನೇ… Read More ಅತ್ತ ದರಿ ಇತ್ತ ಪುಲಿ

ಪೇಪರ್.. ಪೇಪರ್…

ಪ್ರತಿ ದಿನವೂ ಬೆಳ್ಳಂ ಬೆಳಗ್ಗೆ ಛಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ತಪ್ಪದೇ ನಮ್ಮೆಲ್ಲರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಆ ಶ್ರಮ ಜೀವಿಗಳ ರೋಚಕ ಮತ್ತು ಅಷ್ಟೇ ಹೃದಯಸ್ಪರ್ಶಿ ಪ್ರಸಂಗಗಳನ್ನು ಸೆಪ್ಟಂಬರ್-4, ವಿಶ್ವ ಪತ್ರಿಕಾ ವಿತರಕರ ದಿನದಂದು ಮೆಲುಕು ಹಾಕುತ್ತಾ, ಆ ಪತ್ರಿಕಾ ಯೋಧರಿಗೆ ನಮ್ಮೆಲ್ಲರ ಅಭಿನಂದನೆಗಳನ್ನು ಸಲ್ಲಿಸೋಣ ಅಲ್ವೇ?… Read More ಪೇಪರ್.. ಪೇಪರ್…

ಭಾವೈಕ್ಯತೆಯ ರಾಯಭಾರಿ ಅಬ್ದುಲ್ ಕಲಾಂ

ಈ ದೇಶ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ಒಬ್ಬರಾದ ಶ್ರೀ ಅಬ್ದುಲ್ ಕಲಾಂ ಅವರ ಹೃದಯ ಶ್ರೀಮಂತಿಕೆ ಮತ್ತು ಈ ದೇಶದ ಧರ್ಮಾಚಾರಣೆಗಳಲ್ಲಿ ಅವರಿಗಿದ್ದ ಅಪರಿಮಿತ ನಂಬಿಕೆಯನ್ನು ಅವರ ಕಾಲದಲ್ಲಿ ರಾಷ್ಟ್ರಪತಿ ಭವನದ ಕಂಟ್ರೋಲರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್ ಆವರ ಅಂಗ್ಲ ಭಾಷೆಯ ಲೇಖನ ನಿಜಕ್ಕೂ ಹೃದಯವನ್ನು ತಟ್ಟಿದ ಕಾರಣ ಅದರ ಭಾವಾನುವಾವನ್ನು‌ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆಗ ತಾನೇ ಶ್ರೀ ಕಲಾಂ ಅವರು ರಾಷ್ಟ್ರಪತಿಗಳಾಗಿ ಪದವಿಯನ್ನು ಸ್ವೀಕರಿಸಿದ್ದರು. ಅವರಿಗೆ ರಾಷ್ಟ್ರಪತಿ ಭವನಕ್ಕೆ ಮೊದಲ ಬಾರಿಗೆ… Read More ಭಾವೈಕ್ಯತೆಯ ರಾಯಭಾರಿ ಅಬ್ದುಲ್ ಕಲಾಂ

ಸಮಸ್ಯೆ ಒಂದು ಪರಿಹಾರ ನೂರು

ಕಳೆದ ಒಂದು ವರ್ಷದಿಂದಲೂ ಕೊರೋನಾ ಮಾಹಾಮಾರಿಯಿಂದಾಗಿ ಇಡೀ ಪ್ರಪಂಚವೇ online ಮೂಲಕ ನಡೆದುಕೊಂಡು ಹೋಗುತ್ತಿದೆ. ನಮ್ಮ ದೇಶದ ವಿದ್ಯಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಹಳ್ಳಿಗಾಡುಗಳಲ್ಲಂತೂ ಸ್ವಲ್ಪ ಜೋರಾದ ಗಾಳಿ ಇಲ್ಲವೇ ಮಳೆ ಬಂದಿತೆಂದರೂ ಸಾಕು, ವಿದ್ಯುತ್ ಕಡಿತವಾಗಿ ನೆಟ್ವರ್ಕ್ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಇಲ್ಲೊಂದು ಗುಡ್ಡಗಾಡಿನ ಹಳ್ಳಿಯ ಹುಡುಗಿ ತನ್ನ ತರಗತಿಗಳು ಆನ್‌ಲೈನ್ ‌ನಲ್ಲಿ ಆರಂಭವಾಗಿದೆ. ಜೋರಾದ ಮಳೆಯಿಂದಾಗಿ ಮನೆಯಲ್ಲಿ ನೆಟ್ವರ್ಕ್ ಇಲ್ಲ. ಅರೇ.. ನೆಟ್ವರ್ಕ್ ಇಲ್ಲಾ ಎಂದು ಗೊಣಗಾಡದೇ ಕೂಡಲೇ, ಅಪ್ಪಾ ಮತ್ತು ತಂಗಿಯ ಜೊತೆ ಮನೆಯ… Read More ಸಮಸ್ಯೆ ಒಂದು ಪರಿಹಾರ ನೂರು

ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಸಾಮ್ಯಾನ್ಯವಾಗಿ ನಮ್ಮ ಹಿಂದಿನ ಕಾಲದವರು ಈಗಿನಷ್ಟು ಆರ್ಥಿಕವಾಗಿ ಸಧೃಡರಿಲ್ಲದಿದ್ದರೂ, ಸರಿಯಾಗಿ ಎರಡು ಹೊತ್ತು ಊಟ ಮಾಡಲು ಇರುತ್ತಿರದಿದ್ದರೂ, ಯಾವುದೇ ರೋಗ ರುಜಿನಗಳಿಲ್ಲದೇ ಆರಾಮವಾಗಿ 80-90 ವರ್ಷಗಳು ಜೀವಿಸುತ್ತಿದ್ದರು. ಅದೆಷ್ಟೋ ಜನ ಶತಾಯುಷಿಗಳಾಗಿಯೂ ಜೀವಿಸಿದ್ದರು. ಅವರ ನೆನಪಿನ ಶಕ್ತಿಯಂತೂ ಕೇಳುವುದೇ ಬೇಡ. ಹಾಗಾಗಿಯೇ ಸುಲಭವಾಗಿ ಐದಾರು ತಲೆಮಾರುಗಳನ್ನು ಸುಲಭವಾಗಿ ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಮಾಯವಾಗಿದೆ. 20-30 ವರ್ಷಕ್ಕೇ ಕೂದಲೆಲ್ಲಾ ಬೆಳ್ಳಾಗಾಗಿ ಅದೆಷ್ಟೋ ಮಂದಿಗಳಿಗೆ ಕೂದಲೆಲ್ಲ ಉದುರಿ ಹೋಗಿ, ಹತ್ತಾರು ರೀತಿಯ ಖಾಯಿಲೆಗಳಿಗೆ ತುತ್ತಾಗಿ ಊಟಕ್ಕಿಂತಲೂ ಹೆಚ್ಚಾಗಿ… Read More ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಮಾತೃ ಸ್ವರೂಪೀ ಅಪ್ಪಾ

ಅದೊಂದು ಐಶಾರಾಮೀ ಅಂತರಾಷ್ಟ್ರೀಯ ಶಾಲೆಯ ಉದ್ಯಾನವನದಲ್ಲಿ  ಗಂಗಣ್ಣ ಗಿಡಗಳಿಗೆ ನೀರನ್ನು ಹಾಕಿ ಪೋಷಿಸುತ್ತಿದ್ದರು. ಸಂಜೆ ಬಿಸಿಲು ತೀವ್ರವಾಗಿ ಅತನನ್ನು ಬಸವಳಿಸುತ್ತಿತ್ತಾದರೂ ಅದನ್ನು ಲೆಕ್ಕಿಸದೆ ತನ್ನ ಕರ್ತವ್ಯದಲ್ಲಿ ನಿರತನಾಗಿದ್ದ ಮಾಲಿ ಗಂಗಣ್ಣನ ಅವರ ಬಳಿ ಬಂದ ಸಹೋದ್ಯೋಗಿಯೊಬ್ಬರು, ಪ್ರಿನ್ಸಿಪಾಲ್ ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ. ಈ ಕೂಡಲೇ ಅವರನ್ನು ಭೇಟಿಯಾಗಬೇಕೆಂತೇ ಎಂದು ಹೇಳಿದರು. ಅರೇ! ಏನಪ್ಪಾ ಆಯ್ತು? ಪ್ರಿನ್ಸಿಪಾಲ್ ಮೇಡಂ ಕರೆಯುವಷ್ಟು ತಪ್ಪನ್ನು ನಾನೇನು ಮಾಡಿದೆ? ಎಂದು ಯೋಚಿಸುತ್ತಲೇ, ಭಯ ಭಯದಿಂದ ಬೆವರು ಸುರಿಯುತ್ತಿದ್ದ ಮುಖ ಮತ್ತು ಕೈಕಾಲುಗಳನ್ನು ತೊಳೆದುಕೊಂಡು… Read More ಮಾತೃ ಸ್ವರೂಪೀ ಅಪ್ಪಾ

ಭಾಷಾ ಭೂಷಣ

ಇತ್ತೀಚೆಗೆ ಟಿವಿಯಲ್ಲಿ ಪೌರಾಣಿಕ ಚಿತ್ರವೊಂದು ಪ್ರಸಾರವಾಗುತ್ತಿತ್ತು. ಪೌರಾಣಿಕ ಚಿತ್ರ ಎಂಬ ಕುತೂಹಲದಿಂದ ನೋಡಲು ಕುಳಿತುಕೊಂಡು ಕೊಂಡ ಅರ್ಧಗಂಟೆಗಳಲ್ಲಿಯೇ ಮನಸ್ಸಿಗೆ ನೋವಾಗಿ ನೋಡಲು ಅಸಹನೀಯವಾಯಿತು. ಅಕಾರ ಮತ್ತು ಹಕಾರದ ನಡುವಿನ ವ್ಯತ್ಯಾಸ ಅರಿಯದ, ಅವರ ಸಂಭಾಷಣೆಗೂ ಅವರ ಆಂಗಿಕ ಅಭಿನಯಕ್ಕೂ ಸಂಬಂಧವೇ ಇರದ, ಕನ್ನಡ ಭಾಷೆಯ ಮೇಲೆ ಸ್ವಲ್ಪವೂ ಹಿಡಿತವಿರದ ಅಪಾತ್ರರನ್ನೆಲ್ಲಾ ಪೌರಾಣಿಕ ಪಾತ್ರದಲ್ಲಿ ನೋಡುತ್ತಿದ್ದಾಗ, ಕನ್ನಡ ಕಸ್ತೂರಿ ಎನ್ನುವಂತಹ ಸೊಗಡಿರುವ ಭಾಷೆಯನ್ನು ಇಷ್ಟು ಕೆಟ್ಟದಾಗಿ ಕೊಲೆ ಮಾಡುತ್ತಿದ್ದಾರಲ್ಲಾ? ಎಂದೆನಿಸಿ ಕೂಡಲೇ ಅಭಿನಯ ಮತ್ತು ಭಾಷ ಶುದ್ಧತೆಯಲ್ಲಿ ಪರಿಪಕ್ವವಾಗಿದ್ದ… Read More ಭಾಷಾ ಭೂಷಣ

online shopping

ಎಲ್ಲರಿಗೂ ತಿಳಿದಿರುವಂತೆ ದಸರಾ ಮತ್ತು ದೀಪಾವಳಿ ಹಬ್ಬ ಬಂದಿತೆಂದರೆ ಇಡೀ ದೇಶಾದ್ಯಂತ ಸಂಭ್ರಮದ ಹಬ್ಬದ ವಾತಾವರಣ. ಈ ಸಂಭ್ರಮದ ಸಮಯದಲ್ಲಿ ಎಲ್ಲರ ಮನೆ ಮತ್ತು ಮನಗಳು ಏನಾದರೊಂದು ಹೊಸತೊಂದನ್ನು ಕೊಂಡು ತರಲು ಬಯಸಿ ವರ್ಷವಿಡೀ ಅದಕ್ಕಾಗಿ ಹಣವನ್ನು ಉಳಿಸಿ ಅದನ್ನು ಖರೀದಿಸಿ ತಂದರಂತೂ ಆಂದಕ್ಕೆ ಎಣೆಯೇ ಇಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಬಹುತೇಕ ದಕ್ಷಿಣ ಭಾರತದ ಕೈಗಾರಿಕೆಗಳು ಆಯುಧಪೂಜೆಯ ಸಂದರ್ಭಕ್ಕೆ ತಮ್ಮ ನೌಕರಿಗೆ ಬೋನಸ್ ನೀಡಿದರೆ, ಇನ್ನು ದೇಶಾದ್ಯಂತ ದೀಪಾವಳಿ ಹಬ್ಬಕ್ಕೆ ತಮ್ಮ ನೌಕರಿಗೆ ಯಥೇಚ್ಚವಾದ ಬೋನಸ್ ನೀಡುವ… Read More online shopping