ಶ್ರೀ ವೀರೇಂದ್ರ ಹೆಗ್ಗಡೆ

ನಾವು ಚಿಕ್ಕವರಿದ್ದಾಗ ಪುರಾಣ ಪುಣ್ಯಕಥೆಗಳಲ್ಲಿ ರಾಜರ್ಷಿ ಎಂದರೆ ಸದಾಕಾಲವು ಧರ್ಮಾತ್ಮನಾಗಿದ್ದು, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಸಮಾಜಮುಖೀ ಸೇವೆಗಳಲ್ಲಿ ನಿರತರಾಗಿರುವುದಲ್ಲದೇ, ಜನರು ತಮ್ಮ ಸಂಕಷ್ಟಗಳನ್ನೋ ಇಲ್ಲವೇ ವ್ಯಾಜ್ಯಗಳೊಂದಿಗೆ ಬಂದಾಗ ಅವರಿಗೆ ಸೂಕ್ತ ಪರಿಹಾರವನ್ನು ನೀಡುವವರಾಗಿರುತ್ತಾರೆ ಎಂದು ಕೇಳಿಯೋ ಇಲ್ಲವೇ ಓದಿ ತಿಳಿದಿದ್ದೇವೆ. ಈ ಕಲಿಯುಗದಲ್ಲಿಯೂ ಅಂತಹ ರಾಜರ್ಷಿಯವರು ಇದ್ದಾರೆಯೇ ಎಂದು ಯೋಚಿಸುತ್ತಿದ್ದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರ ಯಶೋಗಾಥೆಯನ್ನು ನೋಡಿದಲ್ಲಿ ನಮ್ಮ ಆ ಎಲ್ಲಾ ಕುತೂಹಲವನ್ನು ತಣಿಸುತ್ತದೆ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ತಟದಲ್ಲಿರುವ ಪುರಾಣ… Read More ಶ್ರೀ ವೀರೇಂದ್ರ ಹೆಗ್ಗಡೆ

ಮೂಗೂರು ಸುಂದರಂ ಮಾಸ್ಟರ್

ಅವಿಭಜಿತ ಮೈಸೂರು ಜಿಲ್ಲೆಯ ‍ಚಾಮರಾಜನಗರದ ಬಳಿಯ ಮೂಗೂರು ಗ್ರಾಮದ ತರುಣ, ಸಿನಿಮಾದ ಹುಚ್ಚಿನಿಂದ ದೂರದ ಮದ್ರಾಸಿಗೆ ಹೋಗಿ,  ಎಂಜಿಆರ್, ಎಂಟಿಆರ್, ಜಯಲಲಿತ ಅಂತಹ ಮುಖ್ಯಮಂತ್ರಿಗಳಿಂದ ಹಿಡಿದು, ರಾಜಕುಮಾರ್, ಶಿವಾಜಿ ಗಣೇಶನ್, ವಿಷ್ಣುವರ್ಧನ್, ರಜನೀಕಾಂತ್, ಚಿರಂಜೀವಿ, ಅಕ್ಕಿನೇನಿ ನಾಗೇಶ್ವರ್ ರಾವ್ ಇಂದ ಹಿಡಿದು ಅವರ ಕುಟುಂಬದ ಇತ್ತೀಚಿನ ನಟರ ವರೆಗೂ ಕುಣಿಸಿ ಕುಪ್ಪಳಿಸಿದ್ದಲ್ಲದೇ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಬಹುತೇಕ ನಟ ನಟಿಯರಿಂದ ನೃತ್ಯ ಮಾಡಿಸಿ, 1200ಕ್ಕೂ ಹೆಚ್ಚಿನ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಮೂಗೂರು ಸುಂದರಂ ಮಾಸ್ಟರ್… Read More ಮೂಗೂರು ಸುಂದರಂ ಮಾಸ್ಟರ್

ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್

ರಾಜ್ಯದಲ್ಲಿ ಈಗ ಪಂಚಾಯತಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮತ್ತು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೇ ಕೇವಲ ರಾಜ್ಯದಲ್ಲೇಕೇ, ಇಡೀ ರಾಷ್ಟ್ರದಲ್ಲಿಯೇ ಗ್ರಾಮೀಣ ಮಟ್ಟಕ್ಕೆ ಅಧಿಕಾರವನ್ನು ವಿಕೇಂದ್ರೀಕರಿಸಿದ ಹಿಂದಿರುವ ಕಥೆ ಬಲು ರೋಚಕವಾಗಿದೆ. ಅದು 1983, ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಪರ್ವ. ಸುಮಾರು 35-37 ವರ್ಷಗಳ ಕಾಲ ಕಾಂಗ್ರೇಸ್ ಆಡಳಿತದಿಂದ ಬೇಸತ್ತಿದ್ದ ಕನ್ನಡಿಗರು ಮೊತ್ತ ಮೊದಲ ಬಾರಿಗೆ ಕಾಂಗ್ರೇಸ್ಸನ್ನು ಧಿಕ್ಕರಿಸಿ, ಜನತಾ ಪಕ್ಷ + ಕ್ರಾಂತಿರಂಗ= ಜನತಾರಂಗವನ್ನು ಬೆಂಬಲಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ , ಬಿಜೆಪಿಯ… Read More ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್

ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್

ನಮಗೆಲ್ಲಾ ತಿಳಿದಿರುವಂತೆ ಐ.ಎ.ಎಸ್ ಅಧಿಕಾರಿಗಳೆಂದರೆ ಆಕಾಶದಿಂದ ನೇರವಾಗಿ ಈ ಧರೆಗೆ ಇಳಿದವರು ಎಂಬ ಹಮ್ಮು ಬಿಮ್ಮಿನಿಂದಲೇ ಸೂಟು ಬೂಟು ಧರಿಸಿಕೊಂಡು ಎಲ್ಲಿ ನೆಲದ ಮೇಲೆ ಕಾಲಿಟ್ಟರೆ ಅವರ ಕಾಲು ಸವೆದು ಹೋಗುತ್ತದೋ ಎಂದು ಸದಾಕಾಲವೂ ಐಶಾರಾಮಿ ಏಸಿ ಕಾರಿನಲ್ಲೇ ಓಡಾಡುತ್ತಾ ಏಸಿ ಕಛೇರಿಗಳಲ್ಲಿಯೇ ಕುಳಿತುಕೊಂಡು, ಆದಷ್ಟೂ ಜನರೊಂದಿಗೆ ಬೆರೆಯದೇ, ದೂರವೇ ಇದ್ದು ಅಧಿಕಾರವನ್ನು ಚಲಾಯಿಸುವರು ಎಂದೇ ಎಲ್ಲರ ಭಾವನೆ. ಆದರೆ ಇದಕ್ಕೆಲ್ಲವೂ ತದ್ವಿರುದ್ಧಂತೆ ಐ.ಎ.ಎಸ್ ಅಧಿಕಾರಿ ವರ್ಗದಲ್ಲಿಯೇ ಓರ್ವ ಸಂತ ಎಂದು ಬಣ್ಣಿಸಲ್ಪಟ್ಟ ಮತ್ತು ಧರಿಸುವ ವೇಷ… Read More ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್

ಗೊರೆ ಹಬ್ಬ (ಸಗಣಿ ಹಬ್ಬ)

ಗೋವಿನ ಸಗಣಿ ಎಂದರೆ ಅಸಹ್ಯ ಪಡುವಂತಹ ಇಂದಿನ ಕಾಲದಲ್ಲೂ, ದೀಪಾವಳಿಯ ಮಾರನೆಯ ದಿನ ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರಾಂತ್ಯದ, ಗುಮ್ಮಟಾಪುರದ ಆಬಾಲವೃದ್ಧರಾದಿಯಾಗಿ ಗಂಡಸರು ಸಾಂಪ್ರದಾಯಿಕ ರೂಪದಲ್ಲಿ ಪರಸ್ಪರ ಸಗಣಿಯನ್ನು ಎರೆಚಾರಿಕೊಂಡು ಪರಸ್ಪರ ಮನಸೋ ಇಚ್ಚೆ ಬಯ್ದಾಡಿಕೊಂಡು ವಿಲಕ್ಷಣ ಎನಿಸಿದರೂ ವಿಶಿಷ್ಟವಾಗಿ ಆಚರಿಸುವ ಗೊರೆ ಹಬ್ಬದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಗೊರೆ ಹಬ್ಬ (ಸಗಣಿ ಹಬ್ಬ)

ಡಾ. ಪ್ರಭಾಕರ್ ಭಟ್ ಕಲ್ಲಡ್ಕ

ಅವರು ಓದಿದ್ದು ಎಂ.ಬಿ.ಬಿ.ಎಸ್. ಅವರು ಮದುವೆಯಾದದ್ಫೂ ವೈದ್ಯರನ್ನೇ. ಇಬ್ಬರೂ ಯಾವುದೋ ಸರ್ಕಾರೀ ಸೇವೆ ಮಾಡಿಕೊಂಡು ತಿಂಗಳಂತ್ಯದಲ್ಲಿ ಕೈತುಂಬಾ ಸಂಬಳ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಇಲ್ಲವೇ ಗಂಡ ಹೆಂಡತಿ ಇಬ್ಬರೂ ಸೇರಿ ಒಂದು ಸುಸಜ್ಜಿತವಾದ ನರ್ಸಿಂಗ್ ಹೋಮ್ ಕಟ್ಟಿಸಿ ಲಕ್ಷ ಲಕ್ಷ ರೂಪಾಯಿಗಳನ್ನು ಸಂಪಾದಿಸಿಕೊಂಡು ಹಾಯಾಗಿ ಇರಬಹುದಿತ್ತು. ಅವರು ರಾಜಕಾರಣಕ್ಕೆ ಬಂದಿದ್ದರೆ ಇಷ್ಟು ಹೂತ್ತಿಗೆ ಶಾಸಕ ಇಲ್ಲವೇ ಸಂಸದರಾಗಿ ರಾಜ್ಯ ಸರ್ಕಾರವೋ ಇಲ್ಲವೇ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗ ಬಹುದಿತ್ತು. ಅವರು ಬಯಸಿದ್ದರೆ ಮುಖ್ಯಮಂತ್ರಿಗಳೂ ಆಗಬಹುದಿತ್ತು. ಆದರೆ ಆವರೆಂದೂ… Read More ಡಾ. ಪ್ರಭಾಕರ್ ಭಟ್ ಕಲ್ಲಡ್ಕ

ಅಂಟಿಗೆ – ಪಂಟಿಗೆ ಹಬ್ಬ

ನಾಡಿನಾದ್ಯಂತ ಸಡಗರ ಸಂಭ್ರಮಗಳಿಂದ ದೀಪಾವಳಿಯನ್ನು ಆಚರಿಸುತ್ತಿದ್ದರೆ, ಕರ್ನಾಟಕದ ಕರಾವಳಿಯ ಕೆಲವು ಮತ್ತು ಮಲೆನಾಡಿನ ಹಲವು ಪ್ರದೇಶದಲ್ಲಿ ಜಾತಿ ಜಾತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವಂತಹ, ದೀಪದಿಂದ ದೀಪ ಹಚ್ಚೇ ಎನ್ನುವಂತೆ ದೀಪದ ಮೂಲಕ ಎಲ್ಲರನ್ನೂ ಒಗ್ಗೂಡಿಸುವಂತಹ ಸಂಪ್ರದಾಯವೇ ಅಂಟಿಗೆ ಪಿಂಟಿಗೆ. ಈ ಸುಂದರ ಜನಪದ ಕಲೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ. … Read More ಅಂಟಿಗೆ – ಪಂಟಿಗೆ ಹಬ್ಬ

ಪ್ರಭಾತ್ ಕಲಾವಿದರು ಗೋಪೀನಾಥ ದಾಸರು

ಎಂಭತ್ತರ ದಶಕದವರೆಗೂ, ಪರಭಾಷಾ ನಾಯಕ ನಟಿಯರು ಮತ್ತು ನೃತ್ಯಗಾರ್ತಿಯರು ಕನ್ನಡ ‍ಚಿತ್ರರಂಗಕ್ಕೆ ಬರುವವರೆಗೂ, ಕನ್ನಡದ ಚಿತ್ರರಂಗಕ್ಕೆ ಹೊಸ ಮುಖದ ಪ್ರಬುದ್ಧ ನವರರಸವನ್ನೂ ಅಭಿನಯಿಸಿ ತೋರಿಸಬಲ್ಲಂತಹ ನಟಿಯರು, ಸಹ ನೃತ್ಯಗಾರ್ತಿಯರು ಬೇಕೆಂದಲ್ಲಿ, ಇಂದಿಗೂ ಯಾವುದೇ ಸಾಂಸ್ಕೃತಿಯ ಕಾರ್ಯಕ್ರಮ ಅಥವಾ ಪೌರಾಣಿಕ ನಾಟಕಗಳಿಗೆ ರಂಗ ಸಜ್ಜಿಕೆ ಮತ್ತು ಉಡುಪುಗಳು ಬೇಕಾದಲ್ಲಿ, ಇಲ್ಲವೇ ಅತ್ಯುತ್ತಮವಾದ ಆಧುನಿಕ ಧ್ವನಿವರ್ಧಕಗಳು ಮತ್ತು ಬೆಳಕಿನ ಪರಿಕರಗಳು ಬೇಕಿದ್ದಲ್ಲಿ, ಎಲ್ಲರೂ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಪ್ರಭಾತ್ ಕಲಾವಿದರು ತಂಡವನ್ನೇ ಆಶ್ರಯಿಸುತ್ತಾರೆ. ಅಂತಹ ಪ್ರಭಾತ್ ಕಲಾವಿದರು ತಂಡವನ್ನು ಆಸ್ಥೆಯಿಂದ ಕಟ್ಟಿ… Read More ಪ್ರಭಾತ್ ಕಲಾವಿದರು ಗೋಪೀನಾಥ ದಾಸರು

ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ

ಪ್ರಪಂಚದಾದ್ಯಂತ ನೂರಾರು ಧರ್ಮಗಳು ಮತ್ತು ಆಧ್ಯಾತ್ಮಿಕ ನಂಬಿಕೆಗಳು ಅಸ್ತಿತ್ವದಲ್ಲಿದ್ದು ಕಾಲಕಾಲಕ್ಕೆ ನಾನಾರೀತಿಯ ಆಕ್ರಮಣಕ್ಕೆ ಸಿಕ್ಕು ತಮ್ಮ ತನವನ್ನು ಕಳೆದುಕೊಂಡಿದೆ. ಆದರೆ ಸತತವಾಗಿ ಸಾವಿರಾರು ವರ್ಷಗಳ ಕಾಲ ಹಲವಾರು ಆಕ್ರಮಣಕಾರರ ಹೊಡತಕ್ಕೆ ಸಿಕ್ಕು ರಾಜಕೀಯವಾಗಿ ಸ್ವಾತಂತ್ಯ್ರವನ್ನೇ ಕಳಿದುಕೊಂಡರೂ, ತನ್ನ ಸಹಿಷ್ಣುತೆ, ಶ್ರೇಷ್ಠತೆ ಮತ್ತು ವಿಶಾಲತೆಯ ಕಾರಣದಿಂದಾಗಿ ಇಂದಿಗೂ ಜಗತ್ತಿನಲ್ಲಿ ತಲೆ ಎತ್ತಿ ವಿಶ್ವಗುರುವಾಗಲು ಹೊರಟಿರುವ ಧರ್ಮವೆಂದರೆ ನಮ್ಮ ಸನಾತನ ಧರ್ಮ. ಇಂತಹ ಸನಾತನ ಧರ್ಮದಲ್ಲಿ ಮತ್ತು ಇಂತಹ ಧರ್ಮದಲ್ಲಿ ಹುಟ್ಟಲು ಅದು ಎಷ್ಟು ಜನ್ಮ ಪುಣ್ಯ ಮಾಡಿರಬೇಕು. ನಮ್ಮ… Read More ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ