ಜೀವವಿದ್ದಲ್ಲಿ ಮಾತ್ರವೇ ಜೀವನ

ಕಳೆದ ಒಂದು ವಾರದಲ್ಲಿ, ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾಸದಸ್ಯರು, ನಾಲ್ಕು ಬಾರಿ ಸಾಂಸದರಾಗಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದವರು ಮತ್ತು ಹಿರಿಯ ಶಾಸಕರಲ್ಲದೇ. ಹೆಸರಾಂತ ಗಾಯಕರರಾದ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡಿದ್ದೇವೆ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಚಿಂತಾಜನಕವಾಗಿದೆ. ಇವರೆಲ್ಲರೀ ಪರಿಸ್ಥಿತಿಯ ಹಿಂದೆ ಮಹಾಮಾರಿ ಕೂರೋನಾ ಕೈವಾಡವಿರುವುದು ಸ್ಪಷ್ಟವಾಗಿದೆ. ಸಚಿವರು, ಶಾಸಕರು, ಸಮಾಜದ ಗಣ್ಯವ್ಯಕ್ತಿಗಳಿಗೇ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲವೆಂದರೆ, ಇನ್ನು ಸಾಮಾನ್ಯ ಜನಗಳ ಪಾಡೇನು? ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ವಹಿಸಿದ್ದರೂ, ಸಮಾಜದಲ್ಲಿ ದಿನೇ… Read More ಜೀವವಿದ್ದಲ್ಲಿ ಮಾತ್ರವೇ ಜೀವನ

ಸೂಳೆ ಕೆರೆ (ಶಾಂತಿ ಸಾಗರ)

ಸೂಳೆಕೆರೆ ಎಂಬ ಹೆಸರನ್ನು ಕೇಳಲು ಮುಜುಗರ ಎನಿಸಿದರೂ, ಅ ಕೆರೆಯನ್ನು ಕಟ್ಟಿಸುವ ಹಿಂದಿರುವ ಪತಿತ ಪಾವನೆಯ ಪಾವಿತ್ರತೆ ನಿಜಕ್ಕೂ ಅದ್ಭುತವಾಗಿದ್ದು ಅದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಸೂಳೆ ಕೆರೆ (ಶಾಂತಿ ಸಾಗರ)

ಗೌರವ

ನಮ್ಮ ಸನಾತನ ಧರ್ಮದಲ್ಲಿ ಮೊತ್ತ ಮೊದಲಬಾರಿಗೆ ನಮಗೆ ಅರಿವೇ ಇಲ್ಲದಂತೆಯೇ ನಮಗೆಲ್ಲಾ ಕಲಿಸುವುದೇ ದೈವ ಭಕ್ತಿ ಮತ್ತು ಗುರು ಹಿರಿಯರಿಗೆ ಗೌರವವನ್ನು ಕೊಡುವುದೇ ಆಗಿದೆ. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುತು ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಮನೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಸ್ವಲ್ಪ ಅಕ್ಕ ಪಕ್ಕದಲ್ಲಿ ನೋಡಿದ್ದು ಮತ್ತು ಕೇಳಿದ್ದು ಅದಕ್ಕೆ ಅರಿವಾಗುತ್ತಿದೆ ಅಂದ ತಕ್ಷಣ ಅದಕ್ಕೆ ಪ್ರತಿಯಾಗಿ ಅದು ಕೈ ಕಾಲು ಬಡಿಯುತ್ತಲೋ ಇಲ್ಲವೇ ಕಿಸಕ್ಕನೇ ನಗುವ ಮೂಲಕ ಪ್ರತ್ಯುತ್ತರ… Read More ಗೌರವ

ಕೊಡುಗೈ ರಾಜು

ಅದು 1998. ನನ್ನ ಮದುವೆಗಾಗಿ ಹೆಣ್ಣು ನೋಡುತ್ತಿದ್ದ ಸಮಯದಲ್ಲಿ ತಮ್ಮ ಮಗಳ ಜಾತಕವನ್ನು ಹಿಡಿದುಕೊಂಡು ಮೊತ್ತ ಮೊದಲ ಬಾರಿಗೆ ಸುಮಾರು 6 ಅಡಿಯಷ್ಟು ಎತ್ತರದ ಸುಂದರ ಮೈಕಟ್ಟಿನ ನಡು ವಯಸ್ಸಿನವರು ನಮ್ಮ ಮನೆಗೆ ಬಂದು ತಮ್ಮನ್ನು ತಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಳ್ಳುತ್ತಾರೆ. ಒಂದು ಗಂಡಿಗೆ ಒಂದು ಹೆಣ್ಣು ಎಂದು ಹುಟ್ಟಿಸುವಾಗಲೇ ಬ್ರಹ್ಮ ಬರೆದು ಕಳುಹಿಸಿರುತ್ತಾನೆ ಎಂಬಂತೆ ಜಾತಕಗಳೆಲ್ಲವೂ ಕೂಡಿ ಬಂದ ಕಾರಣ, ಅದೇ ಗುರುವಾರ ಸಂಜೆ ನನ್ನ ಜೀವನದಲ್ಲಿಯೇ ಪ್ರಪ್ರಥಮವಾಗಿ ಮತ್ತು ಅಧಿಕೃತವಾಗಿ… Read More ಕೊಡುಗೈ ರಾಜು

ದೇವರು ಎಷ್ಟು ದೊಡ್ಡವರು?

ಅದೊಂದು ಸಂಪ್ರದಾಯಸ್ಥ ಕುಟುಂಬ. ಅದೊಂದು ದಿನ ಅ ಮನೆಯ ಸಣ್ಣ ವಯಸ್ಸಿನ ಹುಡುಗನೊಬ್ಬ ತನ್ನ ತಂದೆಯನ್ನುದ್ದೇಶಿಸಿ, ಅಪ್ಪಾ, ನಾವು ನಂಬುವ ದೇವರು ದೊಡ್ಡವರಾಗಿರುತ್ತಾರೆ? ಅವರ ಗಾತ್ರವೇನು? ಎಂದು ಮುಗ್ಧತೆಯಿಂದ ಕೇಳುತ್ತಾನೆ. ಮಗನ ಪ್ರಶ್ನೆಯಿಂದ ಕೊಂಚ ಆಶ್ವರ್ಯ ಚಕಿತನಾದ ತಂದೆ ಒಂದು ಕ್ಶಣ ಮೌನವಾಗಿ ಯೋಚಿಸಿ ಇದಕ್ಕೆ ಹೇಗೆ ಉತ್ತರಿಸುವುದು ಎಂದು ನೋಡುತ್ತಿರುವಾಗಲೇ ಆಗಸದಲ್ಲಿ ವಿಮಾನವೊಂದು ಹೋಗುತ್ತಿರುತ್ತದೆ. ಕೂಡಲೇ ಮಗೂ, ಆ ವಿಮಾನದ ಗಾತ್ರ ಎಷ್ಟು ಎಂದು ಹೇಳಬಲ್ಲೆಯಾ ಎಂದು ಪ್ರಶ್ನಿಸುತ್ತಾನೆ. ಆಗಸದತ್ತ ದಿಟ್ಟಿಸಿ ವಿಮಾನವನ್ನು ನೋಡಿದ ಹುಡುಗ,… Read More ದೇವರು ಎಷ್ಟು ದೊಡ್ಡವರು?

ತಬಲಾ ವಾದಕಿ ರಿಂಪಾ ಶಿವಾ

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನ ಅಥವಾ ತಬಲಾ ಸಾಥಿ ಎಂದಾಕ್ಷಣ ಎಲ್ಲರ ಕಣ್ಣ ಮುಂದೆಯೂ ಪುರುಷರೇ ಕಣ್ಣ ಮುಂದಿಗೆ ಬರುತ್ತಾರೆ. ಆದರೆ ಈ ಸಂಪ್ರದಾಯವನ್ನು ಮೀರಿ ಪುರುಷ ಪ್ರಧಾನದ ಏಕತಾನತೆಯನ್ನು ಮುರಿದು ಪಕ್ಕವಾದ್ಯದಲ್ಲಿ ಮಿಂಚಿ ಮೆರೆಯುತ್ತಿರುವ ತಬಲಾ ಮಾಂತ್ರಿಕ ಜಾಕೀರ್‌ ಹುಸೇನ್‌ ಅವರಿಂದ ಸರಸ್ವತಿಯ ಪ್ರತಿರೂಪ ಎಂದು ಹೊಗಳಿಸಿಕೊಂಡಿರುವ ಅಧ್ಬುತವಾದ ಪ್ರತಿಭೆಯಾದ, ಸಂಗೀತ ಲೋಕದ ಅತಿ ಅಪರೂಪದ ಸಾಧಕಿ, ಕೋಲ್ಕತ್ತದ ಕುಮಾರಿ ರಿಂಪಾ ಶಿವ ನಮ್ಮ ಈ ದಿನದ ಕಥಾವಸ್ತು. ಫರೂಕಾಬಾದ್‌ ಘರಾನಾಕ್ಕೆ ಹೆಸರಾದ… Read More ತಬಲಾ ವಾದಕಿ ರಿಂಪಾ ಶಿವಾ

ದಿಢೀರ್ ಪಾಲಾಕ್ ದೋಸೆ

ಸಾಮಾನ್ಯವಾಗಿ ದೋಸೆ ಮಾಡಬೇಕು ಅಂದ್ರೇ, ಹಿಂದಿನ ದಿನ ದೋಸೆ ಹಿಟ್ಟನ್ನು ರುಬ್ಬಿಟ್ಟುಕೊಂಡು ಮಾರನೇ ದಿನ ದೋಸೆ ಮಾಡುವುದು ಸಹಜ ಪ್ರಕ್ರಿಯೆ. ಆದರೆ ನಾವಿಂದು ದಿಢೀರ್ ಆಗಿ ಆರೋಗ್ಯಕರವಾದ ಪಾಲಾಕ್ ದೋಸೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತೋರಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಪಾಲಾಕ್ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಪಾಲಾಕ್ ಸೊಪ್ಪು – 1 ಕಟ್ಟು ಪುದಿನಾ ಸೊಪ್ಪು – 1/2 ಕಟ್ಟು ಶುಂಠಿ – 1/4 ಇಂಚು ಹಸಿರು ಮೆಣಸಿನಕಾಯಿ -5-6… Read More ದಿಢೀರ್ ಪಾಲಾಕ್ ದೋಸೆ

ಉಸರೀಕಾಯಿ (ಸುಂಡಕಾಯಿ) ವತ್ತ ಕೊಳಂಬು 

ತಮಿಳುನಾಡಿನ ಯಾವುದೇ ಸಮಾರಂಭಗಳಿಗೆ ಹೋದಲ್ಲಿ ಅಥವಾ ಹೋಟೆಲ್ಗಳಲ್ಲಿ ಉಣಬಡಿಸುವ ಸಾಂಪ್ರದಾಯಿಕ ಅಡುಗೆಯಾದ ಉಸುರೀಕಾಯಿ (ಸುಂಡಕಾಯಿ) ವತ್ತ ಕೊಳಂಬು ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ವತ್ತ ಕೊಳಂಬು ಮಾಡಲು ಅವಶ್ಯವಾಗಿರುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಕಡಲೇಬೇಳೆ – 2 ಚಮಚ ಉದ್ದಿನಬೇಳೆ- 2 ಚಮಚ ದನಿಯ- 1 ಚಮಚ ಮೆಂತ್ಯ- 1 ಚಮಚ ಮೆಣಸು- 1 ಚಮಚ ಜೀರಿಗೆ- 1 ಚಮಚ ಒಣಮೆಣಸಿನಕಾಯಿ – 5-6… Read More ಉಸರೀಕಾಯಿ (ಸುಂಡಕಾಯಿ) ವತ್ತ ಕೊಳಂಬು 

ಶ್ರಾಧ್ಧ

ನಮ್ಮ ಹಿಂದೂಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಹುಟ್ಟಿದಾರಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಈ ಐದೂ ಋಣಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರವೇ ಅವರಿಗೆ ಅಂತಿಮವಾಗಿ ಸದ್ಗತಿ ದೊರೆಯುತ್ತದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಆ ಐದು ಋಣಗಳೆಂದರೆ, ದೇವಋಣ, ಋಷಿಋಣ, ಪಿತೃಋಣ, ಭೂತಋಣ ಮತ್ತು ಸಮಾಜಋಣ. ಈ ಐದು ಋಣಗಳಲ್ಲಿ ಪಿತೃಋಣವನ್ನು ತೀರಿಸುವ ಸಲುವಾಗಿ ಶ್ರಾಧ್ಧಕರ್ಮ ಮಾಡುವುದು ಆವಶ್ಯಕವಾಗಿದೆ. ಈ ಭೂಮಿಯಲ್ಲಿ ನಮ್ಮ ಜನನಕ್ಕೆ ಕಾರಣೀಭೂತರಾದ ನಮ್ಮ ತಂದೆ ತಾಯಿಯರು ಮತ್ತು ನಮ್ಮ ವಂಶದವರಿಗೆ ಅವರಿಂದ ಪಡೆದ… Read More ಶ್ರಾಧ್ಧ