ಹೀರೇಕಾಯಿ ಹುಳಿಸೊಪ್ಪು

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ  ಹೀರೇಕಾಯಿ ಹುಳಿಸೊಪ್ಪು ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಹೀರೇಕಾಯಿ ಹುಳಿಸೊಪ್ಪು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹೀರೇಕಾಯಿ – 1 ಹಸಿರು ಮೆಣಸಿನಕಾಯಿ – 4-5 ಹುಣಸೇಹಣ್ಣು – ಅರ್ಧ ನಿಂಬೇ ಗಾತ್ರದ್ದು… Read More ಹೀರೇಕಾಯಿ ಹುಳಿಸೊಪ್ಪು

ಕೊಹಿನೂರು ವಜ್ರ ನಮ್ಮ ಕರ್ನಾಟಕದ ಸ್ವತ್ತು 

ಅರೇ 105.6 ಕ್ಯಾರೆಟ್ ತೂಕದ  ಪ್ರಸ್ತುತ 350 ಮಿಲಿಯನ್ ಯುಎಸ್ ಡಾಲರ್ ಅಂದರೆ 23,28,95,07,500 ರೂ. ಬೆಲೆ ಬಾಳುವಂತಹ ಲಂಡನ್ ಗೋಪುರದ ಜ್ಯುವೆಲ್ಹೌಸ್‌ನಲ್ಲಿ 1911 ರಲ್ಲಿ ಕ್ವೀನ್ ಮೇರಿಯ ಕಿರೀಟದದ ಮೂಲಕ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿರುವ ಆ ಕೋಹಿನೂರ್ ವಜ್ರವೆಲ್ಲಿ ನಮ್ಮ ಕರ್ನಾಟಕವೆಲ್ಲಿ?  ಅಲ್ಲಿಗೂ ಇಲ್ಲಿಗೂ ಎಲ್ಲಿಯ ಬಾದರಾಯಣ ಸಂಬಂಧ? ಸ್ವಲ್ಪ ಉಸಿರು ಬಿಗಿ ಮಾಡಿಕೊಂಡು ಇದನ್ನು ಕೇಳ್ತಾ/ಈ ಲೇಖನ ಓದುತ್ತಾ ಹೋದಂತೆಲ್ಲಾ ನಿಮಗೇ ಅರ್ಥವಾಗುತ್ತದೆ. ಆರ್ಟಿಐ ಕಾರ್ಯಕರ್ತ ಶ್ರೀ ರೋಹಿತ್ ಸಬರ್ ವಾಲ್ ಅವರು ಮಾಹಿತಿ ಹಕ್ಕು… Read More ಕೊಹಿನೂರು ವಜ್ರ ನಮ್ಮ ಕರ್ನಾಟಕದ ಸ್ವತ್ತು 

ಭುವನ ಗಾಂಧಾರಿ, ತಾಯಿ ಶ್ರೀ ಚಾಮುಂಡೇಶ್ವರಿ

ಮೊನ್ನೆ ಇದ್ದಕ್ಕಿದ್ದಂತೆಯೇ ಆತ್ಮೀಯರೊಬ್ಬರು ಕರೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಭುವನೇಶ್ವರಿ, ಭುವನ ಮನೋಹರಿ ಎಂದೆಲ್ಲಾ ಉಪಮೇಯಗಳಿಂದ ಕರೆಯುವುದು ವಾಡಿಕೆಯಲ್ಲಿದೆ. ಇತ್ತೀಚೆಗೆ ಅಚಾನಕ್ಕಾಗಿ ನನ್ನ ಬಾಯಿಂದ ಭುವನ ಗಾಂಧಾರೀ ಎಂಬ ಪದ ಹೊರಬಂದಿದೆ. ತಾಯಿ ಶ್ರೀ ಚಾಮುಂಡೇಶ್ವರಿಗೆ ಭುವನ ಗಾಂಧಾರೀ ಎಂದು ಕರೆದ ಉಲ್ಲೇಖ ಎಲ್ಲಾದರೂ ಇದೆಯೇ? ಇಲ್ಲದಿದ್ದಲ್ಲಿ ನಾವು ಹಾಗೆ ಕರೆಯಬಹುದೇ? ಎಂದು ನೋಡಿ ತಿಳಿಸಿ ಎಂದು ಕೇಳಿಕೊಂಡಾಗ ಭುವನ ಗಾಂಧಾರೀ ಎನ್ನುವ ಪದ ನನಗೂ ಹೊಸತು ಎನಿಸಿದರೂ ಸ್ವಲ್ಪ ವಿಚಾರ ಮಾಡೋಣ ಎಂದು ಎಲ್ಲಾ ಕಡೆಯಲ್ಲಿಯೂ… Read More ಭುವನ ಗಾಂಧಾರಿ, ತಾಯಿ ಶ್ರೀ ಚಾಮುಂಡೇಶ್ವರಿ

ಶ್ರೀ ಗುರುಭ್ಯೋ ನಮಃ

ಸೂಟು, ಕೋಟು, ಬೂಟು, ಕುತ್ತಿಗೆಯಲ್ಲಿ ಟೈ.‌ಅದಕ್ಕೆ ಮಿರಿ‌ಮಿರಿ ಮಿಂಚುವ ಟೈ ಪಿನ್, ತೆಲೆಯ ಮೇಲೊಂದು ಮೈಸೂರು ಪೇಟ, ಹಣೆಯಲ್ಲಿ ಕೆಂಪನೆಯ ಉದ್ದನೆಯ ನಾಮ, ಕಣ್ಣಿಗೆ ಅಗಲವಾದ ಕನ್ನಡಕ, ನೋಡಲು ಕುಳ್ಳಗಿರುವ ವ್ಯಕ್ತಿಯೊಬ್ಬರು ತಮಗಿಂತಲೂ ಎತ್ತರವಿದ್ದ ಸೈಕಲ್ಲನ್ನು ತುಳಿದುಕೊಂಡು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುತ್ತಿದ್ದರು. ಹೊರಗಿನಿಂದ ನೋಡಿದರೆ ಬಾರೀ ಶಿಸ್ತಿನ ಕೋಪಿಷ್ಟ ಎನ್ನುವಂತೆ ಕಾಣಿಸಿಕೊಂಡರೂ, ಸ್ವಲ್ಪ ಹೊತ್ತು ಮಾತನಾಡಿಸಿದರೆ ಅವರಷ್ಟು ಮೃದು ಸ್ವಭಾವದ ವ್ಯಕ್ತಿ ಮತ್ತೊಬ್ಬರು ಇರಲಿಕ್ಕಿಲ್ಲ ಎಂದೆಸುವಂತಹ ವ್ಯಕ್ತಿತ್ವ. ಬಹುಶಃ ಎಪ್ಪತ್ತು, ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ… Read More ಶ್ರೀ ಗುರುಭ್ಯೋ ನಮಃ

ಹಾಗಲಕಾಯಿ ಎಣ್ಣೆಗಾಯಿ ಮತ್ತು ಮಸಾಲೆ ರೊಟ್ಟಿ

ಎಣ್ಣೆಗಾಯಿ ಅಂದ ತಕ್ಷಣವೇ, ಥಟ್ ಅಂತ ನೆನಪಿಗೆ ಬರುವುದೇ ಉತ್ತರ ಕರ್ನಾಟಕದ ಸಾಂಪ್ರದಾಯಕ ಅಡುಗೆ ಗುಳ್ಳ ಬದನೇಕಾಯಿ ಎಣ್ಗಾಯ್ ಆದರೆ ಅದೇ ಎಣ್ಗಾಯ್ ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಸಾಂಪ್ರದಾಯಕವಾದ ಹಾಗಲಕಾಯಿ ಎಣ್ಣೆಗಾಯಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಎಣ್ಣೆಗಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗಲಕಾಯಿ – 4-5 ಈರುಳ್ಳಿ – 2-3 ಬೆಳ್ಳುಳ್ಳಿ 4-6 ಎಸಳು ಕೊತ್ತಂಬರಿ ಸೊಪ್ಪು – 2… Read More ಹಾಗಲಕಾಯಿ ಎಣ್ಣೆಗಾಯಿ ಮತ್ತು ಮಸಾಲೆ ರೊಟ್ಟಿ

ಡೊಡ್ಡಪತ್ರೇ ಸೊಪ್ಪಿನ ತೊಕ್ಕು

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಡೊಡ್ಡಪತ್ರೇ ಸೊಪ್ಪಿನ ತೊಕ್ಕು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಡೊಡ್ಡಪತ್ರೇ ಸೊಪ್ಪಿನ ತೊಕ್ಕು ತಯಾರಿಸಲು ಬೇಕಾಗುವ ಸಾಮಗ್ರಿಗಳು ದೊಡ್ಡಪತ್ರೆ – 20 ರಿಂದ 25 ಎಲೆ ಹುಣಸೇಹಣ್ಣು – ನಿಂಬೆ… Read More ಡೊಡ್ಡಪತ್ರೇ ಸೊಪ್ಪಿನ ತೊಕ್ಕು

ಕಾಗೆ, ಅರಳೀ, ಆಲದ ಮರಗಳು ಮತ್ತು ನಮ್ಮ ಪೂರ್ವಜರು

ತಮ್ಮ ಗುರುಗಳನ್ನು ಭೇಟಿ ಮಾಡಲು ಹೋಗಿದ್ದ ಭಕ್ತರೊಬ್ಬರು ಕುತೂಹಲದಿಂದ, ಸ್ವಾಮಿಗಳೇ, ಪಿತೃಪಕ್ಷ ಮತ್ತು ಶ್ರಾದ್ಧದ ಸಮಯದಲ್ಲಿ ನಾವು ಕೇವಲ ಕಾಗೆಗಳಿಗೆ ಮಾತ್ರ ಆಹಾರವನ್ನು ಏಕೆ ಇಡುತ್ತೇವೆ? ಇತರೇ ಹಕ್ಕಿಗಳಿಗೇಕೆ ಇಡುವುದಿಲ್ಲ? ನಮ್ಮ ಪೂರ್ವಜರು ಕಾಗೆಗಳ ರೂಪದಲ್ಲಿ ಬಂದು ಪಿಂಡವನ್ನು ತಿನ್ನುತ್ತಾರೆ ಎಂದರೆ ನಮ್ಮ ಪೂರ್ವಜರು ಅಷ್ಟು ನಿಕೃಷ್ಟರೇ ? ಎಂದು ಪ್ರಶ್ನಿಸುತ್ತಾರೆ. ಶಿಷ್ಯನ ಈ ಮುಗ್ಧ ಪ್ರಶ್ನೆಗೆ ಅಷ್ಟೇ ಸೌಮ್ಯ ನಗುವಿನೊಂದಿಗೆ ಉತ್ತರಿಸಿದ ಗುರುಗಳು ನಾವು ಕಾಗೆಯನ್ನು ಕಾಕ ಎಂದೂ ಕರೆಯುತ್ತೇವೆಯೇ ಹೊರತು ಇದರ ಹೊರತಾಗಿ ಬೇರೆ… Read More ಕಾಗೆ, ಅರಳೀ, ಆಲದ ಮರಗಳು ಮತ್ತು ನಮ್ಮ ಪೂರ್ವಜರು

ಕೀಟ ನಾಶ ಮತ್ತು ಪರಿಸರದ ಹಾನಿ

ಬಹುಶಃ ಒಂದು ಹತ್ತು ವರ್ಷಗಳ ಹಿಂದೆ ಕಾರಿನಲ್ಲಿ ದೂರಪ್ರಯಾಣಿಸುವವರಿಗೆ ತಮ್ಮ ಕಾರಿನ ವಿಂಡ್ ಷೀಲ್ಡ್ ಮೇಲೆ ಧಾಳಿ ಮಾಡುತ್ತಿದ್ದ ಕೀಟಗಳ ದಾಳಿಯನ್ನು ತಡೆಯುವುದೇ ಕಷ್ಟವಾಗುತ್ತಿತ್ತು. ವೇಗವಾಗಿ ಚಾಲನೆಯಾಗುತ್ತಿರುವ ವಾಹನಗಳಿಗೆ ಸಣ್ಣ ಸಣ್ಣ ಕ್ರಿಮಿ ಕೀಟಗಳು ಅಪ್ಪಳಿಸಿ ನಾಶವಾಗುತ್ತಿದ್ದದ್ದಲ್ಲದೇ ವಾಹನದ ಗಾಜಿಗೆ ಗಟ್ಟಿಯಾಗಿ ಕಚ್ಚಿ ಕೊಂಡು ಅವುಗಳನ್ನು ತಡೆಯುವುದಾಗಲೀ, ತೊಳೆಯುವುದಾಗಲೀ ಕಷ್ಟವಾಗುತ್ತಿತ್ತು. ಆದರೆ ಇಂದಿನ ಬಹುತೇಕ ಯುವಕರಿಗೆ ಅಂತಹ ಸಮಸ್ಯೆಯ ಅರಿವೇ ಇಲ್ಲವಾಗಿದ್ದು ಆಹ್ಲಾದಕರವಾಗಿ ದೂರಪ್ರಯಾಣ ಮಾಡುತ್ತಿದ್ದಾರೆ.. ಹಾಗಾದರೇ ಆ ಸಮಸ್ಯೆಗಳು ಹೇಗೆ ಶಾಶ್ವತವಾಗಿ ಪರಿಹಾರವಾದವೇ? ಎಂಬುದರ ಬೆನ್ನತ್ತಿ… Read More ಕೀಟ ನಾಶ ಮತ್ತು ಪರಿಸರದ ಹಾನಿ

ವಿಶ್ವ ತೆಂಗಿನ ದಿನ

ಇವತ್ತು ಬೆಳಿಗ್ಗೆ ವಾಟ್ಸಾಪ್ಪಿನಲ್ಲಿ ಸ್ನೇಹಿತರ ಸಂದೇಶಗಳನ್ನು ಓದುತ್ತಿದ್ದಾಗ ಅತ್ಯುತ್ತಮ ಕಲೆಗಾರ ಮತ್ತು ಕ್ರಿಯಾತ್ಮಕ ಗುಣವುಳ್ಳ ಗೆಳೆಯ ಅಶೋಕ್ ವಿಶ್ವ ತೆಂಗಿನ ದಿನದ ಶುಭಾಶಯಗಳು ಎಂದು ಕಳುಹಿಸಿದಾಗ, ತಕ್ಷಣವೇ, ಅರೇ ಹೀಗೂ ಉಂಟೇ? ಎಂದು ಪ್ರತ್ಯುತ್ತರ ನೀಡಿ ಅದರ ಕುರಿತಂತೆ ಹೆಚ್ಚಿನ ವಿವರಗಳನ್ನು ಗೂಗಲ್ ಮಾಡಿ ನೋಡಿದಾಗ ತಿಳಿದು ಬಂದ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಪ್ರತೀ ವರ್ಷದ ಸೆಪ್ಟೆಂಬರ್ 2ನೇ ದಿನವನ್ನು ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಸುಮಾರು 18 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಇಂಡೋನೇಷ್ಯಾದ ಜಕಾರ್ತಾದಲ್ಲಿದಲ್ಲಿ ಮುಖ್ಯ… Read More ವಿಶ್ವ ತೆಂಗಿನ ದಿನ