ಶೃಂಗೇರಿ ದಸರಾ

ನವರಾತ್ರಿ ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು ಇದನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದೇ ಇಲ್ಲವಾಗಿರುವುದು ವಿಪರ್ಯಾಸವೇ ಸರಿ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ. 1336 ರಲ್ಲಿ ಉತ್ತರಭಾರತದವನ್ನು… Read More ಶೃಂಗೇರಿ ದಸರಾ

ಮಡಿಕೇರಿ ದಸರಾ

ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುವ ದಸರಾದಂತೆಯೇ ಕೊಡಗಿನ ಮಡಿಕೇರಿಯ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇಂತಹ ಅದ್ದೂರಿಯಾದ ಮಡಿಕೇರಿ ದಸರಾ ಹಬ್ಬದ ಹಿನ್ನೆಲೆ ಮತ್ತು ಆಚರಣೆಯ ಬಗ್ಗೆ ಸವಿಸ್ತಾರವಾಗಿ ತಿಳಿದು ಕೊಳ್ಳೋಣ. ಮೈಸೂರಿನ ದಸರಾಕ್ಕಿರುವ ಇತಿಹಾಸದಂತೆಯೇ ಮಡಿಕೇರಿ ದಸರಾಕ್ಕೂ ಪುರಾತನವಾದ ಇತಿಹಾಸವಿದ್ದು,… Read More ಮಡಿಕೇರಿ ದಸರಾ

ಏರ್ ಇಂಡಿಯ

ಇತ್ತೀಚೆಗೆ ದೇಶಾದ್ಯಂತ ನೆಡೆಯುತ್ತಿರುವ ಬಹುಮುಖ್ಯ ಚರ್ಚೆ ಎಂದರೆ, ಈ ಸರ್ಕಾರ ದೇಶವನ್ನು ಒಂದೊಂದಾಗಿ ಮಾರಲು ಹೊರಟಿದೆ. ಸರ್ಕಾರ ನಡೆಸಿ ಎಂದು ಅವರನ್ನು ಅಧಿಕಾರಕ್ಕೆ ತಂದರೆ ಇವರು ಹೀಗೆ ಒಂದೊಂದೇ ಸರ್ಕಾರೀ ಸಂಸ್ಥೆಗಳನ್ನು ಮಾರಾಟ ಮಾಡಲು ಅವರಿಗೆ ಯಾವ ಹಕ್ಕಿದೆ? ಎಂಬುದರ ಕುರಿತಾಗಿದೆ. ಹಾಗಾದರೆ ನಿಜವಾಗಿಯೂ ನಡೆಯುತ್ತಿರುದಾದರೂ ಏನು? ಎಂಬುದರ ಕುರಿತಾಗಿ ಚರ್ಚೆ ಮಾಡೋಣ. ಅದೊಂದು ಸಣ್ಣ ಮಕ್ಕಳ ಶಾಲೆ. ಶಾಲೆಯ ಶಿಕ್ಷಕಿ ಪ್ರತೀ ವಿದ್ಯಾರ್ಥಿಗಳಿಗೂ ಒಂದೊಂದು ಹಣ್ಣನ್ನು ತರಲು ಹೇಳಿದ್ದ ಕಾರಣ ಎಲ್ಲಾ ಮಕ್ಕಳೂ ಸಂತೋಷದಿಂದ ಮಾರನೆಯ… Read More ಏರ್ ಇಂಡಿಯ

ಸಿರಿವಂತರ ಮಕ್ಕಳೇ ಹೀಗೇಕೇ?

ಅಕ್ಟೋಬರ್ 2, ಗಾಂಧಿ ಜಯಂತಿ. ದೇಶಕ್ಕೆ ಸ್ವಾತ್ರಂತ್ರ್ಯ ತಂದು ಕೊಟ್ಟವರಲ್ಲಿ ಮುಂಚೂಣಿಯಲ್ಲಿದ್ದ ನಾಯಕನಿಗೆ ಗೌರವ ಅರ್ಪಿಸುವ ಸಲುವಾಗಿ ಅವರು ಪಾಲಿಸುತ್ತಿದ್ದ ಅಹಿಂಸಾ ತತ್ವವನ್ನು ಎತ್ತಿ ಹಿಡಿಯುವ ಸಲುವಾಗಿ ಆ ದಿನ ದೇಶಾದ್ಯಂತ ಮಧ್ಯ ಮತ್ತು ಮಾಂಸದ ವ್ಯಾಪಾರವನ್ನು ನೀಷೇಧಿಸಲಾಗಿರುತ್ತದೆ ಮತ್ತು ಇಡೀ ದಿನ ಗಾಂಧಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಯುವ ಜನತೆಗೆ ತಿಳಿಸುವ ಕಾರ್ಯದಲ್ಲಿ ಬಹುತೇಕ ಎಲ್ಲರೂ ನಿರತರಾಗಿರುವಾಗಲೇ ಅದೇ ರಾತ್ರಿ ಮುಂಬೈಯ್ಯಿನ ಐಷಾರಾಮಿ ಹಡುಗೊಂದರಲ್ಲಿ ಬೆಚ್ಚಿ ಬೀಳುವ ಸಂಗತಿಯೊಂದು ನಡೆದಿದೆ. ಸಮಾಜದಲ್ಲಿ ಗಣ್ಯರೆನಿಸಿಕೊಂಡವರ ಮಕ್ಕಳು… Read More ಸಿರಿವಂತರ ಮಕ್ಕಳೇ ಹೀಗೇಕೇ?

ತಾರತಮ್ಯ

ಅಕ್ಟೋಬರ್ 2, ದೇಶದ ಇಬ್ಬರು ಮಹಾನ್ ನಾಯಕರ ಜಯಂತಿ. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರೇ ಆದರೂ, ಒಬ್ಬರು ಚರಕ ಹಿಡಿದು ದೇಶವನ್ನು ವಿಭಜಿಸಿ ಶತ್ರುರಾಷ್ಟ್ರದ ಸೃಷ್ಟಿಗೆ ಕಾರಣೀಭೂತರಾದರೇ ಅದೇ ಮತ್ತೊಬ್ಬರು ಹಾಗೆ ಸೃಷ್ಟಿಯಾದ ಶತ್ರುರಾಷ್ಟ್ರ ನಮ್ಮ ದೇಶದ ಮೇಲೆ ಕಾಲು ಕೆರೆದುಕೊಂಡು ಧಾಳಿ ನಡೆಸಿದಾಗ ತಮ್ಮ ದಿಟ್ಟ ನಿರ್ಧಾರಗಳಿಂದ ನರಕ ಸದೃಶವನ್ನು ತೋರಿಸಿದವರು. ಅದರೆ ಅದೇಕೋ ಏನೋ ಅಕ್ಟೋಬರ್ 2ರಂದು ಅದಾವುದೋ ಪೂರ್ವಾಗ್ರಹ ಪೀಡಿತರಾಗಿ ಮೊದಲನೆಯವರನ್ನೇ ಎತ್ತಿ ಮೆರೆದಾಡುತ್ತಾ ಎರಡನೆಯವರನ್ನು ನಗಣ್ಯರೀತಿಯಲ್ಲಿ ಕಡೆಗಾಣಿಸುವುದು ಈ ದೇಶದ ಪ್ರಾಮಾಣಿಕ ದೇಶ… Read More ತಾರತಮ್ಯ

ಲಾಲ್ ಬಹದ್ದೂರ್ ಶಾಸ್ತ್ರಿ

ನಮ್ಮ ದೇಶದಲ್ಲಿ ಅಧಿಕಾರವನ್ನು ಕೆಲವರು ಆಯ್ಕೆ ಮುಖಾಂತರ ದಕ್ಕಿಸಿಕೊಂಡು  ಹತ್ತಾರು ವರ್ಷಗಳ ಕಾಲ ದೇಶವನ್ನು ಆಳಿದರೂ ಹೇಳಿಕೊಳ್ಳುವ ಸಾಧನೆ ಮಾಡದೇ ಹೋಗುತ್ತಾರೆ. ಇನ್ನು ಹಲವರು ಜನರಿಂದ ರಾಜತಾಂತ್ರಿಕವಾಗಿ ಆಯ್ಕೆಯಾಗಿ ಅಧಿಕಾರದಲ್ಲಿ ಕೆಲವೇ ತಿಂಗಳುಗಳ ಕಾಲ ಇದ್ದರೂ ಇಡೀ ದೇಶವೇ ನೂರಾರು ವರ್ಷಗಳ ಕಾಲ ನೆನಪಿಸಿಕೊಳ್ಳುವಂತಹ ಸಾಧನೆಯನ್ನು ಮಾಡಿ ಎಲೆಮರೆ ಕಾಯಿಯಂತೆ ಹೋಗಿಬಿಡುತ್ತಾರೆ. ಇಂದು ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ಗ್ರಿಗಳು ಎರಡನೇ ರೀತಿಯ ವ್ಯಕ್ತಿಯಾಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ಗ್ರಿಗಳು… Read More ಲಾಲ್ ಬಹದ್ದೂರ್ ಶಾಸ್ತ್ರಿ

ಗುಜರಾತಿ ಥೇಪ್ಲ

ಪ್ರತೀ ದಿನ ಬೆಳಿಗ್ಗೆ ಅದೇ ರೊಟ್ಟಿ, ಚಪಾತಿನಾ? ಎಂದು ಕೇಳುವ ಮಕ್ಕಳಿಗೆ ಯಾವ ತಿಂಡಿ ಮಾಡೋದಪ್ಪಾ ಎಂಬ ಜಿಜ್ಞಾಸೆ ಬಹುತೇಕ ಹೆಣ್ಣುಮಕ್ಕಳಿಗೆ ಕಾಡುವುದು ಸಹಜವಾಗಿದೆ. ಅಂತಹವರಿಗಾಗಿಯೇ ಆಕರ್ಷಣೀಯವಾದ, ಅಷ್ಟೇ ಪರಿಮಳಯುಕ್ತವಾದ, ಪೌಷ್ಥಿಕವಾದ, ರುಚಿಯಾದ ಮನೆಯವರೆಲ್ಲರೂ ಇನ್ನೂ ಬೇಕು ಮತ್ತಷ್ಟು ಬೇಕು ಎಂದು ಕೇಳಿ ಕೇಳಿ ತಿನ್ನುವಂತಹ ಗುಜರಾತಿ ಥೇಪ್ಲ ಮಾಡುವ ವಿಧಾನವನ್ನು ನಮ್ಮ ನಳಪಾಕದಲ್ಲಿ ತಿಳಿದುಕೊಳ್ಳೋಣ. ಥೇಪ್ಲ ತಯಾರಿಸಲು ಬೇಕಾಗುವ ಪದಾರ್ಥಗಳು ಗೋಧಿ ಹಿಟ್ಟು – 2 ಬಟ್ಟಲು ಕಡಲೇ ಹಿಟ್ಟು – 1/4 ಬಟ್ಟಲು ಅಚ್ಚ… Read More ಗುಜರಾತಿ ಥೇಪ್ಲ

ತಾಜಾ ಆಹಾರ

ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್… Read More ತಾಜಾ ಆಹಾರ

ಎಲ್ಲರಂತಲ್ಲ ನನ್ನ ಮಕ್ಕಳು

ಅರೇ! ಇದೇನಿದು ಈ ರೀತಿಯ ಶೀರ್ಷಿಕೆ? ನಿಮ್ಮ ಮಕ್ಕಳು ಅದೇನು ಅಷ್ಟು ದೊಡ್ಡ ಸಾಧಕರೇ? ಎಂದು ಕೇಳಿದರೆ, ನಾನು ಯಾವುದೇ ಮುಚ್ಚುಮರೆ ಇಲ್ಲದೇ ಹೇಳುತ್ತೇನೆ. ಇಲ್ಲಾ ನನ್ನ ಮಕ್ಕಳು ಸರಾಸರಿಯವರು ಮತ್ತು ನಾನು ಸರಾಸರಿ ಮಕ್ಕಳ ತಂದೆ. ನನ್ನ ಮಕ್ಕಳು ಶಾಲೆಯ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವಲ್ಲಿ ಸರಾಸರಿ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಓಹೋ!! ಎಂದು ಹೇಳಿಕೊಳ್ಳುವಂತಿಲ್ಲದ ಸರಾಸರಿಯವರು. ಹಾಗಾದರೆ ಆವರ ವಿಶೇಷತೆಗಳೇನು? ಎಂದು ಕೇಳಿದರೆ ಸದ್ಯಕ್ಕೆ ಸಮಾಜದ ದೃಷ್ಟಿಯಲ್ಲಿ ಮತ್ತು ಶೈಕ್ಷಣಿಕವಾಗಿ ಅವರು ಅಂತಹದ್ದೇನನ್ನೂ ಸಾಧಿಸಿಲ್ಲ… Read More ಎಲ್ಲರಂತಲ್ಲ ನನ್ನ ಮಕ್ಕಳು