ಆಟ ಇನ್ನೂ ಬಾಕೀ ಇದೆ.

ನೆನ್ನೆಯ ದಿನ ವೀಕೆಂಡ್ ಕರ್ಘ್ಯೂ ಇದ್ದ ಕಾರಣ ಸಾವಯವ ಸಂತೆಯನ್ನು ಬಂದ್, Online ಮುಖಾಂತರವೇ ಸಾಂಘೀಕ್ಕಿನಲ್ಲಿ ಭಾಗವಹಿಸಿ, ಆತ್ಮೀಯರ ಮಗನ ಮದುವೆಯಲ್ಲೂ Online ಮುಖಾಂತರ ಆಶೀರ್ವದಿಸಿ, ಮನೆಯ ಗೇಟಿನ ಹೊರಗೂ ಹೋಗದೇ ಪಟ್ಟಾಗಿ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದೆ. ಸಮಯೋಚಿತವಾಗಿೆ ಚೆನ್ನಾಗಿ ಜೀರಿಗೆ, ಕಾಳುಮೆಣಸು, ಶುಂಠಿ ಮತ್ತು ಮನೆಯಲ್ಲೇ ಕಡೆದು ತೆಗೆದ ಬೆಣ್ಣೆಯ ತುಪ್ಪ ಹಾಕಿ ಮಾಡಿದ್ದ ನವಣೆ ಹುಗ್ಗಿ(ಪೊಂಗಲ್) ಜೊತೆಗೆ ಕಾಯಿ, ಕೊತ್ತಂಬರಿ ಮತ್ತು ಪುದಿನಾ ಹಾಕಿದ ಚೆಟ್ಟಿ ತಿಂದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಅನಂದಿಸಿ… Read More ಆಟ ಇನ್ನೂ ಬಾಕೀ ಇದೆ.

ದೇಶದ ವಾಸ್ತವತೆ ಮತ್ತು ನಮ್ಮ ಜವಾಬ್ಧಾರಿ

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯಮಾದ್ಯಮಗಳಲ್ಲಿ ಇದ್ದಕ್ಕಿದ್ದಂತೆಯೇ ಕೊರೋನಾ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ಬಂದಿರುವಂತಿದೆ. ಇದಕ್ಕಿದ್ದಂತೆಯೇ ಜಾಗೃತರಾಗಿ ಈ ಕೊರೋನಾ ಮಾಹಾಮಾರಿ ಉಲ್ಪಣವಾಗುವುದಕ್ಕೆ ಈ ರಾಜ್ಯಸರ್ಕಾರವೇ ಕಾರಣ ಈ ಕೇಂದ್ರ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಪುಂಖಾನುಪುಂಖವಾಗಿ ಹರಿಹಾಯುತ್ತಿರುವುದಲ್ಲದೇ, ಈ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಆಡಳಿತ ನಡೆಸಲು ಅಸಮರ್ಥರಾದಲ್ಲಿ ರಾಜಿನಾಮೆ ನೀಡಿ ಹೊರ ಬನ್ನಿ ಎನ್ನುತ್ತಿದ್ದಾರೆ ಇನ್ನೂ ಕೆಲವು ಕೆಲವರು ಮೋದಿ ಮತ್ತು ಬಿಜೆಪಿ ಪಕ್ಷದ ಮೇಲಿನ ತಮ್ಮ ವಯಕ್ತಿಕ ಹಿತಾಸಕ್ತಿಗಳಿಂದಾಗಿ  ಸರ್ಕಾರವನ್ನು… Read More ದೇಶದ ವಾಸ್ತವತೆ ಮತ್ತು ನಮ್ಮ ಜವಾಬ್ಧಾರಿ

ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಅರೇ ಇದೇನಿದು ಇಂತಹ ವಿಲಕ್ಷಣ ಮತ್ತು ಹೃದಯವಿದ್ರಾವಕ ಶೀರ್ಷಿಕೆ ಅಂದುಕೊಳ್ತಾ ಇದ್ದೀರಾ? ಖಂಡಿತವಾಗಿಯೂ ಇದು ವಿಲಕ್ಷಣವಾಗಿರದೇ ಇಂದಿನ ಜೀವನದ ಕಠು ಸತ್ಯವಾಗಿದೆ. ಇದೇ ವಾರದಲ್ಲಿ ನಡೆದ ಎರಡು ಕರುಣಾಜನಕ ಕತೆ ಮತ್ತು ವ್ಯಥೆ ಇದೋ ನಿಮಗಾಗಿ. ಶ್ರೀಯುತ ಆಚಾರ್ ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಸಾಕಷ್ಟು ಸ್ಥಿತಿವಂತರಾಗಿದ್ದು ಕಾರು ಬಾರು ನಡೆಸಿದ್ದವರು. ಗಂಡು ಮಕ್ಕಳಿಬ್ಬರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಬದಕನ್ನರಿಸಿ ರಾಜಧಾನಿ ಬೆಂಗಳೂರಿಗೆ ಬಂದಾಗ ನಮಗೆ ಪರಿಚಯವಾದವರು. ಮಕ್ಕಳು ತಮ್ಮ ಕಛೇರಿಯ ಮೂಲಕ ವಿದೇಶಕ್ಕೆ ಹೋಗಿ ನಂತರದ… Read More ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಶ್ರೀರಾಮ ನವಮಿ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದಿವಿ ಇದೇನು ಹೊಸಾ ಶ್ರೀರಾಮ ನವಮಿ ಸ್ಟ್ರೈಕ್ ಅಂತಾ ಯೋಚನೆ ಮಾಡ್ತಿರ್ತೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಇದುವರೆಗೂ ಯಾರಿಗೂ ಹೇಳಿದಿದ್ದ ಶ್ರೀರಾಮ ನವಮಿ ಸ್ಟ್ರೈಕ್ ಅಂತಹ ರೋಚಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ. ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಗ ತಾನೆ ಶುರುವಾಗಿದ್ದ ಸ್ಟಾರ್ಟಪ್ ಕಂಪನಿಯೊಂದರ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ. ಭಾರತೀಯರೊಬ್ಬರೇ ಅಮೇರಿಕಾದಲ್ಲಿ ಆರಂಭಿಸಿದ ಕಂಪನಿಯೊಂದರ ಶಾಖೆಯನ್ನು ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆರಂಭಿಸಿದ್ದರು. ಬೆಂಗಳೂರು… Read More ಶ್ರೀರಾಮ ನವಮಿ ಸ್ಟ್ರೈಕ್

ಪ್ರೊ. ಜಿ. ವೆಂಕಟಸುಬ್ಬಯ್ಯನವರು

ಕನ್ನಡ ಎಂದ ತಕ್ಷಣ ನೆನಪಾಗುವ ಕೆಲವೇ ಕೆಲವು ಮಂದಿಯರಲ್ಲಿ ಇಗೋ ಕನ್ನಡದ ಮೂಲಕ ನಾಡಿನ ಮನೆಮಾತಾಗಿದ್ದ ಶತಾಯುಷಿಗಳಾಗಿದ್ದ ಶ್ರೀ ಜಿ ವೆಂಕಟಸುಬ್ಬಯ್ಯವರು ಎಂದರೂ ತಪ್ಪಾಗದು. ಪ್ರೊ. ಜಿ. ವೆಂಕಟಸುಬ್ಬಯ್ಯನವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಪ್ರೊ. ಜಿ. ವೆಂಕಟಸುಬ್ಬಯ್ಯನವರು

ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

ವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು… Read More ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

ವಿವೇಕವಂತ ಹಾಸ್ಯನಟ ವಿವೇಕ್ ಅಜರಾಮರ

ಹಾಸ್ಯ ಮನುಷ್ಯರ ಜೀವನದ ಅವಿಭಾಜ್ಯ ಅಂಗ. ಜೀವನದ ಏಕಾನತೆಯಿಂದಾಗಲೀ ದುಃಖದಿಂದಾಗಲೀ ಹೊರಬರಲು ಜನರಿಗೆ ಸಹಾಯ ಮಾಡುವುದೇ, ತಿಳಿಹಾಸ್ಯ ಹಾಗಾಗಿಯೇ ಸರ್ಕಸ್, ನಾಟಕ, ಚಲನಚಿತ್ರಗಳಲ್ಲಿ ಮನೋರಂಜನೆಯ ಭಾಗವಾಗಿ ಒಂದಷ್ಟು ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ನೋಡುತ್ತಾ ಅನುಭವಿಸುತ್ತಾ ಕೆಲ ಕಾಲ ತಮ್ಮ ನೋವುಗಳನ್ನು ಮರೆಯುವಂತೆ ಮಾಡುವುದರಲ್ಲಿ ಸಫಲತೆಯನ್ನು ಕಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು, ದಿನೇಶ್, ಉಮೇಶ್, ಇತ್ತೀಚಿನ ಜಗ್ಗೇಶ್, ಚಿಕ್ಕಣ್ಣ, ಕುರಿಪ್ರತಾಪ್ ರಂತಹ ದಂಡೇ ಇದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಗೌಂಡಮಣಿ… Read More ವಿವೇಕವಂತ ಹಾಸ್ಯನಟ ವಿವೇಕ್ ಅಜರಾಮರ

ಉಷ್ಟ್ರಾರೂಢಾ ಹನುಮಂತ

ವಾಯುಪುತ್ರ ಆಂಜನೇಯನಿಗೆ ಗಾಳಿಯಲ್ಲಿ ಸ್ವತಃ ತಾನೇ ನೂರಾರು ಯೋಜನಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಅದನ್ನು ಸೀತಾನ್ವೇಷಣೆಯ ಸಂಧರ್ಭದಲ್ಲಿ ಸಮುದ್ರ ಲಂಘನದ ಸಮಯದಲ್ಲಿ ನಿರೂಪಿಸಿಯೂ ಇದ್ದ ಆದರೂ, ಆಂಜನೇಯಯನ ಅನೇಕ ದೇವಾಲಯಗಳಲ್ಲಿ ಅಂಜನೇಯಯನ ವಿಗ್ರಹದ ಮುಂದೆ ಒಂಟೆಯನ್ನು ಇಟ್ಟಿರುತ್ತಾರಲ್ಲದೇ ಅವರನ್ನು ಉಷ್ಟ್ರಾರೂಡಾ ಎಂದೂ ಕರೆಯಲಾಗುತ್ತದೆ. ರಾಮಾಯಣ ಮತ್ತು ಪರಾಶರ ಸಂಹಿತೆಯಲ್ಲಿಯೂ ಹನುಮಂತ ಗಾಳಿಯ ವೇಗದಲ್ಲಿ ಹಾರಬಲ್ಲ ಎಂಬುವ ಅನೇಕ ಉದಾಹರಣೆಗಳನ್ನು ವಿವರಿಸುತ್ತಾರೆ ಮತ್ತು ಲಂಕೆಯನ್ನು ತಲುಪಲು ಸಾಗರದಾದ್ಯಂತ ಹಾರಾಟ, ಸಂಜೀವೀನಿಯನ್ನು ತರುವ ಸಲುವಾಗಿ ಲಂಕೆಯಿಂದ ಹಿಮಾಲಯಕ್ಕೆ… Read More ಉಷ್ಟ್ರಾರೂಢಾ ಹನುಮಂತ

ತದಿಗೆ/ಸೌಭಾಗ್ಯ ಗೌರಿ ವ್ರತ

ಸ್ವರ್ಣಗೌರಿ ಗೌರಿ ವ್ರತ ಗೊತ್ತು, ಮಂಗಳ ಗೌರಿ ವ್ರತ ಪೂಜೆ ಗೊತ್ತು. ಅದ್ರೇ ಇದೇನಿದು ತದಿಗೆ ಗೌರಿ ವ್ರತ ಅಥವಾ ಸೌಭಾಗ್ಯ ಗೌರಿವ್ರತ ಅಂತ ಯೋಚನೆ ಮಾಡುತ್ತಿದ್ದೀರಾ? ಚೈತ್ರ ಮಾಸದ ಮೊದಲ ದಿನ ಅಂದರೆ ಪಾಡ್ಯದಂದು ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸುತ್ತೆವೆ. ಇನ್ನು ಎರಡನೇ ದಿನ ಬಿದಿಗೆ ವರ್ಷತೊಡಕನ್ನು ಆಚರಿಸುತ್ತೇವೆ ಮತ್ತು ಈ ದಿನ ಚಂದ್ರನ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಯುಗಾದಿಯಾದ ಮೂರನೇ ದಿನ ತೃತೀಯ ಅಥವಾ ತದಿಗೆಯಂದು ಕೆಲವೆಡೆ ಗೌರಿಯ ವ್ರತವನ್ನು ಮಾಡುವ ಪದ್ದತಿ… Read More ತದಿಗೆ/ಸೌಭಾಗ್ಯ ಗೌರಿ ವ್ರತ