ಪಂಚರಾಜ್ಯಗಳ ಪಂಚನಾಮೆ

ಕಳೆದ ಎರಡು ತಿಂಗಳಲ್ಲಿ ಕೊರೋನಾದ ಜೊತೆಗೆ ಜೊತೆಗೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದ್ದ ಪಂಚರಾಜ್ಯ ಚುನಾವಣೆಗೆ ಇಂದು ಅಂತ್ಯ ಕಂಡಿದ್ದು ಹಲವಾರು ಮಿಶ್ರ ಮತ್ತು ಅಚ್ಚರಿ ಫಲಿತಾಂಶಗಳು ಬಂದಿವೆ. ಅಸ್ಸಾಂ, ಕೇರಳ, ಪಶ್ವಿಮಬಂಗಾಳ, ಪುದುಚೆರಿ ಮತ್ತು ತಮಿಳುನಾಡಿನಲ್ಲಿ ವಿಧಾನ ಸಭೆಗೆ ಚುನಾವಣೆಗಳು ನಡೆದರೆ, ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆಗೆ ಚುನಾವಣೆ ನಡೆದರೆ ದೇಶದ ಅನೇಕ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿದ್ದರೂ, ಎಲ್ಲರ ಗಮನ ಈ ಐದು ರಾಜ್ಯಗಳತ್ತವೇ ಹರಿದಿತ್ತು ಚಿತ್ತ. ಕಳೆದ ಲೋಕಸಭೆಯಲ್ಲಿ ಅನಿರೀಕ್ಷಿತವಾಗಿ… Read More ಪಂಚರಾಜ್ಯಗಳ ಪಂಚನಾಮೆ

ಉಲ್ಟೇ ಹನುಮಾನ್ ಮಂದಿರ್

ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು… Read More ಉಲ್ಟೇ ಹನುಮಾನ್ ಮಂದಿರ್

ಕಲ್ಲಂಗಡಿಹಣ್ಣು ಮತ್ತು ನಮ್ಮ ಜೀವನದ ಮೌಲ್ಯಗಳು

ಹೇಳಿ ಕೇಳಿ ಇದು ಬೇಸಿಗೆ ಕಾಲ. ಬೇಸಿಗೆ ಕಾಲದಲ್ಲಿ ತಣ್ಣಗೆ ಇರುವ ಪದಾರ್ಥಗಳನ್ನು ತಿನ್ನುವ ಮತ್ತು ಕುಡಿಯುವ ಮೂಲಕ ದೇಹವನ್ನು ತಣ್ಣಗೆ ಇಟ್ಟುಕೊಳ್ಳಲು ಬಯಸುತ್ತೇವೆ. ಇದಕ್ಕೆ ಅನುಗುಣವಾಗಿ ನಮ್ಮ ಪ್ರಕೃತಿಯೂ ನಮ್ಮೊಂದಿಗೆ ಇದ್ದು ಬೇಸಿಗೆ ಕಾಲದಲ್ಲಿಯೇ ತಣ್ಣನೆ ಹಣ್ಣುಗಳಾದ ಕಲ್ಲಂಗಡಿ ಮತ್ತು ಕರ್ಬೂಜ (ಸಿದ್ದೋಟೆ ಹಣ್ಣು) ರಸ್ತೆಗಳ ಬದಿಗಳಲ್ಲಿಯೂ ಮತ್ತು ಮಾರುಕಟ್ಟೆಗಳಲ್ಲಿಯೂ ಸಿಗುತ್ತಿತ್ತು. ಉಳ್ಳವರು ಉಂಡೇ ಹಣ್ಣುಗಳನ್ನೇ ಕೊಂಡುಕೊಳ್ಳುತಿದ್ದರೆ, ಕೈಯ್ಯಲ್ಲಿ ಕಾಸಿಲ್ಲದವರು ಕತ್ತರಿಸಿಟ್ಟ ಹಣ್ಣುಗಳನ್ನು ತಿಂದು ತಮ್ಮ ನಾಲಿಗೆಯ ಬರವನ್ನು ಕಳೆದುಕೊಳ್ಳುತ್ತಿದ್ದರು. ಆಗೆಲ್ಲಾ ಬೇಸಿಗೆಯ ಸಮಯದಲ್ಲಿ ನದಿಗಳು… Read More ಕಲ್ಲಂಗಡಿಹಣ್ಣು ಮತ್ತು ನಮ್ಮ ಜೀವನದ ಮೌಲ್ಯಗಳು

ಅಪ್ಪೆ ಸಾರು (ಮಾವಿನ ಸಾರು)

ಹೇಳಿ ಕೇಳಿ ಇದು ಮಾವಿನ ಕಾಯಿ ಕಾಲ. ಈಗಷ್ಟೇ ಮಾವಿನ ಕಾಯಿಗಳು ಚೆನ್ನಾಗಿ ಬಲಿತು ಇನ್ನೇನು ಕೆಲವೇ ದಿನಗಳಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಲಗ್ಗೆ ಇಡಲು ಸಜ್ಜಾಗಿವೆ (ಈಗಾಗಲೇ ಕೆಲವು ಮಾವಿನ ಹಣ್ಣುಗಳು ಲಭ್ಯವಿದೆ) ಈ ಬಲಿತ ಮಾವಿನ ಕಾಯಿಯಲ್ಲಿ ಉಪ್ಪಿನಕಾಯಿ, ಮಾವಿನ ಕಾಯಿ ಚಿತ್ರಾನ್ನ, ಮಾವಿನಕಾಯಿ ಕಾಯಿ ಸಾಸಿವೆ ಮಾಡಿಕೊಂಡು ಚಪ್ಪರಿಸುತ್ತೇವೆ. ಇಂದು ಉತ್ತರ ಕನ್ನಡ ಮತ್ತು ಮಲೆನಾಡಿನ ಕಡೆಯಲ್ಲಿ ಇದೇ ಮಾವಿನ ಕಾಯಿಯನ್ನು ಬಳಸಿಕೊಂಡು ಮಾಡುವ ಧಿಡೀರ್ ಆಗಿ ಅಪ್ಪೆ ಸಾರು ಮಾಡುವ… Read More ಅಪ್ಪೆ ಸಾರು (ಮಾವಿನ ಸಾರು)

ಸಂಘ ಮತ್ತು ಸಂಘದ ಸ್ವಯಂಸೇವಕರು

ಸ್ವಾತಂತ್ರ್ಯ ಬಂದಾಗಲಿಂದಲೂ ಒಂದೇ ಕುಟುಂಬದ, ತುಷ್ಟೀಕರಣದ ಸ್ವಾರ್ಥ ಆಡಳಿತಕ್ಕೆ ಒಗ್ಗಿ ಹೋದಿದ್ದವರಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವವಾದ ಜನ ಬೆಂಬಲದೊಂದಿಗೆ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದು ಮತ್ತೆ 2019 ರಲ್ಲಿ ಮತ್ತೊಮ್ಮೆ ಭಾರಿ ಜನಬೆಂಬಲದೊಂದಿಗೆ ಪುನಃ ಆಡಳಿತಕ್ಕೆ ಬಂದಿರುವುದು ಅನೇಕರಿಗೆ ನುಂಗಲಾರದ ತುತ್ತಾಗಿದೆ. ಮೋದಿಯವರು ಆಡಳಿತಕ್ಕೆ ಬಂದ ಕೂಡಲೇ ಇದ್ದಕ್ಕಿದ್ದಂತೆಯೇ ದೇಶದಲ್ಲಿ ಅಸಹಿಷ್ಣುತೆ ಮತ್ತು ಅಭದ್ರತೆ ಕಾಡತೊಡಗಿತು. ಕೆಲವರು ದೇಶ ಬಿಡುವ ಮಾತನಾಡಿದರೆ ಇನ್ನೂ ಕೆಲವರು ಸರ್ಕಾರ ಕೊಟ್ಟಿದ್ದ ಪ್ರಶಸ್ತಿ ಪುರಸ್ಕಾರಗಳನ್ನು… Read More ಸಂಘ ಮತ್ತು ಸಂಘದ ಸ್ವಯಂಸೇವಕರು

ಹನುಮ ವರ್ಧಂತಿ

ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಪ್ರಭು ಶ್ರೀರಾಮನ ಪರಮ ಭಕ್ತ, ಅಂಜನಿಯ ಪುತ್ರ ಆಂಜನೇಯನು ಹುಟ್ಟಿದ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನವನ್ನು ದೇಶಾದ್ಯಂತ ಹನುಮ ಜಯಂತಿ ಎಂದು ಆಚರಿಸುವಾಗ, ಇದೇನಿದು ಹನುಮ ವರ್ಧಂತಿ? ಎಂದು ಯೋಚಿಸುತ್ತಿರುವವರಿಗೆ ಇದೋ ಇಲ್ಲಿದೆ ಉತ್ತರ… Read More ಹನುಮ ವರ್ಧಂತಿ

ಆಟ ಇನ್ನೂ ಬಾಕೀ ಇದೆ.

ನೆನ್ನೆಯ ದಿನ ವೀಕೆಂಡ್ ಕರ್ಘ್ಯೂ ಇದ್ದ ಕಾರಣ ಸಾವಯವ ಸಂತೆಯನ್ನು ಬಂದ್, Online ಮುಖಾಂತರವೇ ಸಾಂಘೀಕ್ಕಿನಲ್ಲಿ ಭಾಗವಹಿಸಿ, ಆತ್ಮೀಯರ ಮಗನ ಮದುವೆಯಲ್ಲೂ Online ಮುಖಾಂತರ ಆಶೀರ್ವದಿಸಿ, ಮನೆಯ ಗೇಟಿನ ಹೊರಗೂ ಹೋಗದೇ ಪಟ್ಟಾಗಿ ಮನೆಯಲ್ಲಿಯೇ ಇರಲು ನಿರ್ಧರಿಸಿದ್ದೆ. ಸಮಯೋಚಿತವಾಗಿೆ ಚೆನ್ನಾಗಿ ಜೀರಿಗೆ, ಕಾಳುಮೆಣಸು, ಶುಂಠಿ ಮತ್ತು ಮನೆಯಲ್ಲೇ ಕಡೆದು ತೆಗೆದ ಬೆಣ್ಣೆಯ ತುಪ್ಪ ಹಾಕಿ ಮಾಡಿದ್ದ ನವಣೆ ಹುಗ್ಗಿ(ಪೊಂಗಲ್) ಜೊತೆಗೆ ಕಾಯಿ, ಕೊತ್ತಂಬರಿ ಮತ್ತು ಪುದಿನಾ ಹಾಕಿದ ಚೆಟ್ಟಿ ತಿಂದು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಅನಂದಿಸಿ… Read More ಆಟ ಇನ್ನೂ ಬಾಕೀ ಇದೆ.

ದೇಶದ ವಾಸ್ತವತೆ ಮತ್ತು ನಮ್ಮ ಜವಾಬ್ಧಾರಿ

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯಮಾದ್ಯಮಗಳಲ್ಲಿ ಇದ್ದಕ್ಕಿದ್ದಂತೆಯೇ ಕೊರೋನಾ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ಬಂದಿರುವಂತಿದೆ. ಇದಕ್ಕಿದ್ದಂತೆಯೇ ಜಾಗೃತರಾಗಿ ಈ ಕೊರೋನಾ ಮಾಹಾಮಾರಿ ಉಲ್ಪಣವಾಗುವುದಕ್ಕೆ ಈ ರಾಜ್ಯಸರ್ಕಾರವೇ ಕಾರಣ ಈ ಕೇಂದ್ರ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಪುಂಖಾನುಪುಂಖವಾಗಿ ಹರಿಹಾಯುತ್ತಿರುವುದಲ್ಲದೇ, ಈ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಆಡಳಿತ ನಡೆಸಲು ಅಸಮರ್ಥರಾದಲ್ಲಿ ರಾಜಿನಾಮೆ ನೀಡಿ ಹೊರ ಬನ್ನಿ ಎನ್ನುತ್ತಿದ್ದಾರೆ ಇನ್ನೂ ಕೆಲವು ಕೆಲವರು ಮೋದಿ ಮತ್ತು ಬಿಜೆಪಿ ಪಕ್ಷದ ಮೇಲಿನ ತಮ್ಮ ವಯಕ್ತಿಕ ಹಿತಾಸಕ್ತಿಗಳಿಂದಾಗಿ  ಸರ್ಕಾರವನ್ನು… Read More ದೇಶದ ವಾಸ್ತವತೆ ಮತ್ತು ನಮ್ಮ ಜವಾಬ್ಧಾರಿ

ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಅರೇ ಇದೇನಿದು ಇಂತಹ ವಿಲಕ್ಷಣ ಮತ್ತು ಹೃದಯವಿದ್ರಾವಕ ಶೀರ್ಷಿಕೆ ಅಂದುಕೊಳ್ತಾ ಇದ್ದೀರಾ? ಖಂಡಿತವಾಗಿಯೂ ಇದು ವಿಲಕ್ಷಣವಾಗಿರದೇ ಇಂದಿನ ಜೀವನದ ಕಠು ಸತ್ಯವಾಗಿದೆ. ಇದೇ ವಾರದಲ್ಲಿ ನಡೆದ ಎರಡು ಕರುಣಾಜನಕ ಕತೆ ಮತ್ತು ವ್ಯಥೆ ಇದೋ ನಿಮಗಾಗಿ. ಶ್ರೀಯುತ ಆಚಾರ್ ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಸಾಕಷ್ಟು ಸ್ಥಿತಿವಂತರಾಗಿದ್ದು ಕಾರು ಬಾರು ನಡೆಸಿದ್ದವರು. ಗಂಡು ಮಕ್ಕಳಿಬ್ಬರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಬದಕನ್ನರಿಸಿ ರಾಜಧಾನಿ ಬೆಂಗಳೂರಿಗೆ ಬಂದಾಗ ನಮಗೆ ಪರಿಚಯವಾದವರು. ಮಕ್ಕಳು ತಮ್ಮ ಕಛೇರಿಯ ಮೂಲಕ ವಿದೇಶಕ್ಕೆ ಹೋಗಿ ನಂತರದ… Read More ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ