ದಾಖಲೆಗಳು, ವಿಚಿತ್ರ ಎನಿಸಿದರೂ ಸತ್ಯ

ಯಾವುದೇ ಆಟಗಳೇ ಆಗಲಿ ಪಂದ್ಯ ಆರಂಭವಾಗಿ ಆಟಗಾರರು ಮೈದಾನದಲ್ಲಿ/ಆಖಾಡದಲ್ಲಿ ಆಡುತ್ತಾ ಹೋದಂತೆಲ್ಲಾ, ಅಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಅದನ್ನು ಮತ್ತೊಬ್ಬರು ಮತ್ತೊಂದು ದಿನ ಮುರಿಯುವುದು ಸರ್ವೇ ಸಾಮಾನ್ಯವಾಗಿದೆ. ದಾಖಲೆಗಳಿಗಾಗಿಯೇ ಯಾವ ಆಟಗಾರರೂ ಆಡುವುದಿಲ್ಲವಾದರೂ, ಅವರುಗಳು ಆಡಿದಾಗಲೆಲ್ಲಾ ದಾಖಲೆಗಳು ಆವರ ಅರಿವಿಗೆ ಬಾರದೆಯೇ ಹುಟ್ಟುಕೊಳ್ಳುತ್ತವೆ. ಅದಕ್ಕೆ ಈ ಬಾರಿಯ ಐಪಿಎಲ್ 2021 ಕೂಡಾ ಹೂರತಾಗಿಲ್ಲ. ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯದಿಂದ ಹಿಡಿದು ನೆನ್ನೆ ನಡೆದ ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದವರೆಗೂ ಈ ವರೆಗೂ… Read More ದಾಖಲೆಗಳು, ವಿಚಿತ್ರ ಎನಿಸಿದರೂ ಸತ್ಯ

ಹಲಾಲ್

ಹಿಂದೂಗಳ ಹೊಸಾ ವರ್ಷ ಯುಗಾದಿ ಹಬ್ಬ ಎಂದ ತಕ್ಷಣ ಯುಗಾದಿ ಹಬ್ಬಕ್ಕೆ ಶುಭಹಾರೈಸುತ್ತಾ ಹಾಸ್ಯಕ್ಕಾಗಿ ಕೆಲವರು ಇವತ್ತು ಬೇಳೆ🥘 ನಾಳೆ ಮೂಳೆ 🐐🐓 ಇವತ್ತು ಎಣ್ಣಿ ನೀರು ನಾಳೆ ಎಣ್ಣೆಗೆ ನೀರು🍸🥃 ಎನ್ನುವ ಸಂದೇಶ ಕಳುಹಿಸುವುದನ್ನು ಗಮನಿಸಿರಬಹುದು. . ಹೌದು ನಿಜ. ಯುಗಾದಿ ಹಬ್ಬದ ದಿನ ಒಬ್ಬಟ್ಟಿನ ಊಟ ಮಾಡಿದರೆ, ಯುಗಾದಿಯ ಮಾರನೆಯ ದಿನ ಮಾಂಸಾಹಾರವನ್ನು ಸೇವಿಸುವ ಬಹುತೇಕ ಹಿಂದೂಗಳು ಬಾಡೂಟವನ್ನು ಸೇವಿಸುವುದು ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವಂತಹ ರೂಢಿ. ಯುಗಾದಿಯ ಮಾರನೆಯ ದಿನ ವರ್ಷತೊಡಕಿನಿಂದ ಮಾಡುವ… Read More ಹಲಾಲ್

ಪಂಚಾಂಗದ ಪಜೀತಿ

ಇಂದಿನ ಆಧುನಿಕ ಯುಗದಲ್ಲಿ ಬೆರಳಿನ ತುದಿಯ ಮೊಬೈಲಿನಲ್ಲೇ ಪಂಚಾಂಗ ಸಿಗುವಂತಿದ್ದರೂ, ಯುಗಾದಿ ಹಬ್ಬಂದು ಪೂಜೆಗೆ ಪಂಚಾಂಗ ಇರಲೇ ಬೇಕು. ಪಂಚಾಂಗವನ್ನು ಕೊಂಡು ತರಲು ಸೋಮಾರಿತನ ಮಾಡಿ ಕಡೆಗೆ ಅನುಭವಿಸಿದ ರೋಚಕತೆ ಇದೋ ನಿಮಗಾಗಿ. … Read More ಪಂಚಾಂಗದ ಪಜೀತಿ

ಕೋಯಾ-ಪಾಯ

ಅರೇ ಇದೇನಿದು! ಇದು ಯಾವ ಭಾಷೆಯ ಶೀರ್ಷಿಕೆ? ಅಂತಾ ಯೋಚಿಸ್ತಿದ್ದೀರಾ? ಇದು ಸರಳ ಸಂಸ್ಕೃತ ಭಾಷೆಯ ಪದ. ಕೋಯ ಎಂದರೆ ಕಳೆದು ಹೋದದ್ದು ಮತ್ತು ಪಾಯ ಎಂದರೆ ಸಿಕ್ಕಿದ್ದು ಅಂದರೆ ಕಳೆದುಕೊಂಡದ್ದು ಸಿಕ್ಕಿದೆ ಎಂದರ್ಧ. ದೇವರ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆಯೇ ಮಾತನಾಡಿ ದೇವಾಲಯದಿಂದ ಹೊರ ಬಂದ ಕೂಡಲೇ ದೇವರ ಶಕ್ತಿಯ (ಪವಾಡ) ಅನುಭವ ಪಡೆದ ಸರಳ ಸುಂದರ ಪ್ರಸಂಗ ಇದೋ ನಿಮಗಾಗಿ. ಪ್ರತೀ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ನಮ್ಮ ವಿದ್ಯಾರಣ್ಯಪುರದ ಸನಾತನ ವೇದ ಪಾಠಶಾಲೆಯ… Read More ಕೋಯಾ-ಪಾಯ

ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಭಾರತೀಯ ಸೇನೆಗೂ ನಮ್ಮ ಕರ್ನಾಟಕದ ಕೊಡಗಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಇಂದಿಗೂ ಸಹಾ ಕೊಡಗಿನ ಬಹುತೇಕ ಕುಟುಂಬದ ಒಬ್ಬ ಸದಸ್ಯನಾದರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಸ್ವಾತಂತ್ರ್ಯ ಭಾರತದ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರೂ ಕೊಡಗಿನವರೇ. ಅವರಂತೆಯೇ ಭಾರತದ ಭೂಸೇನೆಯ ದಂಡನಾಯಕರಾಗಿದ್ದ, ಅಪ್ಪಟ ಕನ್ನಡಿಗ ಜನರಲ್  ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು ಅರ್ಥಾತ್ ಕೆ. ಎಸ್ ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದ ತಿಮ್ಮಯ್ಯ ಮತ್ತು  ಸೀತವ್ವ ದಂಪತಿಗಳ… Read More ಜನರಲ್ ಕೆ. ಎಸ್ ತಿಮ್ಮಯ್ಯ ಅವರ ಜನ್ಮದಿನಾಚರಣೆ

ಏಪ್ರಿಲ್ – 10

ನಾವೆಲ್ಲಾ ಚಿಕ್ಕವರಿದ್ದಾಗ ಏಪ್ರಿಲ್-10 ಎಂದರೆ ಏನೋ‌ ಆತಂಕ, ಭಯ, ಹಿಂದಿನ ದಿನ ರಾತ್ರಿ ಇಡೀ ನಿದ್ದೆಯೇ ಇಲ್ಲದೇ ತಳಮಳಗೊಳ್ಳುತ್ತಿದ್ದ ಆ ಅನುಭವದ ಸವಿ ನೆನಪು/ರೋಚಕತೆ ಇದೋ ನಿಮಗಾಗಿ… Read More ಏಪ್ರಿಲ್ – 10

ಕೊರೋನ ಲಸಿಕೆ ಅಭಿಯಾನ

ಕಳೆದ ವರ್ಷದ ಆರಂಭದಲ್ಲಿ ಚೀನಾದ ವುಹಾನ್ ನಗರದಲ್ಲಿ ಕಾಣಿಸಿ ಕೊಂಡ ಸಾಂಕ್ರಾಮಿಕ ಕೊರಾನಾ ವೈರಾಣು ನೋಡ ನೋಡುತ್ತಿದ್ದಂತೆಯೇ ಇಡೀ ಪ್ರಪಂಚಾದ್ಯಂತ ಆವರಿಸಿ ಅಕ್ಷರಶಃ ಜಗತ್ತನ್ನು ನಿಸ್ತೇಜವನ್ನಾಗಿಸಿದ್ದು ಈಗ ಇತಿಹಾಸ. ಕಡೆಗೂ ಈ ಮಹಾಮಾರಿಗೆ ಲಸಿಕೆಯನ್ನು ನಮ್ಮ ದೇಶದ ವಿಜ್ಞಾನಿಗಳು ಕಂಡು ಹಿಡಿಯಲು ಸಫಲರಾಗಿ ಅದು ವಿಶ್ವದ ಇತರೇ ರಾಷ್ಘ್ರಗಳ ಲಸಿಕೆಗಿಂತಲೂ ಉತ್ತಮ ಫಲಿತಾಂಶ ತೋರಿದ ಕಾರಣ ಇಂದು ನಮ್ಮ ದೇಶದಿಂದ ಅನೇಕ ರಾಷ್ಟ್ರಗಳಿಗೆ Made in India ಲಸಿಕೆಗಳು ರಫ್ತಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಕಳೆದ ಜನವರಿ… Read More ಕೊರೋನ ಲಸಿಕೆ ಅಭಿಯಾನ

ತೋಳ ಬಂತು ತೋಳ

ಸಾರಿಗೆ ಸಂಪರ್ಕ ಜನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರನ್ನು ಕರೆದೊಯ್ಯಲು ಮತ್ತು ವಸ್ತುಗಳನ್ನು ಸಾಗಿಸಲು ಸಾರಿಗೆ ವಾಹನಗಳ ಅವಶ್ಯಕತೆ ಅತ್ಯಗತ್ಯವಾಗಿ ಇದನ್ನು ಮನಗಂಡ ಸ್ವಾತ್ರಂತ್ರ್ಯಾ ನಂತರ  ಸರ್ಕಾರವೇ ನೇರವಾಗಿ ಸಾರಿಗೆ  ಸಂಸ್ಜೆಗಳನ್ನು ಅರಂಭಿಸಿ ಸುಮಾರು ವರ್ಷಗಳ ವರೆಗೂ ಅದನ್ನು ನಡೆಸಿಕೊಂಡು ಹೋಗಿತ್ತು. ಈ  ಸಾರಿಗೆ ಸಂಸ್ಥೆಯ ನೌಕರಿಗಲ್ಲರಿಗೂ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನೇ ನೀಡುತ್ತಿದ್ದರೂ. ಈ ನೌಕರ  ದುರಾಡಳಿತ ಮತ್ತು ಕದ್ದು ತಿನ್ನುವಿಕೆಯಿಂದಾಗಿ ಪ್ರತೀವರ್ಷವೂ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವಾಗಿ… Read More ತೋಳ ಬಂತು ತೋಳ

ಸಹೃದಯೀ, ಅಜಾತಶತ್ರು, ಶ್ರೀ ಕೆ. ಎನ್. ಸತ್ಯನಾರಾಯಣ ರಾವ್

ನಾನು ಚಿಕ್ಕವನಿದ್ದಾಗ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ || ಎಂಬ ಸುಭಾಷಿತವನ್ನು ಸಂಘದ ಶಾಖೆಯಲ್ಲಿ ಕಲಿಸಿಕೊಟ್ಟಿದ್ದರು. ಪರೋಪಕಾರಕ್ಕಾಗಿ ಮರಗಳು ಹಣ್ಣುಕೊಡುತ್ತವೆ, ನದಿಗಳು ಹರಿಯುತ್ತಾ ನೀರನ್ನು ಕೊಡುವುದೂ ಬೇರೆಯವರ ಉಪಯೋಗಕ್ಕಾಗಿ, ಹಸುಗಳು ಹಾಲನ್ನು ಕೊಡುವುದೂ ಸಹ ಬೇರೆಯವರಿಗಾಗಿಯೇ ಆದೇ ರೀತಿ ನಮ್ಮ ದೇಹ ಇರುವುದೂ ಸಹ ಬೇರೆಯವರಿಗೆ ಉಪಕಾರ ಮಾಡುವುದಕ್ಕಾಗಿಯೇ ಎನ್ನುವ ಅರ್ಥವಿರುವ ಆ ಶ್ಲೋಕಕ್ಕೆ ಅನ್ವರ್ಥವಾಗಿಯೇ ತಮ್ಮ ಇಡೀ ಜೀವಮಾನವನ್ನು ಸವೆಸಿದ ಹಿರಿಯ ಜೀವಿಯೊಬ್ಬರ… Read More ಸಹೃದಯೀ, ಅಜಾತಶತ್ರು, ಶ್ರೀ ಕೆ. ಎನ್. ಸತ್ಯನಾರಾಯಣ ರಾವ್