ನಕ್ಸಲರು

1960ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ದೇಶಾದ್ಯಂತ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ಹರಡ ಬೇಕೆಂಬ ಸಂಕಲ್ಪ ಮಾಡಿ ಅದನ್ನು ಕಾರ್ಯರೂಪಕ್ಕೆ ತರಲು ವಿವಿಧ ರೀತಿಯ ಯೋಜನೆ ಮಾಡುತ್ತಿರುವಾಗಲೇ ಅವರವರಲ್ಲಿಯೇ ಭಿನ್ನಾಭಿಪ್ರಾಯ ಮೂಡಿದ ಕಾರಣ ಕಮ್ಯೂನಿಷ್ಟ್ ಪಕ್ಷದವು ಎರಡು ಬಣಗಳಾಗಿ ಒಡೆದುಹೋಯಿತು. ಮೊದನೆಯ ಬಣ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ಶಕ್ತಿಯ ಮೂಲಕ ಅಧಿಕಾರಕ್ಕೆ ಬರಲು ಯೋಚಿಸಿದರೆ ಮತ್ತೊಂದು ಬಣಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಹೊಂದಿರದೇ ಗೆರಿಲ್ಲಾ ಮಾದರಿಯಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ದಂಗೆಯನ್ನು ಎಬ್ಬಿಸುವ ಮೂಲಕ ಶಕ್ತಿಯನ್ನು… Read More ನಕ್ಸಲರು

ಕುಂಭಲ್ ಘಡ್ ಭಾರತದ ಮಹಾ ಗೋಡೆ

ವಿಶ್ವದ ಅತಿ ಉದ್ದದ ಗೋಡೆ ಎಂದ ತಕ್ಷಣ ಥಟ್ ಅಂತಾ ನೆನಪಾಗೋದೇ, ಚೀನಾ ದೇಶದ ಮಹಾಗೋಡೆ. ಆದರೇ, ಅದೇ ರೀತಿಯಲ್ಲಿರುವ ಮತ್ತೊಂದು ಮಹಾನ್ ಗೋಡೆ ಚೀನಾ ಗೋಡೆಗಿಂತಲೂ ಕಡಿಮೆ ಸಮಯದಲ್ಲಿ ನಿರ್ಮಾಣವಾದ, ಇಂದಿಗೂ ಅತ್ಯಂತ ಗಟ್ಟಿ ಮುಟ್ಟಾಗಿ, ವೈಭವೋಪೇತವಾಗಿ ಮತ್ತು ವಾಸ್ತು ಶಿಲ್ಪದಲ್ಲಿ ಚೀನಾ ಗೋಡೆಗೂ ಸಡ್ಡು ಹೊಡೆಯಬಲ್ಲಂತಹ ಮತ್ತೊಂದು ಉದ್ದನೆಯ ಗೋಡೆ ನಮ್ಮ ದೇಶದಲ್ಲಿ ಎನ್ನುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಹೇಳೀ ಕೇಳಿ ರಾಜಸ್ಥಾನ ಮರುಭೂಮಿ ಮತ್ತು ಎತ್ತರದ ಪರ್ವತಗಳಿಂದ ಆವೃತವಾಗಿರುವ, ಹೆಚ್ಚು ಜನಸಂದಣಿ ಇಲ್ಲದ… Read More ಕುಂಭಲ್ ಘಡ್ ಭಾರತದ ಮಹಾ ಗೋಡೆ

ಆಪದ್ಭಾಂಧವ ಅಪ್ಪ

ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ಬಂದಿತೆಂದರೆ ಶಾಲೆಯಲ್ಲಿ ಪರೀಕ್ಷೆ ಎಲ್ಲವೂ ಮುಗಿದು ಫಲಿತಾಂಶವೂ ಬಂದು ಮುಂದಿನ ತರಗತಿಗಳು ಆರಂಭವಾಗುವವರೆಗೂ ಸುಮಾರು ಎರಡು ತಿಂಗಳುಗಳ ಕಾಲ ಬೇಸಿಗೆ ರಜೆ ಇರುತ್ತದೆ. ಈ ರಜೆಯಲ್ಲಿ ಹೊರಗೆ ಬಿಸಿಲಿನಲ್ಲಿ ಮಕ್ಕಳನ್ನು ಆಟಕ್ಕೆ ಕಳುಹಿಸಿದಲು ಭಯ ಇನ್ನು ಮಕ್ಕಳಿಗೋ ಮನೆಯಲ್ಲಿಯೇ ಕುಳಿತುಕೊಳ್ಳಲು ಬೇಜಾರು. ಹಾಗಾಗಿ ಇದಕ್ಕೆಲ್ಲವೂ ಸುಲಭ ಪರಿಹಾರವೆಂದೇ ಮಕ್ಕಳನ್ನು ದೂರದ ಅಜ್ಜಾ-ಅಜ್ಜಿಯ ಮನೆಗೆ ಕಳುಹಿಸಿ ಅಲ್ಲಿನ ಸುಂದರ ವಾತಾವರಣದಲ್ಲಿ ರಮಣೀಯ ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳು, ನದಿ, ಹಳ್ಳ ಕೊಳ್ಳಗಳು, ಹೊಲ… Read More ಆಪದ್ಭಾಂಧವ ಅಪ್ಪ

ನಂಜನಗೂಡಿನ ಹಲ್ಲುಪುಡಿ

ನಗು ಮನುಷ್ಯರ ಜೀವನದ ಅತ್ಯಂತ ಶ್ರೇಷ್ಠವಾದ ಔಷಧ ಎಂದೇ ಪರಿಗಣಿಸಲಾಗುತ್ತದೆ. ಸದಾಕಾಲವೂ ಹಸನ್ಮುಖಿಯಾಗಿರುವರು ದೀರ್ಘಕಾಲ ಆರೋಗ್ಯವಂತರಾಗಿರುತ್ತಾರಲ್ಲದೇ ಸಮಾಜದಲ್ಲಿ ಆರೋಗ್ಯಕರವಾದ ಪರಿಸರವನ್ನು ಬೆಳಸುತ್ತಾರೆ. ಇಂತಹ ನಗುವಿನ ಹಿಂದೆ ಶುದ್ಧವಾದ ಮನಸ್ಸು ಇರುತ್ತದಾದರೂ ಅಂತಹ ನಗುವನ್ನು ವ್ಯಕ್ತಪಡಿಸುವುದು ಮಾತ್ರ ಮುಖದ ಮೇಲೆ. ಹಾಗೆ ಮುಖದ ಮೇಲೆ ನಗು ವ್ಯಕ್ತವಾದಾಗ ಎಲ್ಲರಿಗೂ ಎದ್ದು ಕಾಣುವುದೇ ಹಲ್ಲುಗಳು. ಹಲ್ಲುಗಳೇ ಮನುಷ್ಯರ ಮುಖಕ್ಕೆ ಹೆಚ್ಚಿನ ಅಂದವನ್ನು ನೀಡುತ್ತದೆ ಎಂದರೂ ಆತಿಶಯೋಕ್ತಿಯೇನಲ್ಲ. ಹಾಗಾಗಿ ಸಮಾನ್ಯವಾಗಿ ಎಲ್ಲರೂ ಸಹಾ ತಮ್ಮ ಹಲ್ಲುಗಳನ್ನು ಆದಷ್ಟೂ ಶುದ್ಧವಾಗಿ ಫಳ ಫಳನ… Read More ನಂಜನಗೂಡಿನ ಹಲ್ಲುಪುಡಿ

ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ

ಆತ ದೇಶ ಕಾಯುವ ವೀರ ಯೋಧ. ತನ್ನ ಸಂಸಾರವನ್ನು ಇಲ್ಲಿ ಬಿಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿಯೇ ದೂರದ ಗಡಿಯಲ್ಲಿ ಚಳಿ ಮಳೆಯನ್ನು ಲೆಕ್ಕಿಸದೇ ತನ್ನ ಸೇವೆಯನ್ನು ಸಲ್ಲಿಸುತ್ತಾ ಕಾಲ ಕಾಲಕ್ಕೆ ತಾನು ದುಡಿಡಿದ್ದ ಹಣವನ್ನು ಕಳುಹಿಸುತ್ತಾ ಸಮಯ ಸಿಕ್ಕಾಗಲೆಲ್ಲಾ ಊರಿಗೆ ಬಂದು ಹೋಗುತ್ತಿರುತ್ತಾನೆ. ಇನ್ನು ಆತನ ಪತ್ನಿಯೂ ತಮ್ಮ ಮಕ್ಕಳಿಗೆ ಮನೆಯ ಯಜಮಾನರು ತಮ್ಮ ಜೊತೆ ಇಲ್ಲದಿರುವುದು ಗೊತ್ತೇ ಆಗದಂತೆ ಯಜಮಾನರು ಕಳುಹಿಸಿದ ಹಣದಲ್ಲಿಯೇ ಹಾಗೂ ಹೀಗೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಸಾಕಿ ಸಲಹಿ… Read More ಹುಚ್ಚು ಮದುವೆಯಲ್ಲಿ ಉಂಡವನೇ ಜಾಣ

ಕೊರಗಜ್ಜ

ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಹೇಗೆ ನಾನಾ ದೇವರುಗಳ ತೀರ್ಥಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆಯೋ ಹಾಗೆಯೇ ಅಲ್ಲಿನ ತುಳುನಾಡಿನ ಜನ ಅಷ್ಟೇ ಭೂತಾರಾಧನೆಯನ್ನೂ ನಂಬುತ್ತಾರೆ ಮತ್ತು ಅದನ್ನೇ ಬಹಳ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹಾಗಾಗಿ ಅಲ್ಲಿನ ಬಹುತೇಕರ ಮನೆಯ ಅಂಗಳದಲ್ಲಿ ಇಂದಿಗೂ ಈ ರೀತಿಯ ಅನೇಕ ಸ್ಥಳೀಯ ದೈವಗಳ ಸಣ್ಣ ಸಣ್ಣ ಗುಡಿಗಳನ್ನು ಕಾಣಬಹುದಾಗಿದೆ. ಅಂತಹ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾಗಿರುವುದೇ ಕೊರಗಜ್ಜ ಎಂಬ ದೈವ. ಇಲ್ಲಿನ ಜನರು ಈ ಕೊರಗಜ್ಜನನ್ನು ಭಾರೀ ಶ್ರದ್ದಾ, ಭಕ್ತಿಗಳಿಂದ ಪೂಜಿಸುವುದಲ್ಲದೇ,… Read More ಕೊರಗಜ್ಜ

ಹಿತಚಿಂತಕರು ಮತ್ತು ಹಿತಶತ್ರುಗಳು

ಮನುಷ್ಯ ಸಂಘ ಜೀವಿ ಮತ್ತು ಭಾವುಕ ಜೀವಿಯೂ ಹೌದು. ಹಾಗಾಗಿ ಆತ ಕಾಲ ಕಾಲಕ್ಕೆ ತನ್ನ ಮನಸ್ಸಿನಲ್ಲಾಗುವ ತುಮುಲಗಳನ್ನು ಮತ್ತು ಭಾವನೆಗಳನ್ನು ಮತ್ತೊಬ್ಬರ ಹತ್ತಿರ ಹಂಚಿಕೊಳ್ಳುವ ಮೂಲಕ ನಿರಾಳನಾಗುತ್ತಾನೆ. ಹಾಗಾಗಿಯೇ ಮನುಷ್ಯರು ಸದಾಕಾಲವೂ ಉತ್ತಮ ಗುರುಗಳು, ಸ್ನೇಹಿತರು ಮತ್ತು ಸಂಗಾತಿಯ ಅನ್ವೇಷಣೆಯಲ್ಲಿದ್ದು, ಒಮ್ಮೆ ತಮ್ಮ ಅಭಿರುಚಿಗೆ ತಕ್ಕಂತಹವರು ಸಿಕ್ಕ ಕೂಡಲೇ ತಮ್ಮ ಜೀವನದ ಗುಟ್ಟು ರಟ್ಟುಗಳನ್ನೆಲ್ಲಾ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವುದಕ್ಕೆ ಪ್ರಮುಖ ಕಾರಣ ತಮ್ಮ ಗೆಳೆಯ ಈ ಎಲ್ಲಾ ಗೌಪ್ಯತೆಯನ್ನು ಕಾಪಾಡುತ್ತಾನೆ ಮತ್ತು… Read More ಹಿತಚಿಂತಕರು ಮತ್ತು ಹಿತಶತ್ರುಗಳು

ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆಯಾಗಿದ್ದು ಈಜಿಪ್ಟ್ ದೇಶದಲ್ಲಿದೆ. ಇದು ಸುಮಾರು 162 ಕಿಮೀ ಉದ್ದವಿದ್ದು ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ 300 ಮೀ ಇದೆ. ಈ ಕಾಲುವೆ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳಿಗೆ ಪ್ರಮುಖ ಜಲಮಾರ್ಗವಾಗಿದೆ. ಇದು ಇಲ್ಲದಿದ್ದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಭೂಶಿರ ಸುತ್ತಿ… Read More ಸೂಯೆಜ್ ಕಾಲುವೆ ಮತ್ತು ಮೈಸೂರು ಸ್ಯಾಂಡಲ್

ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್

ಈ ಬಾರಿ ಹುಣ್ಣಿಮೆ ಭಾನುವಾರ ಮತ್ತು ಸೋಮವಾರ ಬಂದಿದ್ದ ಕಾರಣ ಬಹುತೇಕ ಭಾರತೀಯರು ಎರಡೂ ದಿನ ಹೋಳಿ ಹಬ್ಬದ ಆಚರಣೆಯಲ್ಲಿದ್ದ ಕಾರಣವೋ ಅಥವಾ ಇಂಗ್ಲೇಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಷ್ಟ ಪಟ್ಟು ಗೆದ್ದದ್ದರ ಸಂಭ್ರಮದಲ್ಲಿ ಮಾರ್ಚ್​ 29, 2004 ರಂದು ಅಂದರೆ ಸರಿಯಾಗಿ 17 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮುಲ್ತಾನಿನಲ್ಲಿ ಸುಲ್ತಾನನಾಗಿ ಮೆರೆದು ಭಾರತದ ಪರ ಚೊಚ್ಚಲು ತ್ರಿಶತಕವನ್ನು ಬಾರಿಸಿ, ಪಾಕೀಸ್ಥಾನಿಗಳಿಗೆ… Read More ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್