ತೈಲಬೆಲೆ ಏರಿಕೆ, ಸತ್ಯ-ಮಿಥ್ಯ

ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯವೆಂದರೆ ತೈಲಬೆಲೆಯ ಏರಿಕೆ. ಸದ್ಯದ ಪರಿಸ್ಥಿತಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 85-90ರ ಆಸುಪಾಸಿನಲ್ಲಿದ್ದು ಇನ್ನು ಕೆಲವೇ ವಾರಗಳಲ್ಲಿ ಶತಕದತ್ತ ಧಾಪುಗಾಲು ಹಾಕಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಿರೋಧ ಪಕ್ಷ ಅದರಲ್ಲೂ ಪ್ರಮುಖವಾಗಿ ಕಾಂಗ್ರೇಸ್ ಪಕ್ಷ ಇದೇ ಏನೂ ಅಚ್ಚೇ ದಿನ್? ಎನ್ನುವ ಶೀರ್ಷಿಕೆಯಲ್ಲಿ, ಭಾರತವು ಪೆಟ್ರೋಲ್ / ಡೀಸೆಲ್ / ಎಲ್ಪಿಜಿ ಬೆಲೆಗಳಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ ಎಂದು ಹೇಳುತ್ತಾ ಈ ಕೆಳಕಂಡ ಅಂಕಿ… Read More ತೈಲಬೆಲೆ ಏರಿಕೆ, ಸತ್ಯ-ಮಿಥ್ಯ

ಮಾತು ಬಲ್ಲವನಿಗೆ ಸಮಸ್ಯೆಯೇ ಇಲ್ಲ.

ರಷ್ಯಾದ ಯಹೂದಿಯೊಬ್ಬನಿಗೆ ಅಂತಿಮವಾಗಿ ತನ್ನ ತಾಯ್ನಾಡಾದ ಇಸ್ರೇಲ್‌ಗೆ ವಲಸೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಮಾಸ್ಕೋ ವಿಮಾನ ನಿಲ್ದಾಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಆತನ ಸಾಮಾನು ಸರಂಜಾಮುಗಳಲ್ಲಿ ಲೆನಿನ್ ಪ್ರತಿಮೆಯನ್ನು ಕಂಡು, ಅರೇ ಇದು ಏನು? ಎಂದು ಪ್ರಶ್ನಿಸಿದರು. ಕೂಡಲೇ ಆ ವ್ಯಕ್ತಿ, ಸರ್ ಇದು ಏನು? ಎಂಬುದು ತಪ್ಪಾದ ಪ್ರಶ್ನೆ. ಅದರ ಬದಲು ಇವರು ಯಾರು? ಎಂದು ನೀವು ಕೇಳಬೇಕಾಗಿತ್ತು ಎಂದು ಹೇಳಿ, ಇವರು ಕಾಮ್ರೇಡ್ ಲೆನಿನ್. ಸಮಾಜವಾದದ ಅಡಿಪಾಯವನ್ನು ಹಾಕಿದ ಮಹಾನ್ ವ್ಯಕ್ತಿಯಲ್ಲದೇ, ರಷ್ಯಾದ ಜನರ ಭವಿಷ್ಯ… Read More ಮಾತು ಬಲ್ಲವನಿಗೆ ಸಮಸ್ಯೆಯೇ ಇಲ್ಲ.

ಆರ್.ಟಿ.ಓ. ಆಫೀಸ್ ಅವಾಂತರ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನನ್ನ ವಾಹನ ಪರವಾನಗಿಯನ್ನು ನವೀಕರಿಸಬೇಕಿತ್ತು. ದುರಾದೃಷ್ಟವಷಾತ್ ಕರೋನಾಕ್ಕೆ ತುತ್ತಾಗಿ ಆರು ವಾರಗಳ ಕಾಲ ಮನೆಯಿಂದ ಹೊರಗೇ ಬಾರದ ಕಾರಣ, ನವೀಕರಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರವೂ ಸಹಾ ಇಂತಹ ಪರಿಸ್ಥಿತಿಯನ್ನು ಅರಿತುಕೊಂಡೇ ಪರವಾನಗಿಯ ಅವಧಿ ಮುಗಿದ್ದರೂ ನವೀಕರಿಸಲು ಆರು ತಿಂಗಳುಗಳ ಕಾಲ ಅನುಮತಿ ನೀಡಿತ್ತು. ಡಿಸಂಬರ್ ತಿಂಗಳಿನಲ್ಲಿ ಪರವಾನಗಿಯನ್ನು ನವೀಕರಿಸಲು online ಮುಖಾಂತರವೇ ಪ್ರಯತ್ನಿಸಬೇಕು ಎಂಬ ಹೊಸಾ ನಿಯಮದಂತೆ https://parivahan.gov.in/parivahan/ ವೆಬ್ ಸೈಟಿಗೆ ಹೋಗಿ ನನ್ನ ಲೈಸೆನ್ಸ್ ನಂಬರ್ ಎಂಟರ್ ಮಾಡಿದರೆ, ನನ್ನ ನಂಬರ್… Read More ಆರ್.ಟಿ.ಓ. ಆಫೀಸ್ ಅವಾಂತರ

ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ದುರ್ಗಾವಸತಿಯ ಬಡಾವಣೆಗಳನ್ನು ನಿಶ್ಚಯಿಸಿದಾಗ ಅದರ ವಿಸ್ತೀರ್ಣವನ್ನು ನೋಡಿಯೇ ತಲೆ ತಿರುರುಗುವ ಹಾಗಿತ್ತು. ನಂಜಪ್ಪ ವೃತ್ತದಿಂದ ಹಿಡಿದು ವಿದ್ಯಾರಣ್ಯಪುರದ ಮುಖ್ಯರಸ್ತೆಯ ಸಂಪೂರ್ಣ ಬಲಭಾಗ ಬಿಇಎಲ್, ಹೆಚ್.ಎಂ.ಟಿ, ಐಇಸಿಹೆಚ್ ಬಡಾವಣೆ, ಜ್ನಾನೇಶ್ವರಿ ಬಡಾವಣೆ, ವೆಂಕಟಸ್ವಾಮಪ್ಪ ಬಡಾವಣೆ, ಬಸವಸಮಿತಿ, ನರಸೀಪುರ, ದುರ್ಗಾ ಬಡಾವಣೆ, ಆಂಜನೇಯಸ್ವಾಮಿ ಬಡಾವಣೆ ಉಫ್ ಹೇಳುವುದಿರಲಿ ನೆನೆಸಿಕೊಂಡರೇ ಸಾಕು ಮೈ ಜುಮ್ಮೆನೆಸುವಷ್ಟು ವಿಸ್ತೀರ್ಣ ಹೊಂದಿದ ಪ್ರದೇಶಗಳಿಂದ ಕೂಡಿತ್ತು. ಬೈಠಕ್ಕಿಗೆ ಬಂದ ಕಾರ್ಯಕರ್ತರ ಸಂಖ್ಯೆ ನೋಡಿದಾಗ, ಇದೇನು ಸಮಸ್ಯೆಯಾಗದು ಒಂದೆರಡು… Read More ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ

ದಕ್ಷಿಣ ಭಾರತೀಯ ಪಾಕಶಾಸ್ತ್ರದಲ್ಲಿ ಟೋಮ್ಯಾಟೋ ಹಣ್ಣುಗಳಿಗೆ ಬಹಳ ಪ್ರಾಶಸ್ತ್ಯ. ಯಾವುದೇ ತರಕಾರಿಗಳೊಂದಿಗೆ ಟೋಮ್ಯಾಟೋ ಹಣ್ಣುಗಳು ಸುಲಭವಾಗಿ ಒಗ್ಗಿಕೊಂಡು ಹೋಗುತ್ತದೆ ಇಲ್ಲವೇ ಕೇವಲ ಟೋಮ್ಯಾಟೋ ಹಣ್ಣುಗಳಿಂದಲೇ, ಬಗೆ ಬಗೆಯ ಸಾರುಗಳು, ಗೊಜ್ಜುಗಳನ್ನು ತಯಾರಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಟೋಮ್ಯಾಟೋ ಬಹಳ ಸುಲಭದಲ್ಲಿ ಎಲ್ಲೆಡೆಯೂ ಸಿಗುತ್ತಿರುವ ಕಾರಣ, ಬಿಸಿ ಬಿಸಿ ಅನ್ನ, ದೋಸೆ, ಚಪಾತಿಗಳ ಜೊತೆ ನೆಂಚಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ, ರುಚಿಕರವಾದ ಮತ್ತು ಥಟ್ ಅಂತ ಮಾಡಬಹುದಾದ ಟೋಮ್ಯಾಟೋ ಹಣ್ಣಿನ ದಿಢೀರ್ ಬಿಸಿ ಉಪ್ಪಿನಕಾಯಿ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ… Read More ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ

ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಬೆಂಗಳೂರಿನ ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರಗಳ ಜೊತೆಗೆ ರುಚಿಕರವಾದ ಊಟವನ್ನು ಜನಸಾಮಾನ್ಯರಿಗೂ ಕೈ ಗೆಟುಕುವ ಬೆಲೆಯಲ್ಲಿ ಉಣಬಡಿಸುತ್ತಿದ್ದಂತಹ ಗತ ವೈಭವದ ಬೃಂದಾವನ್ ಹೋಟೆಲ್ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ಶ್ರೀಪತಿ ಪಂಡಿತರಾದ್ಯುಲು ಬಾಲಸುಬ್ರಹ್ಮಣ್ಯಂ  ಎಲ್ಲರ ಪ್ರೀತಿಯ ಎಸ್ಪಿಬಿ, ಇನ್ನೂ ಅನೇಕರಿಗೆ ಬಾಲೂ  ಅವರನ್ನು ಹೇಗೆ ಪರಿಚಯಿಸ ಬೇಕು ಎಂಬುದೇ ಬಹಳ ಕಷ್ಟಕರವಾದ ವಿಷಯ. ಗಾಯಕ, ನಟ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದ, ಮಿಮಿಕ್ರಿ ಕಲಾವಿದ, ಸೃಜನಶೀಲವ್ಯಕ್ತಿ, ಅನೇಕ ಹೊಸಾ ಪ್ರತಿಭೆಗಳಿಗೆ ಮಾರ್ಗದರ್ಶಿ ಹೀಗೆ ಹತ್ತು ಹಲವಾರು ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೂ ತಪ್ಪಾಗಲಾರದು. ಸ್ವಾತಂತ್ರ್ಯ ಪೂರ್ವ ಮದ್ರಾಸ್ ರೆಸೆಡೆನ್ಸಿ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಖ್ಯಾತ ಹರಿಕಥಾ ವಿದ್ವಾಸಂರಾಗಿದ್ದ ಶ್ರೀ  ಸಾಂಬಮೂರ್ತಿಗಳು ಮತ್ತು ಶಕುಂತಲಮ್ಮ ದಂಪತಿಗಳ… Read More ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ಹೇಳಿ ಕೇಳಿ ಥೈಲ್ಯಾಂಡ್ ದೈವದತ್ತವಾದ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ದೇಶ ಎಂದರೂ ತಪ್ಪಾಗಲಾರದು. ಭಗವಂತ ಬಹಳ ಸಮಯ ಮಾಡಿಕೊಂಡು ಒಂದೊಂದು ದ್ವೀಪಗಳನ್ನು ಸೃಷ್ಟಿ ಮಾಡಿದಂತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ ಸುಮಾರು ರಸ್ತೆಯ ಮೂಲಕ ಕ್ರಮಿಸಿದರೆ 783 ಕಿ.ಮೀ ದೂರದಲ್ಲಿರುವ ವಿಮಾನದಲ್ಲಿ ಸುಮಾರು ಒಂದು ಘಂಟೆಯಲ್ಲಿ ತಲುಪಬಹುದಾದ ಅತ್ಯಂತ ರಮಣೀಯ ದ್ವೀಪವಾದ ಕ್ರಾಬಿ ನದಿಯ ಮತ್ತು ಸಮುದ್ರದ ತಟದಲ್ಲಿರುವ ಕ್ರಾಬಿ (ಥೆಸಾಬನ್ ಮುವಾಂಗ್) ದ್ಚೀಪವನ್ನು ಸ್ವಲ್ಪ ಸುತ್ತಿ ಹಾಕಿ ಬರೋಣ. ಸುಮಾರು 60-70 ಸಾವಿರ ಜನಸಂಖ್ಯೆ ಇರುವ… Read More ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರಾಷ್ಟ್ರಕವಿ ಶ್ರೀ ರವೀಂದ್ರ ನಾಥ್ ಟ್ಯಾಗೋರ್ ಅವರು ದೇಶದ ಸ್ತುತಿಗಾಗಿ ಬರೆದಿದ್ದದ್ದಲ್ಲ ಬದಲಾಗಿ ಐದನೆಯ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿ ಬರೆದ್ದದ್ದು ಎಂಬ ವಿವಾದ ಮೊದಲಿನಿಂದಲೂ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇದ್ದೇಿ ಇರುತ್ತದೆ. ಕನ್ನಡಿಗರಿಗೆ ಮೂಲ ಗೀತೆಯನ್ನು ಕೇಳಿದಾಗ ಅಷ್ಟೊಂದು ಸರಿಯಾಗಿ ಅರ್ಥವಾಗದಿದ್ದದ್ದು ಈಗ ಕನ್ನಡದಲ್ಲಿಯೇ ಅದರ ಭಾವಾನುವಾದವನ್ನು ಕೇಳಿದಾಗ ಅಂದಿನ ವಿವಾದದಲ್ಲಿ ಬಹಳಷ್ಟು ತಿರುಳಿದೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತಿದೆ.   ಸಾಮಾನ್ಯವಾಗಿ ನಾವು ಭೂಮಿಯನ್ನು… Read More ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ