ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಬೆಂಗಳೂರಿನ ಹೃದಯಭಾಗದಲ್ಲಿರುವ ಪುರಭವನಕ್ಕೆ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಎಂಬ ಹೆಸರು ಇಡಲು ಕಾರಣವೇನು? ಆ ಕಟ್ಟಡದ ಇತಿಹಾಸ ಮತ್ತು ವೈಶಿಷ್ಟ್ಯತೆಗಳೇನು? ಆ ಕಟ್ಟಡದ ಮುಂದೆಯೇ ಪ್ರತಿಭಟನೆಗಳು ಏಕೆ ನಡೆಯುತ್ತವೆ? ಸರ್ ಪುಟ್ಟಣ್ಣ ಚೆಟ್ಟಿ ಎಂದರೆ ಯಾರು? ಅವರ ಯಶೋಗಾಧೆ ಏನು? ಎಂಬೆಲ್ಲಾ ಕುತೂಹಲಕಾರಿ ವಿಷಯಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಸಿದ್ದು ನಿಮಗೆ ವಯಸ್ಸಾಯ್ತು.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ವಿಜಯನಗರ ಜಿಲ್ಲೆಗೆ ಹೋಗಿದ್ದ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಪ್ಯಾಡಿನಲ್ಲಿ ಕಾರನ್ನು ಹತ್ತುವಾಗ ದಿಢೀರ್ ಎಂದು ಕುಸಿದು ಬಿದ್ದು ಕೆಲ ಕಾಲ ಆಂತಕವನ್ನು ಮೂಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಲ್ಲಾ ಅಧಿಕಾರವನ್ನೂ ಸವಿದಿರುವ ಸಿದ್ದರಾಮಯ್ಯನವರ ದೇಹ ಈ ಘಟನೆಯ ಮುಖಾಂತರ ತನಗೆ ವಿಶ್ರಾಂತಿ ಅವಶ್ಯಕತೆ ಎಂದು ಸ್ಪಷ್ಟವಾಗಿ ತಿಳಿಸುತ್ತಿರುವುದನ್ನು ವರುಣಾ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ತಾರೆ ಅಲ್ವೇ?
Read More ಸಿದ್ದು ನಿಮಗೆ ವಯಸ್ಸಾಯ್ತು.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಮೊನ್ನೆ ಮಂತ್ರಾಲಯದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಭಕ್ತಾದಿಗಳನ್ನು ದೇವಾಲಯದ ಪ್ರಾಕಾರದಲ್ಲಿ ಕಾಪಾಡಿ ಗಳಿಸಿಕೊಂಡಿದ್ದ ನಂಬಿಕೆಯನ್ನು ನೆನ್ನೆ ವಿಗ್ರಹ ಆರಾಧನೆಯನ್ನೇ ನಂಬದವರನ್ನು ಕರೆಸಿ ರಾಯರ ಸನ್ನಿಧಾನದಲ್ಲಿ ರಂಜಾನ್ ಹಬ್ಬವನ್ನು ಆಚರಿಸುವ ಮೂಲಕ ಹಿಂದೂಗಳ ನಂಬಿಕೆಗಳನ್ನು ಮಣ್ಣು ಪಾಲು ಮಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಸೌಹಾರ್ದತೆ ಎಂದರೆ ನಮ್ಮ ನಂಬಿಕೆಗಳ ವಿರುದ್ಧವಾಗಿ ಮತ್ತೊಂದು ಧರ್ಮದ ಆಚರಣೆಗಳನ್ನು ನಮ್ಮ ಶ್ರದ್ದೇಯ ಧಾರ್ಮಿಕ ಸ್ಥಳಗಳಲ್ಲಿ ಮಾಡುವುದು ಎಂದು ಯಾವ ಧರ್ಮ ಗ್ರಂಥದಲ್ಲಿ ಬರೆದಿದೆ? … Read More ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ಅನೇಕ ನಾಯಕರು ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ.

ಇಂದು ಬಿಜಿಪಿಯ ಬಂಡಾಯದಲ್ಲಿ ತಮ್ಮ ರಾಜಕೀಯ ಬೇಳೆ ಬೆಳಸಿಕೊಳ್ಳಲು ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್, ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಇವರನ್ನು ಕಾಲ ಕಸದಂತೆ ಕಂಡಾಗ, ಭ್ರಮನಿರಸರಾಗುವುದು ನಿಶ್ಚಿತ.… Read More ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಕೌದಿ (ದಟ್ಟ)

ನಮ್ಮ ಸುತ್ತಮುತ್ತಲಿನ ಸರ್ವೇಸಾಧಾರಣ ವಸ್ತುವೂ ಸಹಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೇಗೆ ನಮ್ಮ ಜೀವನದ ಶೈಲಿಯನ್ನು ಹೇಗೆ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಕೌದಿಯೇ ಸಾಕ್ಷಿ. ಈ ಕೌದಿ ಅಥವಾ ದಟ್ಟ ಎಂದರೆ ಏನು? ಅದು ಯಾರ ಬದುಕಿನಲ್ಲಿ ಹೇಗೆ? ಯಾವ ರೀತಿಯ ಬದಲಾವಣೇಯನ್ನು ತಂದಿತು ಎನ್ನುವ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಕೌದಿ (ದಟ್ಟ)

ಭಾರತೀಯ ವಿಜ್ಞಾನ ಸಂಸ್ಥೆ (IISc.)

ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc.)ಯನ್ನು ದೇಶದ ಖ್ಯಾತ ಕೈಗಾರಿಗೋದ್ಯಮಿಗಳಾದ ಜೆಮ್ ಷಡ್ ಜೀ ಟಾಟಾರವರು ಆರಂಭಿಸಲು ಸ್ವಾಮಿ ವಿವೇಕಾನಂದರು ಹೇಗೆ ಕಾರಣರಾದರು? ಮತ್ತು ಇಂತಹ ಮಹಾನ್ ಸಂಸ್ಥೆಗೆ ನಮ್ಮ ಮೈಸೂರು ಸಂಸ್ಥಾನದ ಕೊಡುಗೆಗಳೇನು? IISc. ಬೆಳೆದು ಬಂದ ಹಾದಿಯ ಕುರಿತಾದ ಅದ್ಭುತವಾದ ಮಾಹಿತಿಗಳು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಭಾರತೀಯ ವಿಜ್ಞಾನ ಸಂಸ್ಥೆ (IISc.)

ನೂಲಿನಂತೆ ಸೀರೆ ತಾಯಿಯಂತೆ ಮಗಳು

ತಾಯಿ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿ, ಮಗಳು ಇಂಗ್ಲೇಂಡಿನ ಪ್ರಧಾನ ಮಂತ್ರಿಯ ಪತ್ನಿಯಾಗಿ ಇಂಗ್ಲೇಂಡಿನ ದೇಶದ ಪ್ರಥಮ ಮಹಿಳೆ. ಅವರಿಬ್ಬರು ಅಷ್ಟು ದೊಡ್ಡ ಗಣ್ಯ ಮಹಿಳೆಯರಾಗಿದ್ದರೂ ಮೊನ್ನೆ ರಾಷ್ಟ್ರಪತಿಗಳ ಭವನದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅನನ್ಯ, ಅದ್ಭುತ ಮತ್ತು ಅನುಕರಣಿಯ. ಅಮ್ಮಾ ಮಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ನೂಲಿನಂತೆ ಸೀರೆ ತಾಯಿಯಂತೆ ಮಗಳು

ಬೆಂಗಳೂರು ಕರಗ

ಬೆಂಗಳೂರಿನ ಹೃದಯ ಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರು ಕರಗ

ಸಕಲಕಲಾ ವಲ್ಲಭ ಸಿ. ಆರ್. ಸತ್ಯ

ಎ.ಆರ್. ಕೃಷ್ನಶಾಸ್ತ್ರಿಗಳ ಮೊಮ್ಮ್ಗಗ, ಅಬ್ದುಲ್ ಕಲಾಂ ಅವರ ಒಡನಾಡಿ, ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ, ಹಾಸ್ಯಲೇಖಕ, ವೈಜ್ಞಾನಿಕ ಲೇಖಕ, ಸಂಗೀತಗಾರ. ಸಾಹಿತಿ, ಪರಿಸರ ಪ್ರೇಮಿ, ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ಎಂಬ ಹಾಸ್ಯಮಯ ವಿಂಡಬಣಾತ್ಮಕ ಕೃತಿಯಿಂದ ನಾಡಿದ ಮನೆಮಾತಾಗಿದ್ದ ಬಹುಮುಖ ಪ್ರತಿಭೆ ಶ್ರೀ ಸಿ.ಆರ್ ಸತ್ಯಾರವರು ಇಂದು ವಿಧಿವಶರಾಗಿದ್ದಾರೆ. ಸತ್ಯಾರವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಸ್ಥೂಲ ಪರಿಚಯ ಇದೋ ನಿಮಗಾಗಿ… Read More ಸಕಲಕಲಾ ವಲ್ಲಭ ಸಿ. ಆರ್. ಸತ್ಯ