ಬಾಳಗಂಚಿ ಚೋಮನ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ನಮ್ಮೂರು ಬಾಳಗಂಚಿ. ಸದ್ಯಕ್ಕೆ 350-500 ಮನೆಗಳು ಇದ್ದು ಸುಮಾರು ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ದೇಶಾದ್ಯಂತ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಕಾರಣ, ಸದ್ಯಕ್ಕೆ ಎರಡು ಮೂರು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು… Read More ಬಾಳಗಂಚಿ ಚೋಮನ ಹಬ್ಬ

ಹುಸ್ಕೂರು ಮದ್ದೂರಮ್ಮ ಜಾತ್ರೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಿಂದ 5-6 ಕಿಮೀ ದೂರದಲ್ಲಿರುವ ಆನೇಕಲ್ ತಾಲ್ಲೂಕಿಗೆ ಸೇರುವ ಹುಸ್ಕೂರು ಗ್ರಾಮದಲ್ಲಿ ಚೋಳ ರಾಜರು ನಿರ್ಮಿಸಿದರು ಎನ್ನಲಾದ ಚಿಕ್ಕದಾದ ಶ್ರೀ ಮದ್ದೂರಮ್ಮ ದೇವಸ್ಥಾನವಿದ್ದು, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಿಯನ್ನು… Read More ಹುಸ್ಕೂರು ಮದ್ದೂರಮ್ಮ ಜಾತ್ರೆ

ಎರಡು ಕೈ ಸೇರಿದರೆ ಮಾತ್ರವೇ ಚಪ್ಪಾಳೆ.

ಕಳೆದ ಎರಡ್ಮೂರು ತಿಂಗಳುಗಳಿಂದಲೂ ಶಾಲಾ ಕಾಲೇಜಿನ ಉಡುಪಿನ ವಿಷಯದಲ್ಲಿ ಉಡುಪಿಯಲ್ಲಿ ಸಣ್ಣದಾಗಿ ಕೆಲ ಮತಾಂಧ ಮುಸಲ್ಮಾನರು ಆರಂಭಿಸಿದ ತಿಕ್ಕಾಟ ರಾಜ್ಯಾದ್ಯಂತ ಈ ಪರಿಯಾಗಿ ಹಿಂದೂಗಳನ್ನು ಜಾಗೃತ ಗೊಳಿಸುತ್ತದೆ ಎಂಬುದರ ಅರಿವಿಲ್ಲದೇ ಅವಡು ಕಚ್ಚಿಕೊಳ್ಳುವ ಪರಿಸ್ಥಿತಿಗೆ ಬಂದು ಬೆಣೆ ತೆಗೆಯಲು ಹೋಗಿ ಬಾಲ ಸಿಕ್ಕಿಸಿಕೊಂಡ ಮಂಗನಂತಾಗಿದೆ ಅವರ ಸದ್ಯದ ಪರಿಸ್ಥಿತಿ ಎಂದರೂ ತಪ್ಪಾಗದು. 1947ರಲ್ಲಿ ಧರ್ಮಾಧಾರಿತವಾಗಿಯೇ ಈ ದೇಶ ಇಬ್ಬಗವಾಗಿ ಮುಸಲ್ಮಾನರಿಗೆ ಪೂರ್ವ ಮತ್ತು ಪಶ್ವಿಮ ಪಾಕಿಸ್ಥಾನಗಳು ಉದಯವಾಗಿ ಹಿಂದೂಗಳಿಗೆ ಹಿಂದೂಸ್ಥಾನ ಎಂಬುದಾಗಿ ಇದ್ದರೂ, ಈಶ್ವರ ಅಲ್ಲಾ ತೇರೇ… Read More ಎರಡು ಕೈ ಸೇರಿದರೆ ಮಾತ್ರವೇ ಚಪ್ಪಾಳೆ.

ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು

ನಮ್ಮ ಸನಾತನ ಧರ್ಮದಲ್ಲಿ ಮಾತೃದೇವೋಭವ, ಪಿತೃದೇವೋಭವದ ನಂತರದ ಸ್ಥಾನವನ್ನು ಆಚಾರ್ಯ ದೇವೋಭವ ಎಂದು ಗುರುಗಳಿಗೆ  ಮೀಸಲಾಗಿಟ್ಟಿದ್ದೇವೆ.  ಜನ್ಮ ನೀಡಿದವರು  ತಂದೆ-ತಾಯಿಯರಾದರೇ, ಪ್ರತಿಯೊಬ್ಬರಿಗೂ ವಿದ್ಯಾ ಬುದ್ಧಿಯನ್ನು ಕಲಿಸಿ ಅವರನ್ನು ತಿದ್ದಿ ತೀಡೀ ಸಮಾಜದಲ್ಲಿ ಇಬ್ಬ ಸಭ್ಯ ನಾಗರೀಕರನ್ನಾಗಿ ಮಾಡಿಸುವವರೇ ಗುರುಗಳು ಎಂದರೂ ತಪ್ಪಾಗದು. ಹಾಗಾಗಿ ನಮ್ಮ ಸನಾತನ ಧರ್ಮದಲ್ಲಿ ಗುರುಪರಂಪರೆ ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ನಮ್ಮ ಕಾಲಮಟ್ಟದ ಅಂತಹ ಅನೇಕ ಗುರುಗಳಲ್ಲಿ  ಕರ್ನಾಟಕದ ಅತ್ಯಂತ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಸಿದ್ದಗಂಗಾ ಮಠದ ಸ್ವಾಮಿಗಳಾಗಿದ್ದ ಭಾರತೀಯ ಆಧ್ಯಾತ್ಮಿಕ ಚಿಂತಕರೂ,… Read More ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು

ಸೌತಡ್ಕ ಶ್ರೀ ಮಹಾಗಣಪತಿ

ಸಾಮಾನ್ಯವಾಗಿ ಒಂದು ಪುರಾತನ ದೇವಸ್ಥಾನ ಎಂದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಮೂಡುವುದೇ ವಿಶಾಲವಾದ ಪ್ರದೇಶದಲ್ಲಿ ಎತ್ತರವಾದ ರಾಜಗೋಪುರವನ್ನು ದಾಟಿ ಒಳಗೆ ಹೋಗುತ್ತಿದ್ದಲ್ಲಿ ನೂರಾರು ಸುಂದರವಾಗಿ ನಿಲ್ಲಿಸಿರುವ ಕಲ್ಲುಗಳ ಕಂಬ ಅದರಲ್ಲಿ ಶಿಲ್ಪಿಯ ಕೈ ಚಳಕದಿಂದ ಮೂಡಿರುವ ವಿವಿಧ ಆಕೃತಿಗಳ ಮಧ್ಯದಲ್ಲಿರುವ ಗರ್ಭಗುಡಿ ಇರುವ ದೇವಸ್ಥಾನ. ಇನ್ನು ವಾಸ್ತುಪ್ರಕಾರ ದೇವಸ್ಥಾನವೆಂದರೆ, ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜಗೋಪುರಗಳು ಇರಲೇಬೇಕೆಂಬ ನಿಯಮವಿದೆ. ಇಲ್ಲಿನ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದರೂ ಇಂದಿಗೂ ಬಯಲು ಮಂದಿರದಲ್ಲೇ ಇರುವ ಸುಂದರ… Read More ಸೌತಡ್ಕ ಶ್ರೀ ಮಹಾಗಣಪತಿ

ಶಿರಸಿ ಮಾರಿಕಾಂಬಾ

ಕರ್ನಾಟಕದ ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ, ಶಿರಸಿಯ ಶ್ರೀ ಮಾರಿಕಾಂಬೆಯ ದರ್ಶನ ಪಡೆಯುವುದರ ಜೊತೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ವೈಭವೋಪೇತವಾಗಿ ನಡೆಯುವ ಮಾರಿ ಜಾತ್ರೆಯ ಸುಂದರ ಅನುಭವ ಮತ್ತು ಅಲ್ಲಿಯ ದೇವಾಲಯದ ಪ್ರಸಿದ್ಧ ಕೋಣ ಮತ್ತು ಆ ಜಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ಶಿರಸಿ ಮಾರಿಕಾಂಬಾ

ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಪಂಚರಥೋತ್ಸವ ಅರ್ಥಾತ್ ದೊಡ್ಡ ಜಾತ್ರೆಯ ಸಂಭ್ರಮ ಕ್ಷಣಗಳನ್ನು ಕುಳಿತಲ್ಲಿಂದಲೇ ನೋಡಿ ಶ್ರೀ ನಂಜುಂಡೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.… Read More ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ದೇವರಾಯನ ದುರ್ಗ

ಬೆಂಗಳೂರಿನ ಹತ್ತಿರವೇ ಸುಂದರವಾದ ರಮಣೀಯವಾದ ಪ್ರಕೃತಿ ತಾಣವಿರಬೇಕು. ಅದು ಪುಣ್ಯಕ್ಷೇತ್ರವೂ ಆಗಿರಬೇಕು. ಹಿರಿಯರು ಕಿರಿಯರೂ ಎಲ್ಲರೂ ಮೆಚ್ಚುವಂತಿರಬೇಕು ಎನ್ನುವ ಸುಂದರವಾದ ತಾಣಕ್ಕೆ ಅರಸುತ್ತಿದ್ದೀರೆ ಎಂದರೆ ಬೆಂಗಳೂರಿನಿಂದ ಕೇವಲ 72 km ದೂರದಲ್ಲಿರುವ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ಆರಾಮವಾಗಿ ತಲುಪಬಹುದಾದಂತಹ ಪುರಾಣ ಪ್ರಸಿದ್ಧ ಪಕೃತಿತಾಣವೇ ದೇವರಾಯನ ದುರ್ಗ ಎಂದರೆ ಅತಿಶಯೋಕ್ತಿ ಎನಿಸದು. ದೇವರಾಯನದುರ್ಗವು ತುಮಕೂರು ಜಿಲ್ಲೆಗೆ ಸೇರಿರುವ ಬೆಟ್ಟ ಗುಡ್ಡ, ಅರಣ್ಯಗಳಿಂದ ಆವೃತವಾಗಿರುವ ಹತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಒಂದು ಸುಂದರವಾದ ಗಿರಿಧಾಮವಾಗಿರುವುದಲ್ಲದೇ, ಪ್ರಕೃತಿ ಪ್ರಿಯರಿಗೆ… Read More ದೇವರಾಯನ ದುರ್ಗ

ಕಾಶೀ ಶ್ರೀ ವಿಶ್ವನಾಥ

ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಕಾಶಿ, ವಾರಣಾಸಿ, ಬನಾರಸ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಶ್ರೀಕ್ಷೇತ್ರ ಹಿಂದೂಗಳ ಆಧ್ಯಾತ್ಮ ಕೇಂದ್ರವಲ್ಲದೇ ಮೋಕ್ಷದ ಹಾದಿಯೂ ಆಗಿದೆ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದಲ್ಲದೇ ಕಾಶೀಯಲ್ಲಿ ದೇಹತ್ಯಾಗ ಮಾಡುವರಿಗೆ ಶಾಶ್ವತವಾದ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಗಂಗಾನದಿಯ ತಟದಲ್ಲಿ ೬೪ ಘಾಟ್ ಗಳಿರುವ ಈ ಶ್ರೀಕ್ಷೇತ್ರದಲ್ಲಿ ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯವಿದ್ದು ಶಿವರಾತ್ರಿಯ ಈ ಪವಿತ್ರದಿನದಂದು ಶ್ರೀಕ್ಷೇತ್ರದ ದರ್ಶನವನ್ನು ಪಡೆಯೋಣ ಬನ್ನಿ. ಕಾಶಿಯ… Read More ಕಾಶೀ ಶ್ರೀ ವಿಶ್ವನಾಥ