ಶಾರದಾ ದೇವಿ, ಕಾಶ್ಮೀರದಲ್ಲಿ ಪುನರ್ ಸ್ಥಾಪನೆ.

ಭಾರತೀಯರ ಶ್ರದ್ಧಾ ಕೇಂದ್ರವಾಗಿದ್ದ ಕಾಶ್ಮೀರದ ಶಾರದಾ ದೇವಿ ಪೀಠ, 1947ರ ದೇಶ ವಿಭಜನೆಯ ಸಮಯದಲ್ಲಿ ಪಾಕೀಸ್ಥಾನದ ಭಾಗವಾಗಿ, ಅಲ್ಲಿನ ಮತಾಂಧರ ಅಟ್ಟಹಾಸದಿಂದ ನುಚ್ಚುನೂರಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದಿಂದ ಕೂಗಳತೆ ದೂರದಲ್ಲೇ ತೀತ್ವಾಲ್ ಎಂಬ ಸ್ಥಳದಲ್ಲೇ ಹಿಂದಿದ್ದ ಶಾರದಾ ಮಂದಿರದ ತದ್ರೂಪಿನಂತಹ ಮಂದಿರ, ಶೋಭಕೃತ್ ನಾಮ ಸಂವತ್ಸರದ ಚೈತ್ರ ಶುದ್ಧ ಪ್ರತಿಪದೆಯಂದು ದೇಶದ ಗೃಹಮಂತ್ರಿಗಳಾದ ಶ್ರೀ ಅಮಿತ್ ಶಾ ಅವರಿಂದ ಉದ್ಘಾಟನೆಯಾದ ಸಂಭ್ರಮದ ರಸಕ್ಷಣಗಳು ಇದೋ ನಿಮಗಾಗಿ… Read More ಶಾರದಾ ದೇವಿ, ಕಾಶ್ಮೀರದಲ್ಲಿ ಪುನರ್ ಸ್ಥಾಪನೆ.

ವಸಂತ ಪಂಚಮಿ, ಸರಸ್ವತಿ ಪಂಚಮಿ, ಮದನ ಪಂಚಮಿ

ದೇಶಾದ್ಯಂತ ಮಾಘ ಮಾಸದ ಪಂಚಮಿಯಂದು ಆಚರಿಸಲ್ಪಡುವ ವಸಂತ ಪಂಚಮಿ ಹಬ್ಬದ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ವೈಶಿಷ್ಟ್ಯತೆಗಳೇನೂ? ಆ ಹಬ್ಬದ ಪ್ರಾಮುಖ್ಯತೆಗಳೇನು? ಆ ಹಬ್ಬವನ್ನು ಎಲ್ಲೆಲ್ಲಿ ಹೇಗೆ ಮತ್ತು ಯಾವ ರೀತಿಯಲ್ಲಿ ಆಚರಿಸುತ್ತಾರೆ? ಎಂಬೆಲ್ಲದರ ಸವಿವರಗಳು ಇದೋ ನಿಮಗಾಗಿ… Read More ವಸಂತ ಪಂಚಮಿ, ಸರಸ್ವತಿ ಪಂಚಮಿ, ಮದನ ಪಂಚಮಿ

ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ಮೈಸೂರು ಸಂಸ್ಥಾನದ ಕುಲದೇವತೆ ಮತ್ತು ಕನ್ನಡಿಗರ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿ ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಆವರು ಸ್ವಪ್ನದಲ್ಲಿ ಬಂದು ನಂತರ ಅವರ ಅಮೃತ ಹಸ್ತದಲ್ಲೇ ಏಕಶಿಲೆಯಲ್ಲಿ ದ್ವಿಮುಖಿ ಚಾಮುಂಡೇಶ್ವರಿಯಾಗಿ ವಿಶ್ವವಿಖ್ಯಾತ ಜೋಗದ ಜಲಪಾತದಲ್ಲಿ ಪ್ರತಿಷ್ಠಾಪನೆಯಾದ ಇತಿಹಾಸದ ಜೊತೆಗೆ ‍ಮೈಸೂರು ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರು ಕನ್ನಡಿಗರಿಗೆ ಹೇಗೆ ಪ್ರಾಥಃಸ್ಮರಣೀಯರಾಗುತ್ತಾರೆ ಎಂಬ ರೋಚಕ ಪ್ರಸಂಗ ಇದೋ ನಿಮಗಾಗಿ… Read More ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

ಇತ್ತೀಚೆಗೆ ಕಸಾಪ ಸಮ್ಮೇಳನದ ಪರ್ಯಾಯವಾಗಿ ಜನ ಸಾಹಿತ್ಯ ಸಮ್ಮೇಳನ ನಡೆಸಿ, ಜನಾಂಗ ದ್ವೇಷ ಅಳಿಯಲಿ ಎಂದು ಬಾಯಿಮಾತಿನಲ್ಲಿ ಹೇಳಿದ ಎಡಬಿಡಂಗಿಗಳೇ, ಅದು ಕೇವಲ ಬಾಯಿ ಮಾತಾಗಿರದೇ, ಕೃತಿಯಲ್ಲಿಯೂ ಮೂಡಿಸ ಬೇಕು. ಈ ದೇಶದ ಬಹುಸಂಖ್ಯಾತರು ವಿವಿಧತೆಯಲ್ಲಿ ಏಕತೆಯನ್ನು ತೋರಿದರೆ, ಅಲ್ಪಸಂಖ್ಯಾತರು ಮಾತ್ರಾ ಅದೇ ಏಕತೆಯನ್ನು ಧಿಕ್ಕರಿಸುತ್ತಿರುವುದರಿಂದಲೇ ಆವರಿಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿದೆ ಅಲ್ವೇ? … Read More ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

ತಿರುವಳ್ಳುವರ್

ಕನ್ನಡದಲ್ಲಿ ಸರ್ವಜ್ಞ ಕವಿಯಂತೆ ತಮಿಳಿನಲ್ಲಿ ತಿರುವಳ್ಳುವರ್ ಕವಿಯು ತಿರುಕ್ಕುರಳ್ ಎಂಬ ದ್ವಿಪದಿಗಳ ಮೂಲಕ, ಓದು ಬರಹ ತಿಳಿಯದ ಅನಕ್ಷರಸ್ಥರೂ ಜೀವನದ ಕಲೆಯ ಬಗ್ಗೆ ತಿಳಿಯುವಂತೆ ಮಾಡುವ ಮೂಲಕ ಪ್ರಸಿದ್ದಿಯಾಗಿದ್ದು ಅಂತಹ ಮಹಾನ್ ಸಾಧಕರ ಜನ್ಮದಿನದಂದು ಅವರ ಬಗ್ಗೆ ತಿಳಿಯೋಣ ಬನ್ನಿ.… Read More ತಿರುವಳ್ಳುವರ್

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಇಲ್ಲಿ ನನ್ನದೇನಿದೆ, ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತಿದ್ದ ನಿಸ್ವಾರ್ಥ ನಿಶ್ಕಲ್ಮಶರಾದ ಅಪರೂಪದ ಯೋಗಿಗಳಾಗಿದ್ದ ಶ್ರೀ ಸಿದ್ದೇಶ್ವಸ್ವಾಮಿಗಳ ವ್ಯಕ್ತಿ, ವ್ಯಕ್ತಿತ್ವದ ಜೊತೆ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಕ್ರಿಸ್ಮಸ್ ಮತ್ತು ಜಾತ್ಯಾತೀತತೆ

ಯಾರನ್ನೋ ಮೆಚ್ಚಿಸುವ ಸಲುವಾಗಿ ಅಂಧ ಪಾಶ್ಚಾತ್ಯೀಕರಣದಿಂದ ಕ್ರಿಸ್ಮಸ್ ಅಲಂಕಾರ, ಸೀಕ್ರೇಟ್ ಸಾಂಟಾ, ಹೊಸಾ ವರ್ಷಾಚರಣೆ ಎಂಬ ಅವೈಜ್ಞಾನಿಕ ಆಚರಣೆಯ ಬೂಟಾಟಿಕೆ ಸಿಕ್ಕಿಹಾಕಿ ಕೊಳ್ಳುವ ಬದಲು, ನಮ್ಮ ಹೆಮ್ಮೆಯ ಪರಂಪರೆಯನ್ನು ಅರ್ಥಮಾಡಿಕೊಂಡು ಅದನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇಂತಹ ವಿಷವರ್ತುಲದಿಂದ ನಮ್ಮ ಇಂದಿನ ಮತ್ತು ಮುಂದಿನ ಜನಾಂಗವನ್ನು  ರಕ್ಷಿಸಿಸೋಣ. ನಮ್ಮ ದೇಶ ಸಂತರ ನಾಡೇ ಹೊರತು ಸ್ಯಾಂಟಾರ ನಾಡಲ್ಲ ಅಲ್ವೇ?… Read More ಕ್ರಿಸ್ಮಸ್ ಮತ್ತು ಜಾತ್ಯಾತೀತತೆ

ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?

ಇತ್ತೀಚೆಗಂತೂ ತಮ್ಮ ಬಗ್ಗೆ ಹೇಳ್ಕೊಳ್ಳೋಕ್ಕೆ ಏನೂ ಇಲ್ಲದೇ ಹೋದಾಗಾ, ಅವರ ತಲೆಯಲ್ಲಿ ಥಟ್ ಅಂತಾ ಮೂಡಿಬರುವುದೇ ಬ್ರಾಹ್ಮಣರ ಅವಹೇಳನ. ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಬ್ರಾಹ್ಮಣರನ್ನು ಬೈಯ್ಯುವುದೇ ಒಂದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿಕೊಂಡಿರುವಾಗ ಎಲ್ಲರಲ್ಲೂ ಕಾಡುವ ಕಟ್ಟ ಕಡೆಯ ಪ್ರಶ್ನೆ ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?… Read More ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?