ತಿರುವಳ್ಳುವರ್

ಕನ್ನಡದಲ್ಲಿ ಸರ್ವಜ್ಞ ಕವಿಯಂತೆ ತಮಿಳಿನಲ್ಲಿ ತಿರುವಳ್ಳುವರ್ ಕವಿಯು ತಿರುಕ್ಕುರಳ್ ಎಂಬ ದ್ವಿಪದಿಗಳ ಮೂಲಕ, ಓದು ಬರಹ ತಿಳಿಯದ ಅನಕ್ಷರಸ್ಥರೂ ಜೀವನದ ಕಲೆಯ ಬಗ್ಗೆ ತಿಳಿಯುವಂತೆ ಮಾಡುವ ಮೂಲಕ ಪ್ರಸಿದ್ದಿಯಾಗಿದ್ದು ಅಂತಹ ಮಹಾನ್ ಸಾಧಕರ ಜನ್ಮದಿನದಂದು ಅವರ ಬಗ್ಗೆ ತಿಳಿಯೋಣ ಬನ್ನಿ.… Read More ತಿರುವಳ್ಳುವರ್

ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹೋಗ ಬಾರದು ಎಂಬ ನಿರ್ಭಂಧ ಇದ್ದಂತಹ ದಿನಗಳಲ್ಲಿಯೇ ಮೆಟ್ರಿಕ್ ವರೆಗೂ ಓದಿ, ಹೆಣ್ಣು ಮಕ್ಕಳ ಕುರಿತಾಗಿ ಮುಸ್ಲಿಮ್ಮರಲ್ಲಿದ್ದ ಧೋರಣೆಯನ್ನು ಮಹಿಳಾ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಚಿಂತನೆಯ ದೃಷ್ಟಿಯಿಂದ ಕಟುವಾಗಿ ಟೀಕಿಸುತ್ತಾ, ಅದರಲ್ಲೂ ಅರೇಬಿಯಾ ಮೂಲದ ವಹಾಬಿಸಂ ವಿರುದ್ಧ ಗಟ್ಟಿಯಾದ ಧನಿ ಎತ್ತುತ್ತಿದ್ದ ಶ್ರೀಮತಿ ಸಾರಾ ಅಬ್ಬೂಬ್ಬಕರ್ ತಮ್ಮ 86ನೇ ವಯಸ್ಸಿನಲ್ಲಿ 10.01.2023 ಮಂಗಳವಾರ ಮವಯೋಸಹಜ ಕಾರಣಗಳಿಂದ ನಿಧನರಾಗುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರೂ ತಪ್ಪಾಗದು… Read More ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಕೆ. ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

ಆರು ದಶಕಗಳ ಕಾಲ ಪತ್ರಕರ್ತರಾಗಿ ಪತ್ರಿಕಾಗೋಷ್ಠಿಗಳಿಗೆ ಪೂರ್ಣ ತಯಾರಿ ಮಾಡಿಕೊಂಡು ಸೂಕ್ತ ಪ್ರಶ್ನೆಗಳ ಮೂಲಕ ರಾಜಕಾರಣಿಗಳನ್ನು ಪೇಚಿಗೆ ಸಿಲುಕಿಸುತ್ತಿದ್ದ ಮತ್ತು ಪೂರ್ವಗ್ರಹವಿಲ್ಲದೇ ವಸ್ತುನಿಷ್ಠ ವರದಿಯನ್ನು ಪ್ರಕಟಿಸುವ ಮೂಲಕ ಸರ್ಕಾರವನ್ನು ಸರಿದಾರಿಗೆ ತರುತ್ತಿದ್ದ ಕೆ. ಸತ್ಯನಾರಾಯಣ (ಸತ್ಯ) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕೆ. ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಇಲ್ಲಿ ನನ್ನದೇನಿದೆ, ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತಿದ್ದ ನಿಸ್ವಾರ್ಥ ನಿಶ್ಕಲ್ಮಶರಾದ ಅಪರೂಪದ ಯೋಗಿಗಳಾಗಿದ್ದ ಶ್ರೀ ಸಿದ್ದೇಶ್ವಸ್ವಾಮಿಗಳ ವ್ಯಕ್ತಿ, ವ್ಯಕ್ತಿತ್ವದ ಜೊತೆ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಬ್ರೆಜಿಲ್ಲಿನ ಸಾಮಾನ್ಯ ಕಪ್ಪು ಜನರ ಹುಡುಗ, ತನ್ನ ಅಮೋಘವಾದ ಆಟದಿಂದಾಗಿ ತನ್ನ ದೇಶ ಬ್ರಿಜಿಲ್ಲಿಗೆ ಮೂರು ಬಾರಿ ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ವಿಶ್ವವಿಖ್ಯಾತನಾಗಿದ್ದ ಪುಟ್ಬಾಲ್ ಆಟಗಾರ ಪೀಲೆ ನೆನ್ನೆ ಸಂಜೆ ನಿಧನರಾಗಿರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ. ಪೀಲೆ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಪತ್ರಕರ್ತರೊಬ್ಬರು ಅಚಾನಕ್ ಆಗಿ ಅಪರೂಪ/ಅನುರೂಪದ ರಾಜಕಾರಣಿಯಾಗಿ, ಹಿರಿಯ ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಅಂತಿಮವಾಗಿ ದೇಶ ಕಂಡ ಶ್ರೇಷ್ಥ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆಯ ಜೊತೆಗೆ ಅವರ ಕುರಿತಾದ ವಿಶೇಷವಾದ ಮಾಹಿತಿಗಳು ಇದೋ ನಿಮಗಾಗಿ… Read More ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ಗವಾಸ್ಕರ್ ಅವರ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ತಮ್ಮದೇ ಆದ ಅಪೂರ್ವ ರೀತಿಯಾದ ಹೊಡೀ ಬಡೀ ಶೈಲಿಯ ಬ್ಯಾಟಿಂಗ್ ನಿಂದ ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗನ್ನು ತಂದು ಕೊಡುವ ಮೂಲಕ ಇಂದಿಗೂ ಸಹಾ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕ್ರಿಕೆಟ್ ಜಗತ್ತಿನ ಏಳು ಬೀಳುಗಳ ಸುಂದವಾದ ಇಣುಕು ನೋಟ ಇದೋ ನಿಮಗಾಗಿ… Read More ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ

ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು

ನಾನು ದೇವನು ಅಲ್ಲಾ ದೇವ ಮಾನವನೂ ಅಲ್ಲಾ ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಎಂದು ಹೇಳುತ್ತಲೇ ಲಕ್ಷಾಂತರ ಭಕ್ತರನ್ನು ಹೊಂದಿದ್ದಂತಹ ಕಡೂರು ತಾಲೂಕಿನ ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ಬಗ್ಗೆ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿದುಕೊಳ್ಳೋಣ… Read More ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು