ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ

ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಇತ್ತೀಚೆಗೆ ಕರ್ನಾಟಕ ಸರ್ಕಾರ ಮರಾಠಿ ಪ್ರಾಧಿಕಾರವನ್ನು ಸ್ಥಾಪಿಸಿದ್ದರ ವಿರುದ್ಧವಾಗಿ ಕೆಲವು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿ ಕನ್ನಡಿಗರಲ್ಲಿ ಭಾಷಾ ಕಿಚ್ಚನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ಸೊಲ್ಲಾಪುರದ ಮರಾಠಿ ಶಿಕ್ಷಕ ರಂಜಿತ್ ಸಿಂಹ ಡಿಸ್ಲೆ ಎಂಬ ಶಿಕ್ಷಕನ ಕನ್ನಡ ಭಾಷಾ ಕಲಿಸುವಿಕೆಗಾಗಿ ಜಾಗತಿಕ ಶಿಕ್ಷಕರ ಪ್ರಶಸ್ತಿಯ ಜೊತೆಗೆ 1 ಮಿಲಿಯನ್ ಅಮೇರಿಕನ್ ಡಾಲರ್ (7ಕೋಟಿ 38 ಲಕ್ಷಗಳು)ಗಳನ್ನು ಗಳಿಸಿದ ಅಧ್ಭುತವಾದ ಮತ್ತು ಆಷ್ಟೇ ಪ್ರೇರಣಾದಾಯಕವಾದ ರೋಚಕ ಕಥೆ ಇದೋ ನಿಮಗಾಗಿ 1947ರಲ್ಲಿ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ… Read More ರಂಜಿತ್ ಸಿಂಹ ಡಿಸ್ಲೆ ಮರಾಠಿ ಶಿಕ್ಷಕನ ಕನ್ನಡ ಸಾಧನೆ

ಮಸಾಲೆಗಳ ರಾಜ ಎಂಡಿಹೆಚ್ ಧರಂಪಾಲ್ ಗುಲಾಟಿ

ಪ್ರಪಂಚಾದ್ಯಂತ ನಾನಾ ಕಾರಣಗಳಿಂದಾಗಿ ಹರಡಿರುವ ಭಾರತೀಯರು ಉಳಿದೆಲ್ಲಾ ವಿಷಯಗಳಲ್ಲೂ ಅಲ್ಲಿಯ ಸ್ಥಳೀಯತನಕ್ಕೆ ಒಗ್ಗಿಕೊಂಡರೂ, ಊಟದ ವಿಷಯದಲ್ಲಿ ಮಾತ್ರಾ, ಇನ್ನೂ ಭಾರತೀಯತೆಯನ್ನು ಬಿಟ್ಟಿಲ್ಲ ಎಂದರೆ ತಪ್ಪಾಗಲಾರದು. ಪಿಜ್ಜಾ, ಪಾಸ್ತ ಬರ್ಗರ್ ಎಷ್ಟೇ ತಿಂದರೂ ಉತ್ತರ ಭಾರತೀಯರಾದರೆ ರೊಟ್ಟಿ ದಾಲ್ ಇನ್ನು ದಕ್ಷಿಣ ಭಾರತೀಯರಾದರೇ ಅನ್ನಾ ಸಾರು ಮೊಸರನ್ನ ತಿಂದರೇನೇ ಅವರಿಗೆ ಒಂದು ರೀತಿಯ ಸಂತೃಪ್ತಿ. ಹಾಗಾಗಿಯೇ ಭಾರತದಿಂದ ವಿದೇಶಕ್ಕೆ ಹೋಗುವ ಬಹುತೇಕರು ತಮ್ಮ ಚೀಲದಲ್ಲಿ ಭಾರತೀಯ ಸಾಂಬಾರು ಪುಡಿಗಳನ್ನು ತೆಗೆದುಕೊಂಡೇ ಹೋಗುತ್ತಿದ್ದರು. ಆ ಮೂಲಕ ಅಮ್ಮನ ಕೈರುಚಿಯನ್ನು ವಿದೇಶದಲ್ಲೂ… Read More ಮಸಾಲೆಗಳ ರಾಜ ಎಂಡಿಹೆಚ್ ಧರಂಪಾಲ್ ಗುಲಾಟಿ

ದೈವ ಸಂಕಲ್ಪ

ಈಗಾಗಲೇ ಹತ್ತು ಹಲವಾರು ಬಾರಿ ಬಾರಿ ತಿಳಿಸಿರುವಂತೆ ಬೆಂಗಳೂರಿನ ವಾಸಿಯಾಗಿದ್ದರೂ ನಮ್ಮೂರು ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣದ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರ ಜನರು ವಾಸಿಸುವ ಕೃಷಿಪ್ರಧಾನವಾದ ಗ್ರಾಮವಾದರೂ, ನಮ್ಮೂರಿನಲ್ಲಿರುವ ದೇವಾಲಯಗಳ ಸಂಖ್ಯೆ ಹತ್ತಕ್ಕೂ ಹೆಚ್ಚು. ನಮ್ಮೂರ ಗ್ರಾಮದೇವತೆಯ ಹಬ್ಬ ಪ್ರತೀ ವರ್ಷ ಯುಗಾದಿ ಕಳೆದು ಹದಿನೈದು ದಿನಗಳ ನಂತರ ಬರುವ ಗುರುವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಮೂರುವಾರಗಳ ಕಾಲ ಅದ್ದೂರಿಯಾಗಿ ನೂರಾರು ವರ್ಷಗಳಿಂದ ಸಂಭ್ರಮ ಸಡಗರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದುರಾದೃಷ್ಟವಷಾತ್ ಈ ಬಾರೀ ಕೋವಿಡ್ ಮಹಾಮಾರಿಯ ಕಾರಣದಿಂದಾಗಿ… Read More ದೈವ ಸಂಕಲ್ಪ

ಕ್ರಾಂತಿಕಾರಿ ಖುದಿರಾಮ್ ಬೋಸ್

ನಮ್ಮ ದೇಶಕ್ಕೆ ಸ್ವಾತಂತ್ರ ಬಂದಿದ್ದು, ಕೆಲವರ ಉಪವಾಸ ಸತ್ಯಾಗ್ರಹದಿಂದ ಎಂದು ನಂಬಿಸುವವರಿಗೆ, ಭಾರತಮಾತೆಯ ಚರಣಾರವಿಂದಗಳಿಗೆ ತನ್ನ 18 ನೇ ವಯಸ್ಸಿನ 8 ನೇ ತಿಂಗಳ 8 ನೇ ದಿನದಂದು ತನ್ನ ಪ್ರಾಣವನ್ನು ಅರ್ಪಿಸಿದ ಶ್ರೀ ಖುದಿರಾಮ್ ಬೋಸ್ ರಂತಹ ಲಕ್ಷಾಂತರ ವೀರಾಗ್ರಣಿಗಳ ತ್ಯಾಗ ಮತ್ತು ಬಲಿದಾನಗಳ ನೆನಪೇ ಇಲ್ಲದಿರುವುದು ಈ ದೇಶದ ದುರಂತವೇ ಸರಿ. … Read More ಕ್ರಾಂತಿಕಾರಿ ಖುದಿರಾಮ್ ಬೋಸ್

ಅನ್ನದಾತ ಸುಖೀ ಭವ

ನಾವು ಪ್ರತೀ ದಿನ ಊಟ ಮಾಡುವ ಮೊದಲು ತಾಯಿ ಅನ್ನಪೂರ್ಣೆಯನ್ನು ನೆನಸಿಕೊಂಡು, ಊಟ ಮುಗಿದ ನಂತರ ಅನ್ನದಾತೋ ಸುಖೀ ಭವ ಎಂದು ಹೇಳಿಯೇ ಊಟ ಮುಗಿಸುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಹೇಳೀ ಕೇಳಿ ನಮ್ಮ ದೇಶ ಕೃಷಿ ಆದಾರಿತವಾದ ದೇಶ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ದೇಶದ ಜನರಿಗೆ ಕನಿಷ್ಟ ಪಕ್ಷ ಎರಡು ಹೊತ್ತಿನ ಊಟವಾದರೂ ನೆಮ್ಮದಿಯಾಗಿ ಸಿಗುವಂತೆ ಮಾಡುತ್ತಿರುವ ಅನ್ನದಾತ ರೈತನಿಗೆ ಎಲ್ಲರೂ ಕೃತಜ್ಞಾರಾಗಿರಲೇ ಬೇಕು. ಇದನ್ನೇ ಅತ್ಯಂತ ಮನೋಜ್ಞವಾಗಿ ಕವಿಗಳಾದ ಸತ್ಯಾರ್ಥಿ ಚನ್ನಬಸಪ್ಪ… Read More ಅನ್ನದಾತ ಸುಖೀ ಭವ

1 ರೂಪಾಯಿಗೆ ಹೊಟ್ಟೆ ತುಂಬಾ ಊಟ

ಅರೇ ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ತರಕಾರಿಗಳ ಬೆಲೆ ಎಲ್ಲವೂ ಗಗನಕ್ಕೇರಿರುವಾಗ ಇದೇನಿದು 1 ರೂಪಾಯಿಗೆ ಹೊಟ್ಟೆ ತುಂಬಾ ಊಟಾನಾ? ಅದೂ ಈಗಿನ ಕಾಲದಲ್ಲಿ? ಸರ್ಕಾರವೇ ನಡೆಸುವ ಇಂದಿರಾ ಕ್ಯಾಂಟೀನ್ ನಲ್ಲಿಯೇ ಪ್ಲೇಟ್ ಊಟ ಒಂದಕ್ಕೆ 10 ರೂಪಾಯಿಗಳು ಇರುವಾಗ, ಕೇವಲ 1 ರೂಪಾಯಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೇ ಅಂತಾ ನಂಬುವುದು ಸ್ವಲ್ಪ ಕಷ್ಟವೇ ಅದರೂ ಇದು ದೂರದ ದೆಹಲಿಯಲ್ಲಿ ನಿತ್ಯ ಸತ್ಯವಾದ ಸಂಗತಿಯಾಗಿದೆ. ದೆಹಲಿಯ ಭೂಟೊ ವಾಲಿ ಗಲ್ಲಿಯಲ್ಲಿರುವ ನಂಗ್ಲೋಯಿ ಅವರ… Read More 1 ರೂಪಾಯಿಗೆ ಹೊಟ್ಟೆ ತುಂಬಾ ಊಟ

ಎಚ್.ಆರ್.ಗೋಪಾಲಕೃಷ್ಣ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ

ಕ್ರಿಕೆಟ್ ಆನ್ನೋದು ಭಾರತ ದೇಶದಲ್ಲಿ ಒಂದು ರೀತಿಯ ಧರ್ಮವೇ ಆಗಿ ಹೋಗಿದೆ. ಇತರೇ ವಿಷಯಗಳಲ್ಲಿ ವಿಶ್ವಗುರುವಾಗುವುದರಲ್ಲಿ ಮುನ್ನುಗ್ಗುತಿರುವ ಭಾರತ, ಕ್ರಿಕೆಟ್ಟಿನಲ್ಲಿ ಭಾರತ ಈಗಾಗಾಲೇ ವಿಶ್ವಗುರುವಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಇನ್ನು ಭಾರತೀಯ ಕ್ರಿಕೆಟ್ಟಿಗೆ ಕರ್ನಾಟಕದ ಕೊಡುಗೆ ಅನನ್ಯ ಮತ್ತು ಅವರ್ಣನೀಯ. ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯ್ಯದ್ ಕಿರ್ಮಾನಿ, ರಾಹುಲ್ ದ್ರಾವಿಡ್, ಕೆ.ಎಲ್. ರಾಹುಲ್ ರಂತಹ ಅತ್ಯದ್ಭುತ ದಾಂಡಿಗರಾದರೇ, ಬಿ.ಎಸ್. ಚಂದ್ರಶೇಖರ್, ಪ್ರಸನ್ನ, ಅನಿಲ್ ಕುಂಬ್ಲೇ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ರಂತಹ ಉತೃಕ್ಷ್ಟ ಎಸೆತಗಾರನ್ನು ನೀಡಿದೆಯಲ್ಲದೇ, ಒಂದು… Read More ಎಚ್.ಆರ್.ಗೋಪಾಲಕೃಷ್ಣ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ

ನಮ್ಮನೆ, 1000 “ಸಂಭ್ರಮ”

ಎಲ್ಲರ ಜೀವನದಲ್ಲಿ ಹದಿನೆಂಟು ಎನ್ನುವುದು ಒಂದು ಪ್ರಮುಖ ಘಟ್ಟ. ಹದಿನೆಂಟಕ್ಕೆ ಹದಿಹರೆಯ ಎನ್ನುತ್ತೇವೆ. ಹೆಣ್ಣು ಮಕ್ಕಳಿಗಂತೂ ವಯಸ್ಸು ಹದಿನೆಂಟಾಗುತ್ತಿದ್ದಂತೆಯೇ ಅಪ್ಪಾ ಅಮ್ಮಂದಿರು ಮದುವೆ ಮಾಡಲು ಸಿದ್ಧರಾಗುತ್ತಾರೆ. ಸರ್ಕಾರ ಗಂಡು ಹೆಣ್ಣು ಎಂಬ ತಾರತಮ್ಯವಿಲ್ಲದೇ ಹದಿನೆಂಟು ವರ್ಷ ದಾಟಿದವರಿಗೆ ವಾಹನಗಳನ್ನು ಚಲಾಯಿಸುವ ಪರವಾನಗಿ ನೀಡುವುದರ ಜೊತೆಗೆ ಮತದಾನದ ಹಕ್ಕನ್ನೂ ನೀಡಿ ದೇಶವನ್ನೇ ಚಲಾಯಿಸುವ ಜವಾಬ್ಧಾರಿಯನ್ನು ನೀಡಿದೆ. ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ, ಇಂದಿಗೆ ಸರಿಯಾಗಿ ನಮ್ಮ ಮನೆಗೆ ಹದಿನೇಳು ತುಂಬಿ ಹದಿನೆಂಟು ವರ್ಷಗಳಾಗುತ್ತಿದೆ. ಈಗಿನಂತೆ ಆಗ ಮನೆ ಕಟ್ಟಿಸುವುದು… Read More ನಮ್ಮನೆ, 1000 “ಸಂಭ್ರಮ”